ಆರ್ಥಿಕವಾಗಿ ಸ್ವಾವಲಂಬಿಯಾಗಲು ಗೃಹ ಲಕ್ಷ್ಮೀ ಯೋಜನೆ ಸಹಕಾರಿ : ಮಣಕಟ್ಟಿ

ಆರ್ಥಿಕವಾಗಿ ಸ್ವಾವಲಂಬಿಯಾಗಲು ಗೃಹ ಲಕ್ಷ್ಮೀ ಯೋಜನೆ ಸಹಕಾರಿ : ಮಣಕಟ್ಟಿ Gruha Lakshmi scheme helps achieve financial self-reliance: Manakatti

ಲೋಕದರ್ಶನ ವರದಿ 

ಶಿಗ್ಗಾವಿ 19 : ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕಲು ಗೃಹ ಲಕ್ಷ್ಮೀ ಯೋಜನೆ ಸಹಕಾರಿಯಾಗಿದೆ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಶೇಖಪ್ಪ ಮಣಕಟ್ಟಿ ಹೇಳಿದರು.ಪಟ್ಟಣದ ತಾಲೂಕ ಪಂಚಾಯತ ಆವರಣದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ನೇತೃತ್ವದಲ್ಲಿ ನಡೆದ ಗೃಹಲಕ್ಷ್ಮೀ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ಗೃಹ ಲಕ್ಷ್ಮೀ ಯೋಜನೆ ಜಾರಿಗೆಯಾಗಿ 3 ವರ್ಷ ಪೊರೈಸಿದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯದ ಪ್ರತಿಯೊಂದು ತಾಲೂಕ ಪಂಚಾಯತ ಹಾಗೂ ಗ್ರಾಮಪಂಚಾಯತಿಗಳಲ್ಲಿ ಗೃಹ ಲಕ್ಷ್ಮೀ ದಿನಾಚರಣೆಯನ್ನು ಹಮ್ಮಿಕೊಂಡು ಬೇವಿನ ಮತ್ತು ಅರಳೆ ಮರ ನೆಟ್ಟು ಗಿಡಗಳು ಹೆಮ್ಮರವಾಗಿ ಹೇಗೆ ಬೆಳೆಯುತ್ತವೆ ಹಾಗೆ ಮಹಿಳೆಯರು ಬೆಳೆದು ನಾಲ್ಕು ಜನರಿಗೆ ಉದ್ಯೋಗ ನೀಡುವಂತಾಗಬೇಕು ಎಂದರು.

ತಾಲೂಕಿನಲ್ಲಿ ಒಟ್ಟು ಗ್ಯಾರಂಟಿ ಯೋಜನೆಗಳಲ್ಲಿ ತಾಲೂಕಿನ ಫಲಾನುಭವಿಗಳು ಗೃಹ ಲಕ್ಷ್ಮೀಯಲ್ಲಿ 44962, ಗೃಹ ಜ್ಯೋತಿ ಪ್ರತಿ ತಿಂಗಳು 46331, ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ತಿಂಗಳು 45684, ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 211.14 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ತಾಲೂಕ ಯೋಜನಾಧಿಕಾರಿ ಶಿವಾನಂದ ಸಣ್ಣಕ್ಕಿ, ಸಾಮಾಜಿಕ ಅರಣ್ಯ ಉಪ ವಲಯ ಅರಣ್ಯಅಧಿಕಾರಿ ಶರಣಕುಮಾರ, ಗಸ್ತು ಅರಣ್ಯಪಾಲಕ ಆನಂದ ಅಳಗುಂಡಗಿ, ಗ್ಯಾರಂಟಿ ಸಮಿತಿ ಸದಸ್ಯರಾದ ಶಂಕ್ರ​‍್ಪ ಗಂಗಣ್ಣವರ, ಶಣ್ಮುಖಪ್ಪ ಉಳ್ಳಾಗಡ್ಡಿ, ಚಂದ್ರಶೇಖರ ಮನೋಜ, ಶಂಕ್ರ​‍್ಪ ಬಸರೀಕಟ್ಟಿ,ಡಿ.ಆರ್‌. ಬೊಮ್ಮನಹಳ್ಳಿ, ಬಸವರಾಜ ಹಾದಿಮನಿ , ಭಾರತೀ, ಸುರೇಶ ತೆಗ್ಗಿಹಳ್ಳಿ, ರಾಯಪ್ಪ, ಸಂಜೀವ ಕುಮಾರ ಬೆಳವತ್ತಿ, ಬಸವಣ್ಯೆಯ್ಯ ಪೂಜಾರ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.