ಇಂದು ಕೊಪ್ಪಳದಲ್ಲಿ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ

ಇಂದು ಕೊಪ್ಪಳದಲ್ಲಿ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ Guru Vandana and friends' reunion program in Koppal today

                          ಕೊಪ್ಪಳ 22:  ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು, ಕೊಪ್ಪಳದ ಪ್ರೌಢಶಾಲಾ ವಿಭಾಗದ 19 98, 99,ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಿಂದ ಇದೇ ದಿ, 23 ರ ರವಿವಾರ ಬೆಳಗ್ಗೆ 10.30 ಗಂಟೆಗೆ ಕಾಲೇಜಿನ ಆವರಣದಲ್ಲಿ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ಜರುಗಲಿದೆ,ಸಮಾರಂಭದ ದಿವ್ಯ ಸಾನಿಧ್ಯವನ್ನು ಗವಿಮಠದ ಪರಮಪೂಜ್ಯ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಲಿದ್ದಾರೆ, ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ  ಪ್ರಾಚಾರ್ಯರಾದ ಡಾ.  ಮಹಾಂತೇಶ್ ಮಲ್ಲನ ಗೌಡರ್ ನೆರವೇರಿಸಲಿದ್ದು, ಕಾಲೇಜಿನ ಪ್ರಾಚಾರ್ಯರಾದ ಶರಣೇಗೌಡ್ರು ರವರು ಅಧ್ಯಕ್ಷತೆ ವಹಿಸಲಿದ್ದಾರೆ,

                    ಮುಖ್ಯ ಅತಿಥಿಗಳಾಗಿ ಡಿಡಿಪಿಐ ಸೋಮಶೇಖರ್ ಗೌಡ ಪಾಟೀಲ್ ಪಾಲ್ಗೊಳ್ಳಲಿದ್ದಾರೆ, ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಲು ಸನ್ಮಾನಿತ ರಾಗಿ  ಹರಿ, ಬಸವರಾಜ್ ಕಮ್ಮಾರ್, ಪಂಚಾಕ್ಷರಯ್ಯ ,ಬಸವರಾಜ್ ಬಿಸರಹಳ್ಳಿ ,ಮಹೇಶ್ ಸೊಪ್ಪಿಮಠ, ಶೋಭಾ ಕಂಬಾಳಿ ಮಠ ,ಎಂ, ಅನ್ವರ್ ಹುಸೇನ್, ಲೀಲಾವತಿ ಹಿರೇಮಠ ,ಅಮೀರ್ ಹಮ್ಜಾ ನದಾಫ್, ನಿರ್ಮಲಾದೇವಿ, ಶಿವಪ್ಪ ಬಿಸರಳ್ಳಿ ಮತ್ತು  ಶಿಕ್ಷಕಿ ಅನುಸೂಯಾ ರವರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ಹಾಗೂ 1998, 99,ರ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳ ಬಳಗದ ಸಹಪಾಠಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,