ಗುರುರಾಜ ಹೂಗಾರ ಹುಟ್ಟುಹಬ್ಬ: ಸನ್ಮಾನ ಕಾರ್ಯಕ್ರಮ

ಗುರುರಾಜ ಹೂಗಾರ ಹುಟ್ಟುಹಬ್ಬ: ಸನ್ಮಾನ ಕಾರ್ಯಕ್ರಮ Gururaja Flower Gardener's birthday: Honorary program

ಲೋಕದರ್ಶನ ವರದಿ 

ಹುಬ್ಬಳ್ಳಿ   18: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಹೋಟೆಲ್ ಲೀಲಾವತಿ ಪ್ಯಾಲೇಸ್‌ನಲ್ಲಿ ಸರಳ ಸಮಾರಂಭ ನಡೆಯಿತು.  

ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಕ್ರಿಯಾಶೀಲ ಪತ್ರಕರ್ತರು ಹಾಗೂ “ಸಂಜೆ ಮಾಧ್ಯಮ” ಮತ್ತು “ಇಂದು ಮುಂಜಾನೆ” ದಿನಪತ್ರಿಕೆಗಳ ಸಂಪಾದಕರಾದ ಗುರುರಾಜ ಹೂಗಾರ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಸಂಸ್ಥೆಗಳ ವತಿಯಿಂದ ಅವರಿಗೆ ಶಾಲು ಹೊದಿಸಿ, ಮಾಲಾರೆ​‍್ಣ ಮಾಡಿ ಶುಭಾಶಯಗಳನ್ನು ಕೋರಲಾಯಿತು.  

ಇದೇ ಸಂದರ್ಭದಲ್ಲಿ ಹೋಟೆಲ್ ಉದ್ಯಮಿ ರಾಜೇಂದ್ರ ಶೆಟ್ಟಿ ಅವರು ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸಹ ಸನ್ಮಾನಿಸಲಾಯಿತು. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೀಡಿದ ಧೀಮಂತ ಪ್ರಶಸ್ತಿಗೂ ಅವರು ಪಾತ್ರರಾಗಿದ್ದಾರೆ.