ಚಿನಗುಂಡಿ ಗ್ರಾಮದ ಗುಡಿದೇವಿ ಜಾತ್ರಾ ಮಹೋತ್ಸವ ಸಂಭ್ರಮ
Gudidevi Jatra festival celebration in Chinagundi village
ಲೋಕದರ್ಶನ ವರದಿ
ಜಮಖಂಡಿ 05 : ತಾಲೂಕಿನ ಚಿನಗುಂಡಿ ಗ್ರಾಮದ ಗುಡಿದೇವಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ರಥೋತ್ಸವ ನಿಮಿತ್ಯ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆದವು.
ಬೆಳಗ್ಗೆ 8 ಗಂಟೆಗೆ ಕೃಷ್ಣಾ ನದಿ ತೀರದಿಂದ ಕುಂಬಾರತಿ, ಡೊಳ್ಳಿನ ಓಲಗ, ಕರಡಿ ಮಜಲು ಮುಂತಾದ ವಾದ್ಯ ಮೇಳಗಳೊಂದಿಗೆ ದೇವಸ್ಥಾನವರೆಗೆ ಭವ್ಯ ಮೆರವಣಿಗೆ ನಡೆಯಿತು. ನಂತರ ಶ್ರೀದೇವಿಯ ಅಭಿಷೇಕ, ಸೀಮೆ ಲಕ್ಕವ್ವ ದೇವಿಗೆ ವಿಶೇಷ ಪೂಜೆ ಕಾರ್ಯಕ್ರಮ ಜರುಗಿದವು.
ಬಬಲಾದಿ ಮಠದ ಸದಾಶಿವ ಅಜ್ಜನವರು, ಮರೆಗುದ್ದಿಯ ಪ್ರಭು ತೋಂಟದಾರ್ಯ ಸ್ವಾಮೀಜಿ, ಲಿಂಗನೂರಿನ ರುದ್ರಾವಧೂತ ಸ್ವಾಮೀಜಿ, ಜಮಖಂಡಿ ಓಲೆಮಠದ ಆನಂದ ದೇವರು, ಚಿಕ್ಕಪ ಡಸಲಗಿಯ ಅಕ್ಕಮಹಾದೇವಿ ತಾಯಿ ಸಾನ್ನಿಧ್ಯ ವಹಿಸಿದ್ದರು.
ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ, ಕಬಡ್ಡಿ ಪಂದ್ಯಾವಳಿ, ತೆರಬಂಡಿ ಸ್ಪರ್ಧೆ, ಡೊಳ್ಳಿನ ಪದಗಳ ಗಾಯನ ಮುಂತಾದ ಸ್ಪರ್ಧೆ ಏರಿ್ಡಸಲಾಗಿತ್ತು. ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಪಿಎಸ್‌ಐ ವಿಠಲ ಮಾಂಗ, ಪರಶುರಾಮ ಕಾಂಬಳೆ, ಈರಣ್ಣಾ ಹಾವರಗಿ, ಜಗದೀಶ ಪಲ್ಲೇದ, ಅವರನ್ನು ಸನ್ಮಾನಿಸಲಾಯಿತು.
ಗುಡಿದೇವಿ ಕಮಿಟಿ ಸರ್ವಸದಸ್ಯರು, ಪದಾಧಿಕಾರಿಗಳು ಉತ್ಸವದ ಉಸ್ತುವಾರಿ ನೋಡಿಕೊಂಡರು, ಪರಮಾನಂದ ಪಕಾಲಿ, ರಾಜು ಬಾಗೇವಾಡಿ, ಓಗೆಪ್ಪ ಬ್ಯಾಕೋಡ, ಚೆನ್ನಯ್ಯ ಪೂಜಾರಿ, ಅನೀಲ ಮಿಶೆನ್ನವರ, ವೆಂಕಟೇಶ ಬಡಗೌಡರ, ಸಿದ್ದರಾಯ ಗುಡದಾರ, ಚೆನ್ನಪ್ಪ ತುಬಚಿ, ಸಮರ್ಥ ಕಾಂಬಳೆ, ಶಂಕ್ರಯ್ಯ ಮಠಪತಿ, ಮಾಳಪ್ಪ ಕಾಂಬಳೆ, ಚೆನ್ನಪ್ಪ ಕಾಂಬಳೆ, ರಮೇಶ ಚನಾಳ ಸೇರಿದಂತೆ ಅನೇಕರು ಉತ್ಸವದಲ್ಲಿ ಭಾಗವಹಿಸಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 