ಗುಂಪು ಘರ್ಷಣೆ: ವ್ಯಕ್ತಿಗೆ ಚೂರಿ ಇರಿತ, ವಾಹನಗಳಿಗೆ ಬೆಂಕಿ
Group clash: Man stabbed, vehicles set on fire
ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ ಪೊಲೀಸರು
ಸಂಬರಗಿ 26: ಗ್ರಾಮದಲ್ಲಿ ಸೆ. 23ರಂದು ಗುಂಪು ಘರ್ಷಣೆಯಲ್ಲಿ ಸಂಜಯ ರಾಮಚಂದ್ರ ಟೋಣೆ ಇವರಿಗೆ ಹೊಟ್ಟೆಗೆ ಚೂರಿಯಿಂದ ಇರಿದು ಗಂಭೀರ ಗಾಯಗೊಂಡಿದ್ದು, ಮೀರಜ ಆಸ್ಪತ್ರೆಗೆ ದಾಖಲ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಸಂಶಯಿತ ಆರೋಪಿಗಳನ್ನು ಪೊಲೀಸರು ತನಿಖೆ ನಡೆಸಿದ್ದಾರೆ.
ಸಂಬರಗಿ ಗ್ರಾಮದಲ್ಲಿ ಸಪ್ಟೆಂಬರ 23ರಂದು ಸಾಯಂಕಾಲ ದಾದಾಸಾಹೇಬ ಶಂಕರ ಟೋಣೆ ಹಾಗೂ ಸಂಜಯ ಟೋಣೆ ಇವರ ನಡುವೆ ನಡೆದ ಜಟಾಪಟಿಯಲ್ಲಿ ಇವನಿಗೆ ಚೂರಿ ಇರಿದು ಗಾಯಗೊಳಿಸಿದ್ದಾರೆ. ಚಿಕ್ಕ ಜಗಳದಿಂದ ಇಷ್ಟರ ಮಟ್ಟಿಗೆ ಜಗಳ ಮುಂದುವರೆದಿದ್ದು, ಇವರ ಮನೆಯ ಎದುರಿಗೆ ಇದ್ದ 3 ಬೈಕ್‌ಗಳು, 1 ಗೂಡ್ಸ್ ಬುಲೆರೋಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಸಂಶಯಿತ ಆರೋಪಿಗಳನ್ನು ಹಿಡಿಯಲು ಪೋಲಿಸರು ಜಾಲ ಬೀಸಿದ್ದಾರೆ.
ಸಿ.ಸಿ ಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಆ ಕ್ಯಾಮರಾ ಪುಟೆಜ್‌ವನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಶೀಘ್ರದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 