ಜ್ಞಾನಸೃಷ್ಠಿಗೆ ಕಾರಣಕರ್ತ ಗುರು
Guru is the cause of knowledge creation.
ಹಾವೇರಿ, 07: ಭಾರತೀಯ ಪರಂಪರೆಯಲ್ಲಿ ಗುರುಶಿಷ್ಯರ ಸಂಬಂಧ ಪವಿತ್ರವಾಗಿದೆ. ಜ್ಞಾನ ಸೃಷ್ಠಿಗೆ ಕಾರಣಕರ್ತನಾದವನೇ ಗುರು ಎಂದು ಪ್ರಾಧ್ಯಾಪಕಿ-ಸಾಹಿತಿ ಡಾ. ಪುಷ್ಪಾವತಿ ಶೆಲವಡಿಮಠ ಹೇಳಿದರು.
ಅವರು ನಗರದ ಪ್ರತಿಷ್ಠಿತ ಗುದ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನ ಹಾಗೂ ಶಿಕ್ಷಕರ ದಿನಾಚರಣೆಯ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು.
ಅಜ್ಞಾನ, ಆಲಸ್ಯ, ಅರಿಷಡ್ವರ್ಗಗಳನ್ನು ನಾಶಮಾಡುವವ ಗುರು ಬ್ರಹ್ಮ ವಿಷ್ಣು ಮಹೇಶ್ವರರನ್ನು ಏಕಕಾಲಕ್ಕೆ ಪ್ರತಿನಿಧಿಸುತ್ತಾನೆ. ಹಾಗಾಗಿ ಗುರುವಿನ ಸ್ಥಾನ ಮಹತ್ವಪೂರ್ಣವಾದದ್ದು. ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬಿತ್ತಿ ಅವರನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿ, ವ್ಯಕ್ತಿತ್ವ ರೂಪಿಸುವುದರಲ್ಲಿ ಗುರುವಿನ ಕಾರ್ಯ ಶ್ರೇಷ್ಠವಾಗಿದೆ. ವಿದ್ಯಾರ್ಥಿಗಳು ತಾವು ಕಲಿತ ಸಂಸ್ಥೆಯನ್ನು, ಕಲಿಸಿದ ಗುರುವನ್ನು ಮರೆಯದೆ ಗೌರವಿಸುವುದು ನಮ್ಮ ಸಂಸ್ಕೃತಿ. ವಿದ್ಯಾಲಯವೆಂಬ ದೇಹಾಲಯದಲ್ಲಿ ಶಿಕ್ಷಕರು ಹೃದಯವಿದ್ದಂತೆ ವಿದ್ಯಾರ್ಥಿಗಳು ರಕ್ತ ಕಣವಿದ್ದಂತೆ, ರಕ್ತ ಕಣಗಳನ್ನು ಒಟ್ಟುಗೂಡಿಸಿ ಮುನ್ನುಗ್ಗುವಂತೆ ಮಾಡುವ ಕೆಲಸ ಹೃದಯದ್ದು. ಅಂದರೆ ಶಿಕ್ಷಕರದ್ದು. ಅಕ್ಷರ ಪಾಠ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳ ಮನೋಮಂದಿರದಲ್ಲಿ ಜ್ಞಾನದೀಪ ಬೆಳಗುವಂತಾಗಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಜೆ. ಆರ್ ಶಿಂಧೆ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರವಂತರಾಗಿ ಬದುಕಿದಾಗ ಮಾತ್ರ ಉತ್ತಮ ವ್ಯಕ್ತ್ತಿಗಳಾಗಲು ಸಾಧ್ಯ. ನಿರಂತರ ಅಧ್ಯಯನದಿಂದ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗುರುವಂದನಾ ಕಾರ್ಯಕ್ರಮ ನೆರವೆರಿಸಲಾಯಿತು. ವಿದ್ಯಾರ್ಥಿಗಳಾದ ಅಮೃತಾಜಂಗರ್, ಸಿಂಚನಾ ಪಲ್ಮರಿ, ಪವಿತ್ರಾಕಮ್ಮಾರ ಶಿಕ್ಷಕರ ಕುರಿತು ಅನಿಸಿಕೆ ಹಂಚಿಕೊಂಡರು. ಪ್ರೊ. ಸಿ. ಎಫ್. ಬಾಳೇಶ್ವರಮಠ, ಪ್ರಶಾಂತ ಕೋರಿಶೆಟ್ಟರ, ನಾಗರಾಜ ಮುಚ್ಚಟ್ಟಿ, ಮಾತನಾಡಿದರು, ಪ್ರೊ. ಎಮ್. ಎಸ್. ಬೆಂಡಿಗೇರಿ, ಅನಿತಾ ಉಗರಗೋಳ, ಕಾವ್ಯಾ ತಿಳವಳ್ಳಿ, ಶಿವರಾಜ್ ಮಂಟೂರ, ಬಸವರಾಜೇಶ್ವರಿ ಜೆ. ಕೆ. ಅವಿಷ್ಕಾರಶ್ಮಿ ಸವಣೂರ, ವಿಶ್ವಾ ಬಳಲಕೊಪ್ಪ, ಉತ್ತಮ ಕಾಂತೆ, ಗದಗಯ್ಯ ಹಿರೇಮಠ ಉಪಸ್ಥಿತರಿದ್ದರು. ಸಮಷ್ಠಿ ರಿತ್ತಿ ಹಾಗೂ ಧನ್ಯಶ್ರಿ ಪ್ರಾರ್ಥಿಸಿದರು ಅಂಜನಾ ಹಕ್ಕಿ ಸ್ವಾಗತಿಸಿದರು. ಅಕ್ಷತಾ ಹಿರೇಮಠ ಪರಿಚಯಿಸಿದರು. ಸಿದ್ಧೇಶ್ವರ ಹುಣಸಿಕಟ್ಟಿಮಠ ನಿರೂಪಿಸಿದರು. ಡಾ. ಎಮ್. ವಿ. ಸಾತೇನಳ್ಳಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 