ಇಂಡಿ ತಾಲೂಕಿನ ವಿದ್ಯಾರ್ಥಿಗಳಿಂದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ
Guru Vandana and friendship gathering program by students of Indi Taluk
ಲೋಕದರ್ಶನ ವರದಿ
ವಿಜಯಪುರ 31: ಜಿಲ್ಲೆ ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಖಒ ಬಿರಾದಾರ ಮಾಧ್ಯಮಿಕ ವಿಭಾಗ ಹಾಗೂ ಪದವಿ ಪೂರ್ವ ಕಾಲೇಜಿನ, 2002 ರಿಂದ 2005ನೇ ಸಾಲಿನ ಹೈ ಸ್ಕೂಲ್ ವಿಧ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಂದ, ವಿಜಯಪುರ ನಗರದ ಪ್ರತಿಷ್ಠಿತ ಸ್ಫೂರ್ತಿ ರೆಸಾರ್ಟ್ ನಲ್ಲಿ, ಗುರುವಂದನ ಕಾರ್ಯಕ್ರಮ ಅದ್ದೂರಿಯಾಗಿ 29.03.2026ರಂದು ಜರುಗಿತು, ಪೂರ್ವ ಭಾವಿಯಾಗಿ ಎಲ್ಲ ಸ್ನೇಹಿತರನ್ನು ಒಂದು ವಾಟ್ಸಾಪ್ ಗ್ರೂಪ್ ಮಾಡುವ ಮುಖಾಂತರ ಎಲ್ಲ ಸ್ನೇಹಿತರನ್ನು ಒಟ್ಟು ಗುಡಿಸಿ ಎಲ್ಲರ ಅಭಿಪ್ರಾಯ ಪಡೆದು, ಕಾರ್ಯಕ್ರಮ ವನ್ನು ನಿಗದಿ ಪಡಿಸಿದ ದಿನಾಂಕದಂದು ಮಾಡಲಾಯಿತು,
ಈ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬರಲು ಅನೇಕ ಜನ ವಿಧ್ಯಾರ್ಥಿ ವಿದ್ಯಾರ್ಥಿನಿಯರು ಶ್ರಮ ಪಟ್ಟಿದ್ದಾರೆ, ತಮ್ಮ ಅಮೂಲ್ಯ ವಾದ ಸಮಯವನ್ನು ಇದಕ್ಕೆ ಮಿಸಲಿಟ್ಟಿದ್ದಾರೆ, ಅವರ ಪರಿಶ್ರಮದಿಂದ ಗುರುವಂದನ ಕಾರ್ಯಕ್ರಮ ಯಶಸ್ವಿಯಾಗಿ ನೆರೆವೇರಿತು, ಈ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಎಸ್.ಎಮ್. ಮಿರ್ಜಿ ಗುರುಗಳು ವಹಿಸಿದ್ದರು. ಇದೆ ಸಂದರ್ಭದಲ್ಲಿ ವಿಶ್ರಾಂತ ಮುಖ್ಯೋಪಾಧ್ಯಯರಾದ, ಎ.ಬಿ. ಮಾಳಿ, ಎಸ್.ಎಸ್. ಮೊಟಗಿ, ಜೆ.ಎಸ್. ತುಪ್ಪದ, ಆರ್.ಬಿ. ಪುರೋಹಿತ್, ಬಿ.ಎಸ್. ರೇಬಿನಾಳ, ಎನ್.ಎಸ್. ಅಂತರಗಂಗೆ, ಡಿ.ಬಿ. ಚನೆಗಾಂವ್, ಆರ್.ವೈ. ತೊರವಿ, ಕೆ.ಜಿ. ಹಿರೇಮಠ, ಬಿ.ಎಲ್. ನಾಟಿಕಾರ್, ಕೆ.ಕೆ. ಹಿಟ್ನಳ್ಳಿ, ಎ.ಬಿ. ಅಥಣಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು,
ಈ ಸಂದರ್ಭದಲ್ಲಿ ಆರ್.ವೈ. ತೊರವಿ ಗುರುಗಳು ಉದ್ಘಾಟನಾ ಭಾಷಣ ಮಾಡುತ್ತಾ ಅನೇಕ ತಮ್ಮ ಸಲಹೆ ಸೂಚನೆಗಳನ್ನು ಕೊಟ್ಟು, ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ತಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳ ಗುಣಗಾನ ಮಾಡಿದರು. ಅದೇ ರೀತಿ ಕಾರ್ಯಕ್ರಮ ಜ್ಯೋತಿ ಬೆಳಗುವ ಮುಖಾಂತರ ಶುರುವಾಗಿ, ವಿದ್ಯಾರ್ಥಿ ವಿದ್ಯಾರ್ಥಿಯರಿಂದ ಸ್ವಾಗತ ಗೀತೆ, ಭಕ್ತಿ ಗೀತೆ, ಸ್ವಾಗತ ಭಾಷಣ, ಪ್ರಾಸ್ತಾವಿಕ ನುಡಿ, ಸ್ನೇಹಿತರು ತಮ್ಮ ಅನಿಸಿಕೆ ಹಾಗೂ ತಮ್ಮ ಪರಿಚಯ ಮಾಡಿಕೊಂಡರು, ಸತ್ಕಾರ ಮೂರ್ತಿಗಳಿಂದ ನುಡಿಮುತ್ತುಗಳು ಹಾಗೂ ಸಲಹೆ ಸೂಚನೆಗಳು, ಹಾಗೂ ಅನೇಕ ವಿದ್ಯಾರ್ಥಿಗಳು ಹಾಡುಗಳನ್ನು ಹಾಡುವ ಮುಖಾಂತರ ಕಾರ್ಯಕ್ರಮ ಕ್ಕೆ ಹೆಚ್ಚು ಮೆರಗು ತಂದು ಕೊಟ್ಟರು ಆತ್ಮೀಯ ಗುರುಗಳಾದ ಆರ್.ಬಿ. ಪುರೋಹಿತ್ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿ ಮುಂದಿನ ಜೀವನ ಹೇಗೆ ಇರಬೇಕು.
ತಾವು ಇವಾಗ ಪಾಲಕರಾಗಿ ತಮ್ಮ ಮಕ್ಕಳನ್ನ ಹೇಗೆ ಬೆಳೆಸಬೇಕು, ಹೇಗೆ ಸಂಸ್ಕಾರವಂತರನ್ನಾಗಿ ಮಾಡಬೇಕು ಅಂತ ಸವಿಸ್ತಾರವಾಗಿ ಹೇಳಿ, ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ತಮ್ಮ ಜವಾಬ್ದಾರಿ ಯನ್ನು ನೆನಪಿಸಿ ಹೇಗೆ ತಮ್ಮ ಮಕ್ಕಳ ಬೆಳೆಸುವಲ್ಲಿ ನಿಮ್ಮ ಪಾತ್ರ ಇದೆ ಅಂತ ಅವರ ಪ್ರಾಮುಖತೆಯನ್ನು ತಿಳಿಸಿದರು. ಅಧ್ಯಕ್ಷೀಯ ಭಾಷಣವನ್ನು ಎಸ್.ಎಮ್. ಮಿರ್ಜಿ ಗುರುಗಳು ನೆರೆವೇರಿಸಿ ಕಾರ್ಯಕ್ರಮ ಬಗ್ಗೆ ಸಂಕ್ಷಿಪ್ತ ವಾಗಿ ಮಾತಾಡಿದರು ವಂದನಾರೆ್ಣ ಮುಖಾಂತರ ಕಾರ್ಯಕ್ರಮ ವನ್ನು ಮುಕ್ತಾಯಗೊಳಿಸಿ, ಎಲ್ಲ ಗುರುಗಳು ಹಾಗೂ ವಿದ್ಯಾರ್ಥಿಗಳಿಂದ ಪ್ರೀತಿಯ ಭೋಜನ ಸವಿದು ಸಂತೋಷ ಪಟ್ಟರು..
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 