ಪಾಕಿಸ್ತಾನದ 27ನೇ ಮುಖ್ಯ ನ್ಯಾಯಮೂರ್ತಿಯಾಗಿ ಗುಲ್ಜರ್ ಅಹ್ಮದ್‍ ಪ್ರಮಾಣ

ಇಸ್ಲಾಮಾಬಾದ್‍, ಡಿ 21 ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರು ಶನಿವಾರ ಪಾಕಿಸ್ತಾನದ 27 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಅವರು ರಾಜಧಾನಿಯ ಐವಾನ್-ಎ-ಸದರ್ ಅಥವಾ ಅಧ್ಯಕ್ಷರ ಭವನದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದರು.   ಸಮಾರಂಭದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಸೆನೆಟ್ ಅಧ್ಯಕ್ಷ ಸಾದಿಕ್ ಸಂಜ್ರಾನಿ, ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಸಾದ್ ಖೈಸರ್, ಫೆಡರಲ್ ಕ್ಯಾಬಿನೆಟ್ ಸದಸ್ಯರು, ಸಂಸದರು, ಸೇನಾ ಮುಖ್ಯ ಜನರಲ್ ಜನರಲ್ ಕಮರ್ ಜಾವೇದ್ ಬಜ್ವಾ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.  ದೇಶದ ಉನ್ನತ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ನಂತರ ಶುಕ್ರವಾರ ನಿವೃತ್ತರಾದ ಆಸಿಫ್ ಸಯೀದ್ ಖೋಸಾ ಅವರಿಂದ ತೆರವಾದ ಸ್ಥಾನವನ್ನು ನ್ಯಾಯಮೂರ್ತಿ ಅಹ್ಮದ್ ತುಂಬಿದ್ದಾರೆ. ನ್ಯಾಯಮೂರ್ತಿ ಅಹ್ಮದ್ ಅವರು ಫೆಬ್ರವರಿ 21, 2022 ರವರೆಗೆ ಸೇವೆ ಸಲ್ಲಿಸಲಿದ್ದಾರೆ.  ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಗುಲ್ಜರ್ ಅಹ್ಮದ್ ಅವರನ್ನು ನೇಮಕ ಮಾಡಿರುವುದನ್ನು ಪಾಕಿಸ್ತಾನದ ಕಾನೂನು ಸಚಿವಾಲಯ ಡಿಸೆಂಬರ್ 4 ರಂದು ಪ್ರಕಟಿಸಿತ್ತು.