ಕಾರ್ಮಿಕರಿಗೆ ಹಿಂಸೆ ಕಠಿಣ ಕ್ರಮಕ್ಕೆ ಗುಡಿಮನಿ ಆಗ್ರಹ
ದೇವರಹಿಪ್ಪರಗಿ, 22: ವಿಜಯಪುರದಲ್ಲಿ ಇತ್ತೀಚೆಗೆ ನಡೆದ ಇಟ್ಟಂಗಿ ಭಟ್ಟಿಯ ಕೂಲಿ ಕಾರ್ಮಿಕರ ಮೇಲೆ ಅಮಾನವೀಯವಾಗಿ ಹಿಂಸೆ ಮಾಡಿರುವ ಕೃತ್ಯ ಸಮಾಜ ವಿರೋಧಿಯಾಗಿದೆ. ಕೂಲಿ ಕಾರ್ಮಿಕರ ಮೇಲೆ ಹಿಂಸೆ ಮಾಡಿರುವ ದುರುಳರನ್ನು ಅತ್ಯಂತ ಕಠಿಣ ಶಿಕ್ಷೆ ಒಳಪಡಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಡಿಎಸ್‌ಎಸ್ ಜಿಲ್ಲಾ ಸಮಿತಿಯ ಸಂ ಸಂಚಾಲಕರಾದ ಪ್ರಕಾಶ ಗುಡಿಮನಿ ಜಿಲ್ಲಾ ಆಡಳಿತಕ್ಕೆ ಆಗ್ರಹಿಸಿದ್ದಾರೆ.
ವಿಜಯಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬುಧುವಾರದಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಭೇಟಿ ನೀಡಿ ಕೂಲಿ ಕಾರ್ಮಿಕರ ಕುಟುಂಬಕ್ಕೆ ಧೈರ್ಯ ತುಂಬಿ, ಯೋಗ ಕ್ಷೇಮ ವಿಚಾರಿಸಿದರು. ನಂತರ ಪತ್ರಿಕೆಯೊಂದಿಗೆ ಮಾತನಾಡಿ, ಜಿಲ್ಲಾಡಳಿತಕ್ಕೆ ಕಾರ್ಮಿಕರ ಮೇಲಿನ ದೌರ್ಜನ್ಯ ಖಂಡಿಸಿ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು. ಡಿಎಸ್‌ಎಸ್ ರಾಜ್ಯ ಸಂ ಸಂಚಾಲಕರಾದ ರಮೇಶ ಆಸಂಗಿ ಅವರ ನೇತೃತ್ವದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಸರ್ಕಾರ ಮತ್ತು ಕಾರ್ಮಿಕ ಇಲಾಖೆ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಡಿ.ಎಸ್. ಎಸ್ ವಿಭಾಗಿಯ ಸಂಚಾಲಕ ವಿನಾಯಕ ಗುಣಸಾಗರ, ಜಿಲ್ಲಾ ಸಂಚಾಲಕರು ಅಶೋಕ್ ಚಲವಾದಿ, ಜಿಲ್ಲಾ ಸಂ ಸಂಚಾಲಕರಾದ ಶರಣು ಸಿಂದೆ, ಜಿಲ್ಲಾ ಸಂ ಸಂಚಾಲಕ ಪರಶುರಾಮ ದಿಂಡವಾರ, ಜಿಲ್ಲಾ ಕಾ.ನಿ.ಸ ಎಸ್.ಬಿ.ತಾಳವಾರ. ಲಕ್ಷ್ಮಣ ಹಲ್ಯಾಳ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು