ಹತ್ತರಿಗಿ ಹರಿಮಂದಿರದಲ್ಲಿ ಗುರುಪೂರ್ಣಿಮಾ ಆಚರಣೆ
Guru Purnima celebration at Hattarigi Harimandir
ಬೆಳಗಾವಿ 13: ಪ್ರತಿವರ್ಷದ ಪದ್ಧತಿಯಂತೆ ಈ ವರ್ಷವೂ ದಿನಾಂಕ ಹತ್ತರಂದು ಶ್ರೀಮಠದಲ್ಲಿ ಸಕಲ ಭಕ್ತಾದಿಗಳೊಂದಿಗೆ ಗುರುಪೂರ್ಣಿಮಾ ಆಚರಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠದ ಡಾ. ಆನಂದ ಮಹಾರಾಜ್ ಗೋಸಾವಿ ಸ್ವಾಮಿಜಿ ಅವರು ವಹಿಸಿ ವ್ಯಾಸಮುನಿಗಳ ಪೂಜೆಯನ್ನು ನೆರವೇರಿಸಿ ಮಾತನಾಡುತ್ತಾ ಗುರುವಿನಿಂದ ಜನನ ಗುರುವಿನಿಂದಲೇ ಜೀವನ ಗುರುವಿನಿಂದ ಮೋಕ್ಷ ಕಡೆಗೆ ಪಯಣ ಗುರು ಸೃಷ್ಟಿಕರ್ತ ಗುರು ಪೋಷಕ ಪಾಲಕ ಮತ್ತು ಗುರು ಸಕಲ ವಿದ್ಯಾ ಪಾರಂಗತನಾದ ಗುರು ಜಗದ ಪ್ರಿಯನಾದವನು. ಗುರುವಿಗೊಂದಿಷ್ಟು ಗೌರವ ಸಲ್ಲಿಸುವ ಕಾರ್ಯ ಶಿಷ್ಯನಿಂದ ಆಗಬೇಕಾಗಿದೆ. ದೀಪವು ತನ್ನನ್ನು ತಾ ಉರಿಸಿಕೊಂಡು ಜಗಕ್ಕೆ ಬೆಳಕು ನೀಡುವ ಹಾಗೆ ಸೂರ್ಯ ತಾರಾದಿಗಳಂತೆ ಗುರು ತನ್ನಲ್ಲಿಯ ಜ್ಞಾನವನ್ನು ಧಾರೆಯೆರೆದು ಶಿಷ್ಯಂದಿರನ್ನು ಉದ್ಧಾರ ಮಾಡುತ್ತಾನೆ ತ್ಯಾಗ ಮೂರ್ತಿ ಆಗಿರುತ್ತಾನೆ ಎಂದರು.ಜ್ಞಾನವಂತ ಸಂಸ್ಕಾರವಂತ ಮಾನವ ಸಂಪನ್ಮೂಲವನ್ನು ನಿರ್ಮಿಸಿ ಲೋಕದೊಳಿತೆಗೆ ಕಾರಣವಾಗಿದ್ದಾನೆ. ಈ ಮೂಲಕ ಜೀವನ ದುದ್ದಕ್ಕೂ ಗುರುವಾಗಿಯೇ ಇರುತ್ತಾನೆ. ನಿಷ್ಕಲ್ಮಶ ಪ್ರೀತಿಯನ್ನು ಹಂಚುವ ಮತ್ತು ಪಡೆಯುವ ಏಕೈಕ ಅದು ಗುರುವಿನ ಸ್ಥಾನ. ತನ್ನ ಸರ್ವ ಜ್ಞಾನವನ್ನು ಸಮರ್ಿಸಿ ಶಿಷ್ಯರ ಜೀವನ ಉದ್ಧಾರಕ್ಕಾಗಿ ಶ್ರಮಪಡುವ ಏಕೈಕ ವ್ಯಕ್ತಿ ಅಂದರೆ ಅದು ಅಕ್ಷರ ಜ್ಞಾನದ ಮೂಲಕ ವ್ಯಕ್ತಿತ್ವವನ್ನು ರೂಪಿಸುವ ಗುರುವೇ ಆಗಿದ್ದಾನೆ. ಅಂತಹ ಗುರುಗಳ ಋಣ ತೀರಿಸಲು ಜನ್ಮ ಜನ್ಮಾಂತರದಲ್ಲಿಯೂ ಸಾಧ್ಯವಿಲ್ಲ. ಅವರು ಸದಾ ನಮ್ಮ ಮನಪಟದಲ್ಲಿ ಅಚ್ಚಳಿಯದೆ ಉಳಿದಿರುತ್ತಾರೆ. ಕಷ್ಟ ಕಾಲದಲ್ಲಿ ಮಾರ್ಗ ತೋರುವ ಸಂತೋಷ ಅಳುಕು ಸಮಯದಲ್ಲಿ ಮತ್ತಷ್ಟು ಖುಷಿಯನ್ನು ನೀಡುವ ಚಿಲುಮೆಯಾಗಿರುತ್ತಾರೆ. ನಮ್ಮ ಮನಕ್ಕೆ ಅಂಟಿದ ಅಳುಕು ಕೀಳರಿಮೆಯನ್ನು ದೂರ ಮಾಡಿ ಧೈರ್ಯ ಆತ್ಮವಿಶ್ವಾಸವನ್ನು ಪ್ರೀತಿ ಮತ್ತು ಕಾಳಜಿಯಿಂದ ನಮ್ಮೊಳಗೆ ತುಂಬಿ ಅಸಾಧಾರಣವನ್ನು ಸಾಧಿಸುವಂತೆ ದಾರಿ ತೋರುವ ಮಹಾನ್ ಚೇತನರಾಗಿರುತ್ತಾರೆ. ಅರಿತು ಅರಿಯದಂತೆ ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಕಲಿಸುತ್ತಾರೆ. ಸನ್ಮಾರ್ಗದ ಉಪದೇಶಗಳನ್ನು ಬೋಧಿಸುತ್ತಾರೆ ಉತ್ತಮವಾದ ಕಾರ್ಯ ಮಾಡಿದಾಗ ಮನತುಂಬಿ ಪ್ರೀತಿಸಿ ಹೊಗಳಿ ಬೆನ್ನು ತಟ್ಟಿ ಇನ್ನು ಉತ್ತಮವಾಗುವುದನ್ನು ಸಾಧಿಸುವಂತೆ ಪ್ರೋತ್ಸಾಹಿಸುತ್ತಾರೆ. ಜಗತ್ತಿಗೆ ಗುರು ಪರಂಪರೆಯನ್ನು ಪರಿಚಯಿಸುವುದರ ಕೀರ್ತಿ ನಮ್ಮ ಋಷಿಮುನಿಗಳಿಗೆ ಸಲ್ಲುತ್ತದೆ ಎಂದು ಪೂಜ್ಯರಾದ ಆನಂದ ಮಹಾರಾಜ ಗೋಸ್ವಾಮಿಯವರು ಮಾರ್ಮಿಕವಾಗಿ ಭಕ್ತರಿಗೆ ಉಪದೇಶ ಪ್ರಸಾದವನ್ನಾಗಿ ನೀಡಿದರು.
ಅಪಾರಭಕ್ತಾದಿಗಳು ಉಪಸ್ಥಿತರಿದ್ದು ಪೂಜ್ಯರ ಸಿಹಿ ಪಂಚಾಮೃತವನ್ನು ಸ್ವೀಕರಿಸಿ ತಮ್ಮ ಜ್ಞಾನದಲ್ಲಿ ಅಳವಡಿಸಿಕೊಂಡರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 