ಬಿ.ಕೆ.ಮಾಡೆಲ್ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ
Guru Vandana from B.K. Model alumni
ಬೆಳಗಾವಿ 23: ನಗರದ ಬಿ.ಕೆ. ಮಾಡೆಲ್ ಪ್ರೌಢಶಾಲೆಯು 100 ವರ್ಷಗಳನ್ನು ಪೂರೈಸಿದ್ದರ ಅಂಗವಾಗಿ ಜರುಗಿದ ಶತಮಾನೋತ್ಸವದಲ್ಲಿ 1992ನೇ ಸಾಲಿನ ಕನ್ನಡ ಮಾಧ್ಯಮದ ಬಿ.ಕೆ ಮಾಡೆಲ್ ಮತ್ತು ಉಷಾತಾಯಿ ಗೋಗಟೆ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳು ಕಲಿಸಿದ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮವನ್ನು ರವಿವಾರ ಶಾಲೆಯ ಸಭಾಗ್ರಹದಲ್ಲಿ ಹಮ್ಮಿಕೊಂಡಿದ್ದರು.
ನಿವೃತ್ತ ಶಿಕ್ಷಕ ಜಿ ಆರ್ ಜೋಶಿ, ಜಿ.ಬಿ ಕುಲಕರ್ಣಿ, ಉಮೇಶ ಕುಲಕರಣಿ, ಕೆ.ಎಲ್ ಮಜುಕರ್, ಎ.ಎಸ್. ಬಾಗೇವಾಡಿ, ಸುಲಭಾ ಒಡೆಯರ್ (ಜೋಶಿ) ಹಾಗೂ ಎಲ್.ಎಸ್. ಕುಲಕರಣಿ (ಮುರನಾಳ) ಅವರನ್ನು ಗೌರವಿಸಿ ಸತ್ಕರಿಸಲಾಯಿತು.
ಬಹು ಸಂಖ್ಯೆಯಲ್ಲಿ ಸೇರಿದ್ದ ಹಳೆಯ ವಿದ್ಯಾರ್ಥಿಗಳೆಲ್ಲರೂ ತಾವು ಶಾಲಾ ಜೀವನದಲ್ಲಿ ಆಡಿ ಪಾಡಿ ಹಾಡಿ ನಲಿದು ಕೂಡಿ ಕಳೆದ ದಿನಗಳನ್ನು ನೆನಪಿಸಿಕೊಂಡು ಗುರುಗಳಿಗೆ ಧನ್ಯತೆಯನ್ನು ಅನುಭವಿಸಿದರು, ಒಟ್ಟಾರೆ ಗುರು ಶಿಷ್ಯರ ಪ್ರಾಚೀನ ಪರಂಪರೆಯನ್ನು ಮತ್ತೊಮ್ಮೆ ನೆನಪಿಸಿತು. ಇದೇ ಸಂದರ್ಭದಲ್ಲಿ 1992ನೇ ಸಾಲಿನ ವಿದ್ಯಾರ್ಥಿಗಳು ಸಂಗ್ರಹಿಸಿದ 2,66,000ರೂ.ಗಳನ್ನು ಶಾಲೆಯ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ಅಧ್ಯಕ್ಷರಾದ ಅವಿನಾಶ ಪೋದ್ದಾರರಿಗೆ ಸಲ್ಲಿಸಿದರು. ಕಾರ್ಯಕ್ರಮದ ಮುಂದಾಳತ್ವವನ್ನು ಹಳೆಯ ವಿದ್ಯಾರ್ಥಿ ಪ್ರಮೋದ ಮೂಲಂಗಿ ವಹಿಸಿದ್ದರು. ಸಂತೋಷ ಜೋಶಿ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 