ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸುವ ಕಾರ‌್ಯ ಶ್ಲಾಘನೀಯ: ಸರನ್ನೋಬತ್
Guru Vandana program and friendship conference program: Hukkeri News
ಹಿಡಕಲ್ ಡ್ಯಾಂ 31: ವಿದ್ಯೆ ಕಲಿಸಿದ ಗುರುಗಳನ್ನು ಸನ್ಮಾನಿಸಿ ಗೌರವ ಸಮರೆ್ಣ ಮಾಡುವ ಹಳೆಯ ವಿದ್ಯಾರ್ಥಿಗಳ ಗೌರವ ಸೇವೆಯ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಎಚ್.ಡಿ.ಪಿ. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ.ಆರ್.ಸರನ್ನೋಬತ್ ಹೇಳಿದರು.
ಅವರು ರವಿವಾರ ಇತ್ತೀಚೆಗೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಹಿಡಕಲ್ ಡ್ಯಾಮಿನ ಯಮಕನಮರಡಿ ಸಿ.ಇ ಸೊಸೈಟಿಯ ಎಚ್.ಡಿ.ಪಿ. ಪ್ರೌಢಶಾಲೆಯ 2004-05 ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಅಜ್ಞಾನದಿಂದ ಜ್ಞಾನದ ಮಾರ್ಗವನ್ನು ತೋರಿಸುವ ಗುರುಗಳನ್ನು ಗೌರವಿಸುವ ಕಾರ್ಯ ಪ್ರಾಚೀನ ಕಾಲದಿಂದಲೂ ನಡೆಯುತ್ತಾ ಬಂದಿದೆ ಈ ಶಾಲೆಯಲ್ಲಿ ನುರಿತ ಶಿಕ್ಷಕರು ಇದ್ದು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಒಳಗೊಂಡಿರುವ ಏಕೈಕ ಶಾಲೆಯಾಗಿದೆ ಹಾಗೂ ಇಡೀ ರಾಜ್ಯದಲ್ಲಿ ಹಳೆಯ ವಿದ್ಯಾರ್ಥಿಗಳೆಲ್ಲರೂ ಕೂಡಿ ಅತಿ ಹೆಚ್ಚು ಗುರುವಂದನಾ ಕಾರ್ಯಕ್ರಮಗಳು ಜರುಗಿದ ಕೀರ್ತಿಗೆ ಈ ಶಾಲೆಯು ಮಾತ್ರವಾಗಿದೆ ಎಂದು ಬಿ.ಆರ್.ಸರನ್ನೋಬತ್ ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಆರ್. ಬಿ ತಿಮ್ಮಾಪುರ ಮಾತನಾಡಿ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜದ ಆಸ್ತಿಗಳಾಗಿ ಬೆಳೆದಿದ್ದಾರೆ. ಹಳೆಯ ವಿದ್ಯಾರ್ಥಿಗಳ ಜ್ಞಾನ ಭೌತಿಕವಾಗಿ ಬೆಳೆದು ಸಮಾಜಕ್ಕೆ ಗುರುವಿನ. ಮಹಿಮೆಯನ್ನು ಎತ್ತಿ ತೋರಿಸಿದ್ದಾರೆ. ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿದ ಶಿಕ್ಷಕರು ಗುರು ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಸಾರ್ಥಕವೆನಿಸಿದೆ ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಎಸ್.ಡಿ.ಮುರಗೋಡ, ಶಿಕ್ಷಕ ಜೆ.ಎಸ್.ಕರೆನ್ನವರ ಮಾತನಾಡಿದರು. ಆರ್.ಆರ್.ನಾಡಗೌಡರ, ಎಸ್.ಬಿ.ಪತ್ತಾರ, ವ್ಹಿ.ಎಫ್. ಕ್ಷೀರಸಾಗರ, ಆಯ್.ಎಸ್.ಬೆಟಗೇರಿ, ಶಿಕ್ಷಕ ಇ.ಪಿ.ಮಾಸ್ತಿ, ಬೋಧಕೇತರ ಸಿಬ್ಬಂದಿ ದುಂಡಪ್ಪ ತಳವಾರ, ಶಂಕರ ಎಡ್ನಾಯಿಕ, ದೇಮಣ್ಣಾ ತಳವಾರ, ಶಶಿಧರ ಲಕ್ಕಿಹಾಳ ಹಳೇಯ ವಿದ್ಯಾರ್ಥಿ ಶಿವಶಾಂತ ಮಗದುಮ್ಮ, ಈರಣ್ಣಾ ಪಾಟೀಲ, ರವಿ ತೆಲಸಂಗ, ಸಮೀರ ಲಕ್ಷ್ಮೇಶ್ವರ, ಚೇತನ ವೆಲ್ಗೀಮ್, ಈರಣ್ಣಾ ಜೊಂಡ, ಅಕ್ಷತಾ ಉದೋಶಿ, ಜಯಶ್ರೀ ಮಾವಿನಕಟ್ಟಿ, ಮಹಾಲಕ್ಷ್ಮೀ ಹಲಕರ್ಣಿ, ವಿದ್ಯಾ ಖನಗಾವಿ, ಸಂತೋಷಿಮಾತಾ, ಭಾರತಿ ಬೆಣ್ಣಿ, ಹಾಗೂ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಮೀರ ಲಕ್ಷ್ಮೇಶ್ವರ ಹಾಗೂ ಮಹಾಲಕ್ಷ್ಮೀ ಹಲಕರ್ಣಿ ಸ್ವಾಗತಿಸಿದರು. ಸುನೀತ ಮೂಡಲಗಿ, ವಿದ್ಯಾಶ್ರೀ ನಿರ್ವಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಕ್ಷತಾ ಉದೋಶಿ, ಜಯಶ್ರೀ ಮಾವೀನಕಟ್ಟಿ, ಗುರುಗಳ ಪರಿಚಯ ಮಾಡಿದರು. ಹಳೆಯ ವಿದ್ಯಾರ್ಥಿಗಳಾದ ಸಂತೋಶಿ ಮಾತಾ, ಗೌರವ್ವ ಬಾಗೇವಾಡಿ, ಅಕ್ಷತಾ, ಲಕ್ಷ್ಮಣ, ಸುನೀತ ಮೂಡಲಗಿ, ಸುರೇಶ ಪೂಜೇರಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹರೀಶ ಕುಲಕರ್ಣಿ, ಹಾಗೂ ಅಮರ ಶಿಂಗೇ ಅವರ ಗಾಯನ ಮನಸೂರೆಗೊಂಡಿತು. ಸುನೀತಾ ದೇಸಾಯಿ ನಿರೂಪಿಸಿದರು. ವಿಠ್ಠಲ ಘಡಕರಿ, ವಿದ್ಯಾ ಖನಗಾಂವಿ ವಂದಿಸಿದರು. ಎಲ್ಲ ವಿದ್ಯಾರ್ಥಿಗಳು ತಾವು 20 ವರ್ಷದ ನಂತರ ಮತ್ತೇ ತಾವು ಕಲಿತ ಶಾಲೆೆಯಲ್ಲಿ ಸೇರಿದ್ದಕ್ಕಾಗಿ ತುಂಬಾ ಸಂತಸಪಟ್ಟರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 