ತಂದೆಯವರ ಸ್ಮರಣಾರ್ಥ ಶಾಲೆಗೆ ದ್ವಾರ ಬಾಗಿಲ ನಿರ್ಮಾಣ: ಗುರುರಾಜ ಶ್ಲಾಘನೆ
Gururaja praises construction of school gate in memory of father
ದೇವರಹಿಪ್ಪರಗಿ 17: ಶಾಲೆಗೆ ಕಾಂಪೌಂಡ್ ವ್ಯವಸ್ಥೆ ಇದ್ದರೂ ದ್ವಾರ ಬಾಗಿಲು ಮಾತ್ರ ಸುವ್ಯವಸ್ಥೆಯಲ್ಲಿ ಇಲ್ಲದಿರುವುದರಿಂದ ತಂದೆಯವರ ಸ್ಮರಣಾರ್ಥ ಶಾಲೆಯ ದ್ವಾರ ಬಾಗಿಲ ನಿರ್ಮಾಣ ಮಾಡಿದ ಮಾಜಿ ಗ್ರಾ.ಪಂ ಅಧ್ಯಕ್ಷರಾದ ಸುರೇಶ ಖೀರು ರಾಠೋಡ ಅವರ ಕಾರ್ಯ ಶ್ಲಾಘನೀಯ ಎಂದು ಗ್ರಾ.ಪಂ ಅಧ್ಯಕ್ಷರ ಪ್ರತಿನಿಧಿ ಹಾಗೂ ಯುವ ಮುಖಂಡರಾದ ಗುರುರಾಜ ಆಕಳವಾಡಿ ಹೇಳಿದರು.
ತಾಲ್ಲೂಕಿನ ಪಡಗಾನೂರ ತಾಂಡಾ ಗ್ರಾಮದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ದ್ವಾರ ಬಾಗಿಲನ್ನು ದಿ.ಖೀರು ಅಚ್ಚು ರಾಠೋಡ ಅವರ ಸ್ಮರಣಾರ್ಥಕವಾಗಿ ಅವರ ಚಿರಂಜೀವಿಯಾದ ಮಾಜಿ ಗ್ರಾ.ಪಂ ಅಧ್ಯಕ್ಷರಾದ ಸುರೇಶ ಖೀರು ರಾಠೋಡ ಅವರು ನಿರ್ಮಾಣ ಮಾಡಿದ ಮುಖ್ಯ ದ್ವಾರ ಬಾಗಿಲು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,ದಿ.ತಂದೆಯವರ ಹೆಸರನ್ನು ಅಜರಾಮರಾಗಿ ಉಳಿಯಲು, ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಮತ್ತು ತಾನು ಕಲೆತ ಶಾಲೆಯ ಅಭಿವೃದ್ಧಿಗಾಗಿ ಶ್ರಮವಹಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಮುಖಂಡರುಗಳಾದ ಸುಭಾಶ್ ಹೊಸಟ್ಟಿ, ಸಿದ್ದು ಬೆಳ್ಳಿ, ಶ್ರೀಕಾಂತ ರಾಠೋಡ, ಬಾಬು ರಾಠೋಡ, ಎಸ್.ಪಿ. ಇಂಗಳೇಶ್ವರ, ಅಶೋಕ್ಯ ರಾಠೋಡ, ಗಣಪತಿ ರಾಠೋಡ, ಅಶೋಕ ಚವ್ಹಾಣ, ರವಿ ರಾಠೋಡ, ಗುಂಡು ರಾಠೋಡ,ಜಾನು ಸಾಗರ, ಬಾಬು.ಅ.ರಾಠೋಡ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 