ಜೀವನದ ಬದುಕಿನ ಸಾಧನೆಗೆ ಗುರು ದಾರಿ ದೀಪ: ಮಾಸ್ತಾಮ್ಮನವರ
Guru is the guiding light for success in life: Mastamma
ಯರಗಟ್ಟಿ, 09 : ಜೀವನದಲ್ಲಿ ಉನ್ನತಸ್ಥಾನಮಾನ ಗಳಿಸಲು ಗುರುಗಳ ಮಾರ್ಗದರ್ಶನ ಮುಖ್ಯ, ಜೀವನದ ಬದುಕಿನ ಸಾಧನೆಗೆ ಗುರು ದಾರಿ ದೀಪ ಎಂದು ವಿಶ್ರಾಂತ ಪ್ರಧಾನ ಶಿಕ್ಷಕ ಡಿ.ಎನ್.ಮಾಸ್ತಾಮ್ಮನವರ ಹೇಳಿದರು.ಸಮೀಪದ ಹೊಸೂರ ಗ್ರಾಮದ ಎಸ್.ಎನ್.ವಿ.ವಿ.ಎಸ್.ಸಂಸ್ಥೆಯ 2004-05ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಮರಡಿಬಸವೇಶ್ವರ ಸಭಾಭವನದಲ್ಲಿ ರವಿವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿ, ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯವಾಗಲು ಉತ್ತಮ ಶಿಕ್ಷಕರ ಅಗತ್ಯವಿದೆ ಎಂದರು.
ಅಂಗನವಾಡಿ ಶಿಕ್ಷಕಿಯರು ಮಕ್ಕಳಲ್ಲಿರುವ ಪ್ರಾಥಮಿಕ ಹಂತದ ಭಯವನ್ನು ಹೋಗಲಾಡಿಸಿ ಶಿಕ್ಷಣಕ್ಕೆ ತಯಾರು ಮಾಡುವ ಉನ್ನತಸೇವೆನೀಡುತ್ತಾರೆ. ಶಾಲಾ ಶಿಕ್ಷಕರು ಮಕ್ಕಳಿಗೆ ತಾಯಿಯ ಪ್ರೀತಿ ನೀಡಿ ಸಾಕಿಸಲಹುತ್ತಾರೆ ಎಂದರು.ಗುರುವಂದನಾ ಕಾರ್ಯಕ್ರಮದಲ್ಲಿ 2004-05 ನೇ ಸಾಲಿನ ವಿಧ್ಯಾರ್ಥಿಗಳಿಗೆ ಭೊದನೆ ಮಾಡಿದ್ದ ವಿಜ್ಞಾನ ಶಿಕ್ಷಕ ಎಫ್.ಎಸ್. ಸಿದ್ದನಗೌಡರ ಮಾತನಾಡಿ, ಭಾರತ ಗುರುಪರಂಪರೆಯ ದೇಶ, ಗುರುಗಳಿಗೆ ಇದ್ದಷ್ಟು ಗೌರವ ಯಾವುದೆ ಉನ್ನತವಾದ ಹುದ್ದೆಗೂ ಇಲ್ಲ. ಗುರುಗಳು ನಮ್ಮ ಕಣ್ಣಿಗೆ ಕಾಣುವ ಮಾತೃದೇವರು. ಶಿಕ್ಷಣದ ಜೋತೆಗೆರಾಷ್ಟ್ರನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ತಾವು ಮಾಡುವ ಕೈಂಕರ್ಯವೇ ದೊಡ್ಡ ಪುರಸ್ಕಾರ. ವಿದ್ಯಾರ್ಜನೆ ಮಾಡಿ 20ವರ್ಷಗಳ ನಂತರ ಕಲಿಸಿದ ಗುರುಗಳನ್ನು ನೆನಪಿಸಿ ಸತ್ಕರಿಸಿದ ವಿದ್ಯಾರ್ಥಿಗಳ ಕಾರ್ಯ ಉತ್ತಮ ಶಿಕ್ಷಕರಿಗೆ ಸಂದ ಗೌರವವಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ ಇಂದಿನ ಕಾಲದ ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕವಾಗಿದ್ದು ಸಮಾನತೆಯ ಸಹಬಾಳ್ವೆಯ ಕಳಂಕ ರಹಿತ ಸಮಾಜ ನಿರ್ಮಾಣಕ್ಕೆ ಅನಿಯಾಗಲಿದೆ ಎಂದರು.
ಕಾರ್ಯಕ್ರಮದ ಮುಂಚೆ ಎಲ್ಲಾ ಶಿಕ್ಷಕರು ವರ್ಗಭೊದನೆ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ 20ವರ್ಷದ ಹಿಂದಿನ ವಿದ್ಯಾರ್ಥಿ ಜೀವನ ನೆನೆದು ಕಲಿತ ಶಾಲೆಯ ಹಳೆಯ ನೆನಪು ಮೆಲಕು ಹಾಕಿದರು. ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಡಿ.ಎನ್.ಉಪಾಧ್ಯಾಯ, ಜಿ.ಎಸ್.ಬೋಳೆತ್ತಿನ, ಈರಣ್ಣ ಬೆಂಡಿಗೇರಿ, ರವಿ ವಕ್ಕುಂದ, ರವಿ ಕೊಲಕಾರ, ಶಿಕ್ಷಕಿಯರಾದ ರತ್ನಾ ಮುಗಬಸವ ರೇಖಾ ಹಿರೆಮಠ, ಹೊಂಗಲಮಠ, ಕಂಬಾರ ಸತ್ಕರಿಸಲಾಯಿತು.ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಉಮೇಶ ಮೆಳವೆಂಕಿ, ಮೂಗಪ್ಪ ಹುದಲಿ, ವಿನಯ ಬೆಂಡಿಗೇರಿ, ಸೋಮು ವಿವೇಕಿ, ಸೋಮಪ್ಪ ಸಂಗೋಳ್ಳಿ, ಮಹಾಂತೇಶ ಪೆಂಟೆದ, ರವಿ ಬ್ಯಾಳಿ, ಉಮಾ ಹುದಲಿ, ಸವಿತಾ ಮಸಗುಪ್ಪಿ, ರೇಣುಕಾ ಮತ್ತಿಕೊಪ್ಪ, ರಾಧಾ ಹುಡೇದ, ಶ್ರೀದೇವಿ ಹುಂಬಿ, ಲಕ್ಷ್ಮೀ ಸಂಗೋಳ್ಳಿ, ಶಕುಂತಲಾ ಪಾಟೀಲ, ಶೋಭಾ ಇಂಗಳಗಿ ಶೈಲಾ ಇಂಗಳಗಿ, ಯಲ್ಲವ್ವ ಗುಳನ್ನವರ ಸೇರಿದಂತೆ ನುರಾರು ವಿದ್ಯಾರ್ಥಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 