ಟೆಹ್ರಾನ್, ಜನವರಿ 13, ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಅವರು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅವರನ್ನು ಭೇಟಿ ಮಾಡಿ ಈ ಪ್ರದೇಶದಲ್ಲಿನ ಉದ್ವಿಗ್ನತೆಯನ್ನು ನಿವಾರಿಸುವ ಯತ್ನ ಮಾಡಿದ್ದಾರೆ ಎಂದು ಇರಾನ್ ಅಧ್ಯಕ್ಷರ ಪತ್ರಿಕಾ ಸೇವೆ ಸೋಮವಾರ ತಿಳಿಸಿದೆ.
ಪ್ರಸ್ತುತ ಪರಿಸ್ಥಿತಿ ಶಮನ ಮಾಡಲು ಟಹ್ರಾನ್ ಈ ಪ್ರದೇಶದ ಎಲ್ಲಾ ದೇಶಗಳೊಂದಿಗೆ ನಿಕಟವಾಗಿ ಸಹಕರಿಸಲು ಸಿದ್ಧವಾಗಿದೆ ಎಂದು ಸಭೆಯಲ್ಲಿ ರೂಹಾನಿ ಭರವಸೆ ನೀಡಿದ್ದಾರೆ .ಎಲ್ಲಾ ಪ್ರಾದೇಶಿಕ ರಾಷ್ಟ್ರಗಳೊಂದಿಗೆ ನಿಕಟ, ಉತ್ತಮ ಸಂಬಂಧ ಹೊಂದಲು ಇರಾನ್ ಸಿದ್ಧವಿದೆ ಎಂದು ಇರಾನಿನ ಅಧ್ಯಕ್ಷರು ಒತ್ತಿ ಹೇಳಿದರು. ಪ್ರಸ್ತುತ ಪರಿಸ್ಥಿತಿಗಳಲ್ಲಿ, ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸಲು ಮತ್ತು ಉದ್ವಿಗ್ನತೆ ಕಡಿಮೆ ಮಾಡಲು ನಾವೆಲ್ಲರೂ ಪರಸ್ಪರ ಸಹಕರಿಸಬೇಕು.
ಇಸ್ಲಾಮಿಕ್ ಸಮುದಾಯದಲ್ಲಿ ವಿಭಜನೆಯು ಯಾರಿಗೂ ಪ್ರಯೋಜನವಲ್ಲ, ಮತ್ತು ಒಳ್ಳೆಯ ಬೆಳವಣಿಗೆಯೂ ಅಲ್ಲ ಎಂದು ನಾವು ನಂಬುತ್ತೇವೆ ಮತ್ತು ಈ ವಿಷಯದಲ್ಲಿ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ನಾವು ಸ್ವಾಗತಿಸುವುದಾಗಿ ರೂಹಾನಿ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಈ ಪ್ರದೇಶದಲ್ಲಿ ಯುದ್ದ ಹುಟ್ಟುಹಾಕುವುದು ಇರಾನ್ ಉದ್ದೇಶವಲ್ಲ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದರು. ಆದಾಗ್ಯೂ, ಹೊರಗಿನಿಂದ ಆಕ್ರಮಣಕಾರಿ ಕ್ರಮಗಳಿಗೆ ಪ್ರತಿಕ್ರಿಯಿಸಲು ಅದು ಸಿದ್ಧವಾಗಿದೆ ಎಂದರು. ಖುರೇಷಿ, ಪಾಕಿಸ್ತಾನವು ತನ್ನ ನೆಲವನ್ನು ಇತರ ರಾಜ್ಯಗಳ ಹಿತದೃಷ್ಟಿಯಿಂದ ಬಳಸಲು ಅನುಮತಿ ಕೊಡುವುದಿಲ್ಲ ಎಂದು ಹೇಳಿದರು. ಉನ್ನತ ಇರಾನಿನ ಜನರಲ್ ಸೊಲೈಮಾನ್ ಹತ್ಯೆಗೆ ಅವರು ಸಂತಾಪ ವ್ಯಕ್ತಪಡಿಸಿದರು. ಜನವರಿ 3 ರಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್-ಕುಡ್ಸ್ ಫೋರ್ಸ್‌ನ ಮುಖ್ಯಸ್ಥ ಜನರಲ್ ಕಾಸೆಮ್ ಸೊಲೈಮಾನಿ ಅವರನ್ನು ಯುಎಸ್ ಮಿಲಿಟರಿ ಕೊಂದ ನಂತರ ಗಲ್ಫ್‌ನಲ್ಲಿ ಉದ್ವಿಗ್ನತೆ ಹೆಚ್ಚಾಗಿತ್ತು.ಕಳೆದ ವಾರ, ಸೊಲೈಮಾನಿ ಹತ್ಯೆಗೆ ಪ್ರತಿಕ್ರಿಯೆಯಾಗಿ ಇರಾನ್ ಸೇಡು ತೀರಿಸಿಕೊಳ್ಳುವ ಕಾರ್ಯಾಚರಣೆ ಪ್ರಾರಂಭಿಸಿದೆ ಈ ಹಿನ್ನಲೆಯಲ್ಲಿ ಖುರೇಷಿ, ಭೇಟಿ ಮಹತ್ವ ಪಡೆದುಕೊಂಡಿದೆ.