ಲೋಕದರ್ಶನ ವರದಿ
ಗದಗ 01: ಭಾರತೀಯ ಸಂಸ್ಕೃತಿ ಬಹಳ ಪ್ರಾಚೀನವಾದದ್ದು. ಎಲ್ಲರನ್ನು ಪ್ರೀತಿಸುವ ಸಂಸ್ಕೃತಿ ನಮ್ಮದು. ನಮ್ಮಲ್ಲಿ ಚಾವರ್ಾಕರು ಇದ್ದಾರೆ, ವೈದಿಕ, ಶೈವ, ವೈಷ್ಣವ, ಬೇರೆ-ಬೇರೆ ಪಂಥಗಳು ಚಾಲ್ತಿಯಲ್ಲಿ ಇರುವುದು ಮಾತ್ರವಲ್ಲ ಶಂಕರಾಚಾರ್ಯರು, ಮಧ್ವಾಚಾರ್ಯರ್ಯರು ಈ ರೀತಿ ಅನೇಕ ಮಹಾನ್ ಪುರುಷರನ್ನು ಹೊಂದಿದ ದೇಶ ನಮ್ಮದು. ಒಟ್ಟಾರೆ ಹೇಳುವುದಾದರೆ ಜ್ಞಾನ ಮತ್ತು ಯೋಗ ನಮ್ಮ ದೇಶದ ಕೊಡುಗೆ. ಈ ಹಿನ್ನೆಲೆಯಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯ ಮಾಡುವ ಕಾರ್ಯ ಬಹಳ ಮುಖ್ಯ ಸಮಾಜದಲ್ಲಿ ತದ್ವಿರುದ್ಧವಾಗಿ ನಡೆಯುವ ಚಿತ್ರವನ್ನು ವಚನದ ಮೂಲಕ ವಣರ್ಿಸಿ ಹಕ್ಕಿಗಳೆಲ್ಲಾ ಗೂಡಿಗೆ ಬರುವಂತೆ ಸರ್ವ ಜನತೆ ಆತ್ಮನ ಕಡೆಗೆ ಬರಬೇಕಾಗುತ್ತದೆ. ಪರಮಾತ್ಮನ ಕಡೆಗೆ ಬರಬೇಕಾಗುತ್ತದೆ ಎಂದು ಈಶ್ವರೀಯ ವಿಶ್ವ ವಿದ್ಯಾಲಯ ನಡೆಸಿದ ಗುರುಪೌಣರ್ಿಮಾ ಕಾರ್ಯಕ್ರಮದಲ್ಲಿ ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿಯವರು ಮಾತನಾಡಿದರು. ನೂರು ವರ್ಷದ ಇತ್ತೀಚಿಗೆ ಈಶ್ವರೀಯ ವಿಶ್ವ ವಿದ್ಯಾಲಯ ಮಹಿಳೆಯರನ್ನೇ ಮುಂದಿಟ್ಟು ಮಹಿಳೆಯರಿಂದಲೇ ಸಮಾಜವನ್ನು ಸುಧಾರಿಸುವ ವಿಶಿಷ್ಟವಾದ ಶ್ರೇಷ್ಠ ಕಾರ್ಯಮಾಡುತ್ತಿದೆ. ಈಶ್ವರೀಯ ವಿಶ್ವ ವಿದ್ಯಾಲಯದ ಸಮಪರ್ಿತ ಅಕ್ಕಂದಿರ ತ್ಯಾಗ, ಸೇವೆಯ ಬಗ್ಗೆ ಶ್ಲಾಘಿಸಿದರು. ಅವರ ಪ್ರೀತಿ, ಕರುಣೆ, ಸ್ನೇಹ, ಸೌಜನ್ಯತೆ, ತಮ್ಮ ಸಂಪರ್ಕದಲ್ಲಿ ಬಂದ ಎಲ್ಲರಿಗೂ ಪರಮಾತ್ಮನ ಜ್ಞಾನ ಮತ್ತು ಧ್ಯಾನದ ಮಹತ್ವ ತಿಳಿಸುವ ಇವರ ಕೆಲಸ ಅದ್ಬುತ ಮತ್ತು ರೋಮಾಂಚನಕಾರಿ. ಅದು ಈ ಭಾಗದ ಪುಣ್ಯ. ಪ್ರಶಾಂತವಾದ ಸರೋವರಕ್ಕೆ ಕಲ್ಲೇಸೆದರೆ ಉತ್ಪನ್ನವಾಗುವ ಅಲೆಗಳು ಸರೋವರದ ಮೂಲೆ ಮೂಲೆಗೂ ತಲುಪುತ್ತವೆ ಅದೇ ರೀತಿ ಶಬ್ದ ತರಂಗ ಹಾಗೂ ದೃಶ್ಯ ತರಂಗಗಳು ವಾತಾವರಣದಲ್ಲಿ ಇವೆ. ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಎಲ್ಲರೂ ಒಟ್ಟಾಗಿ ಮೆಡಿಟೇಶನ್ ಮಾಡುವುದರಿಂದ ಶಾಂತಿಯ ತರಂಗಗಳು ಹರಡುತ್ತವೆ. ಇದರಿಂದ ಮನಸ್ಸು ಪ್ರಶಾಂತವಾಗುತ್ತದೆ. ಇದು ಮನಸ್ಸಿಗೂ ಒಳ್ಳೆಯದು, ಅರೋಗ್ಯಕ್ಕೂ ಒಳ್ಳೆಯದು ಮತ್ತು ಸಮಾಜಕ್ಕೂ ಒಳ್ಳೆಯದು. ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಹೆಣ್ಣು ಮಕ್ಕಳು ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಉತ್ತಮ ಚಾರಿತ್ರ್ಯವಂತರಾಗಿ, ಮಯರ್ಾದಿತ ಜೀವನ ಇಟ್ಟುಕೊಂಡಿದ್ದಾರೆ. ತಮ್ಮ ಶ್ರೇಷ್ಠ ನಡತೆಯ ಮೂಲಕ ಪರಿಣಾಮ ಬೀರುತ್ತಾರೆ ಎಂದು ಬ್ರಹ್ಮಾಕುಮಾರಿಯರನ್ನು ಶ್ಲಾಘಿಸಿದರು. ಕುವೆಂಪುರವರ ಭಾಷಣದ ಸಾಲು "ಆತ್ಮಜ್ಞಾನವಿಲ್ಲದ ವಿದ್ಯೆ ರಾಮನಿಲ್ಲದ ಅಯೋದ್ಯೆ ಆತ್ಮ ಜ್ಞಾನದ ತರಂಗಗಳು ವೈಜ್ಞಾನಿಕವಾದ ಸತ್ಯವಾಗಿದೆ. ಗುರು ಎಂದರೆ ಅರಿವು, ನಾಲೇಜ್ಡ್. ನಿನ್ನನ್ನು ನೀನು ಅರಿತುಕೊಳ್ಳು 'ಅರಿವೇ ಗುರು' ಅಂತಮರ್ುಖಿಯಾಗಿರಿ, ಆತ್ಮಾವಲೋಕನ ಮಾಡಿಕೊಳ್ಳಿರಿ ಎಂದು ಆಶೀರ್ವಚನ ನೀಡಿದರು.
ಸ್ಥಳೀಯ ಸೇವಾ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಮಾತನಾಡುತ್ತಾ ನಮ್ಮ ದೇಶದ ಎಲ್ಲಾ ಹಬ್ಬಗಳು ಒಳ್ಳೆಯ ಮೌಲ್ಯಗಳನ್ನು ಹುಟ್ಟುಹಾಕಿ ನಡೆಸಿಕೊಂಡು ಬಂದ ಆಚರಣೆಯಾಗಿದೆ. ಗುರು ಎಂದರೆ ಅಂಧಕಾರ ಹೋಗಲಾಡಿಸುವವರು. ದೇವರ ಬಗ್ಗೆ ಇರುವ ಅನೇಕ ಬಿನ್ನಾಭಿಪ್ರಾಯ ದೂರಮಾಡಿ ಒಬ್ಬ ಪರಮಾತ್ಮನ ಬಳಿ ಎಲ್ಲರನ್ನೂ ಕರೆದೊಯ್ಯುವವರು. ಬಂಧನದಲ್ಲಿ ಸಿಕ್ಕಿಹಾಕಿಕೊಂಡವರಿಗೆ ಮುಕ್ತಿ ಕೊಡುವವನೆ ಗುರು. ಇಂತಹ ಜವಾಬ್ದಾರಿಯ ಸ್ಥಾನದಲ್ಲಿರುವ ತೋಂಟದ ಪೂಜ್ಯ ಸಿದ್ಧಲಿಂಗ ಸ್ವಾಮೀಜಿಯವರನ್ನು ಗೌರವಿಸಿ ಸನ್ಮಾನಿಸಿದರು. ಜೊತೆಗೆ ಶಿವಧ್ಯಾನದಿಂದ ಮಾನಸಿಕ ಶಾಂತಿ, ಶಾರೀರಿಕ ಆರೋಗ್ಯ, ಸಶಕ್ತ ಸಮಾಜವನ್ನು ಕಟ್ಟಲು ಸಾಧ್ಯವಿದೆ. ಸಿಟ್ಟು ಬಂದಾಗ ಮನಸ್ಸಿನಲ್ಲಿ ನಕಾರಾತ್ಮಕ ಸಂಕಲ್ಪಗಳಿರಬಹುದು, ಒತ್ತಡ ತುಂಬಿದ ಇಷರ್ೇ ದ್ವೇಷ ತುಂಬಿದ ಸಂಕಲ್ಪಗಳು ಇರುತ್ತವೆ ಆ ಕ್ರೋಧದ ಸಂದರ್ಭದಲ್ಲಿ ಶರೀರದ ಮೇಲೆ ದುಷ್ಪರಿಣಾಮವಾಗಿ ರಕ್ತದ ಒತ್ತಡ, ಉಸಿರಾಟದ ಕ್ರೀಯೆ, ಎಂಡೋಕ್ರೈನ್ ಸಿಸ್ಟ್ಮ್, ಡೈಜಸ್ಟಿವ್ ಸಿಸ್ಟ್ಮ್, ಎಲ್ಲವೂ ಹೆಚ್ಚು ಕಡಿಮೆ ಆಗುತ್ತದೆ. ಇಷ್ಟೆ ಮಾತ್ರವಲ್ಲ ಮನೆ, ಕುಟುಂಬದಲ್ಲಿ ಅಸ್ಥವ್ಯಸ್ಥವಾಗುತ್ತದೆ. ಸಿಟ್ಟು ಮಾಡುವ ಅದೇ ಮನಸ್ಸನ್ನು ಶಾಂತಗೊಳಿಸಿದರೆ ಆತ್ಮ ಚಿಂತನೆ ಮತ್ತು ಶಿವಧ್ಯಾನಕ್ಕೆ ತೊಡಗಿಸಿದರೆ ಮನಸ್ಸು ಶಾಂತವಾಗುತ್ತದೆ. ಶರೀರದ ಮೇಲೆಯೂ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಆ ಶಾಂತಿಯ ಪ್ರಕಂಪನಗಳು ಮನೆಯಲ್ಲಿ, ಕುಟುಂಬದಲ್ಲಿ ಹರಡಿ ಮನೆಯೂ ಶಾಂತವಾಗುತ್ತದೆ. ಸಮಾಜದ ಮೇಲೂ ಒಳ್ಳೆಯ ಪರಿಣಾಮ ಬೀರುತ್ತದೆ ಎಂದು ಎಲ್ಲರಿಗೂ ಶಾಂತಿಯ ಲೋಕದ ಅನುಭವ ಮಾಡಿಸಿದರು. ಈ ಕಾರ್ಯಕ್ರಮದಲ್ಲಿ ಗೋವಿಂದರಾಜ ಕುಷ್ಟಗಿ, ಶಶಿಧರ ಪಟ್ಟಣಶೆಟ್ಟಿ, ವರದರಾಜ ಹೆಬಸೂರ ಮುಂತಾದ ಗಣ್ಯ ವ್ಯಾಪರಸ್ಥರು ಭಾಗವಹಿಸಿದ್ದರು.