ಸಮುದಾಯ ಭವನದ ನೂತನ ಕಟ್ಟಡಕ್ಕೆ ಭೂಮಿ ಪೂಜೆ

ಸಮುದಾಯ ಭವನದ ನೂತನ ಕಟ್ಟಡಕ್ಕೆ ಭೂಮಿ ಪೂಜೆ Groundbreaking ceremony for the new community hall building

ಮುದ್ದೇಬಿಹಾಳ, 23 : ರಾಜ್ಯದಲ್ಲಿ ಈಗಾಗಲೇ ಮುಖ್ಯಮಂತ್ರಿ ಸಿದ್ರಾಮಯ್ಯನವರ ಹಾಗೂ ಡಿ ಕೆ ಶಿವಕುಮಾರ ಅವರ ನೇತೃತ್ವದ ಸರಕಾರ ಪಂಚ ಗ್ಯಾರಂಟಿಗಳನ್ನು ನೀಡುವ ಮೂಲಕ ಉತ್ತಮ ಜನಪರ ಆಡಳಿತ ನಡೆಸುತ್ತಿದೆ ಕಾರಣ ಮತಕ್ಷೇತ್ರದ ಎಲ್ಲ ಗ್ರಾಮೀಣ ಭಾಗದ ಜನರಿಗೆ ಯಾವೂದೇ ತೊಂದರೆ ಮಾಡದೇ ಅರ್ಹರಿಗೆ ಸರಕಾರದ ವಿವಿಧ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ತಾಲೂಕಿನ ಎಲ್ಲ ಸರಕಾರಿ ಅಧಿಕಾರಿಗಳಿಗೆ ಸೂಚಿಸಿದರು. 

ತಾಲೂಕಿನ ಕೋಳೂರು ಗ್ರಾಮದ ಶ್ರೀ ಕೋಟ್ಟೂರ ಬಸವೇಶ್ವರ ದೇವಸ್ಥಾನದಲ್ಲಿ  ಸೋಮವಾರ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆ ಹಾಗೂ ಕೋಳೂರು ಗ್ರಾಮದ ಪುರಾತನ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಸಮೂದಾಯ ಭವನದ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದ ಅವರು. ಗ್ರಾಮಗಳಲ್ಲಿನ ನಿಜವಾದ ಕಡು ಬಡವರಿಗೆ ನಿರಾಶ್ರಿತರಿಗೆ ಮನೆ ನೀಡುವಲ್ಲಿ ಪಿಡಿಓ ಗಳು ಶ್ರಮಿಸಬೇಕು ಜತೆಗೆ ಎಲ್ಲ ಗ್ರಾಮಗಳಲ್ಲಿ ಮೊದಲು ಸ್ವಚ್ಚತೆಗೆ ಆದ್ಯತೆ ನೀಡಿದರೆ ಸೊಳ್ಳೆಗಳಿಂದಾಗುವ ಆರೋಗ್ಯದ ಮೇಲಾಗುವ ದುಶ್ಪರಿಣಾಮಗಳನ್ನು ತಡೆಗಟ್ಟಲು ಸಾಧ್ಯ ಎಂದರು 

ಇದು ಕೇವಲ ಅಧಿಕಾರಿಗಳ ಜವಾಬ್ದಾರಿಯಲ್ಲ ಸಾರ್ವಜನಿಕರ ಮೇಲು ತಮ್ಮ ಊರಿನ ಸ್ವಚ್ಚತೆ ಕಾಳಜಿ ವಹಿಸುವಲ್ಲಿ ತಮ್ಮ ಜವಾಬ್ದಾರಿಯೂ ಕೂಡ ಅಷ್ಟೇ ಮಹತ್ವದ್ದಾಗಹಿರುತ್ತದೆ. ಜೆ ಜೆ ಎಂ ಸ್ಕೀಮ್  ಯೋಜನೆಯ ಸಮರ​‍್ಕವಾಗಿ ನಿರ್ವಹಣೆಯಾಗದೆ ಇರುವದರಿಂದ ಗ್ರಾಮದ ಜನರಿಗೆ ಕುಡಿಯುವ ನೀರಿನ ನಿವಾರಿಸಲು ಸಾಧ್ಯವಾಗುತ್ತಿಲ್ಲ. ಇತ್ತ ಶುದ್ಧ ನೀರಿನ ಘಟವೂ ಇಲ್ಲ ಜನರಿಗೆ ಶುದ್ಧ ನೀರು ದೊರಕುತ್ತಿಲ್ಲ ಹೀಗಾಗಲೆ ತೀವೃ ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರೊಬ್ಬರು ಆರೋಪಿಸಿದರು. 

ಜೆ ಜೆ ಎಂ ಸ್ಕಿಂ ಯೋಜನೆಯೂ ಸಂಪೂರ್ಣ ಹದಗೆಟ್ಟು ಹೋಗಿದೆ ಎಂಬುದು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು. ಈ ರೀತಿ ಜೆ ಜೆ ಎಂ ಸ್ಕೀಮ ಯೋಜನೆ ಸರಿಯಾಗಿ ನಿರ್ವಹಣೆಯಾಗಿಲ್ಲ ಅಲ್ಲಿ ತಾತ್ಕಾಲಿಕ ವಾಗಿ ಶುದ್ಧ ಕುಡಿಯುವ ನೀರು ಒದಗಿಸುವ ಕಾರ್ಯ ಮಾಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. 

ಜನಸಾಮಣ್ಯರಿಗೆ ಕುಡಿಯುವ ನೀರು ಒದಗಿಸಲು ಯಾಕೇ ಪ್ರಯತ್ನಿಸಿಲ್ಲ ಎಂದು ಪಿಡಿಓ ವಿಜಯಲಕ್ಷ್ಮೀಮುದುಗಲ್ಲ ಅವರನ್ನು ಶಾಸಕ ಅಪ್ಪಾಜಿ ನಾಡಗೌಡ ಅವರು ಪ್ರಶ್ನಿಸಿದರು ಇದಕ್ಕೆ ಪ್ರತಿಯಾಗಿ ಬಳಕೆ ಮಾಡಲು ನೀರಿನ ಸಮಸ್ಯೆ ಇಲ್ಲ ಆದರೇ ಗ್ರಾಮದಲ್ಲಿರುವ ಹಳೆ ಶುದ್ಧ ನೀರಿನ ಘಟಕವನ್ನು ಎರಡು ಮೂರು ಬಾರಿ ದುರಸ್ಥಿಗೊಳಿಸಲಾಗಿದೆ  ಮತ್ತೆ ಎರಡು ಮೂರುಗಲ್ಲಿಯೇ ಕೆಟ್ಟುಹೋಗಿಬಿಡುತ್ತವೆ. ಇಷ್ಟಕ್ಕೂ ಒಂದೇ ಘಟಕದಿಂದ ಜನರಿಗೆ ಸಮರ​‍್ಕ ಕುಡಿಯುವ ನೀರು ಒದಗಿಸಲು ಸಾಧ್ಯವಿಲ್ಲ ಇನ್ನೊಂದು ಶುದ್ಧ ಕುಡಿಯುವ ನೀರಿನ ಘಟಕದ ನಿರ್ಮಿಸುವುದು ಅಗತ್ಯವಾಗಿದೆ ಎಂದುಪಿಡಿಓ ವಿಜಯಲಕ್ಷ್ಮೀ ಮುದುಗಲ್ಲ ಉತ್ತರಿಸಿದರು. 

ತಾಲೂಕಿನಲ್ಲಿ ಒಟ್ಟು ಶುದ್ಧ ಕುಡಿಯುವ ನೀರಿನ ಘಟಕಗಳು ಇವೆ ಯಾವೆಲ್ಲ ಘಟಕಗಳು ಚಾಲ್ತಿ ಇವೆ ಯಾವೇಲ್ಲ ದುರಸ್ತಿ ಯಲ್ಲಿವೆ ಹೊಸದಾಗಿ ನಿರ್ಮಿಸಬೇಕಿದೆ ಎಂದು ಪಟ್ಟಿ ತಯಾರಿಸಿ ಕೊಡಿ ಸರಕಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಒದಗಿಸುವ ಮೂಲಕ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಅಪ್ಪಾಜಿ ನಾಡಗೌಡ ಅವರು ತಾಪಂ ಪ್‌ರಭಾರ ಸಹಾಯ ನಿರ್ದೇಶಕ ಖೂಬಾಶಿಂಗ್ ಜಾಧವ ಅವರಿಗೇ ಸೂಚಿಸಿದರು. 

ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಅವರು ಮಾತನಾಡಿ  ಗ್ರಾಮದ ಸರಕಾರಿ ಪ್ರಾಥಮೀಕ, ಪ್ರೌಢ ಶಾಲೆಯ ಕೋಠಡಿಗಳು ಸಂಪೂರ್ಣ ಶಿಥಿಲಾವಸ್ಥೆಗೊಂಡಿದ್ದು, ಶಾಲಾ ಕೋಠಡಿಗಳ ದುರಸ್ಥಿಗೊಳಿಸುವ ಮೂಲಕ ಸುತ್ತಲೂ ಕಂಪೌಂಡ ನಿರ್ಮಿಸಬೇಕಿದೆ, ಅದಲ್ಲದೇ ಕೋಳೂರು ಗ್ರಾಮ ಪಂಚಾಯಿತಿ ಕಚೇರಿಯ ಕಟ್ಟಡವೂ ಶಿಥಿಲಾವಸ್ಥೆಯಲ್ಲಿದ್ದು ಹೋಸ ಕಟ್ಟಡ ನಿರ್ಮಿಸಬೇಕು, ಗ್ರಾಮದ ಬಹುತೇಕ ಎಲ್ಲ ಓಣಿಗಳಲ್ಲಿ ಅತ್ಯಂತ ಚಿಕ್ಕ ಕಿರಿದಾರದ ರಸ್ತೆಗಳಿದ್ದು ಅವುಗಳನ್ನು ಅಭಿವೃದ್ಧಿ ಪಡಿಸಬೇಕು, ಜತೆಗೆ ಕೋಳೂರಿಂದ ನೇಬಗೇರಿಗೆ ಹೋಗುವ ಮುಖ್ಯ ರಸ್ತೆ, ಕೋಳೂರಿಂದ ತಂಗಡಿಗಿಗೆ ಹೀಓಗುವ ಒಳ ರಸ್ತೆಯನ್ನು ನಿರ್ಮಿಸಬೇಕು ಎಂದು ಮನವಿ ಮಾಡಿಕೊಂಡರು. 

ಇದಕ್ಕೆ ಸ್ಪಂದಿಸಿದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ ನಾಡಗೌಡ(ಅಪ್ಪಾಜಿ) ಅವರು ಮಾತನಾಡಿ ಸಧ್ಯ ಕೋಳೂರು ಸೇರಿದಂತೆ ತಾಲೂಕಿನಲ್ಲಿ ಒಟ್ಟು 210 ಸರಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೇ ಅವುಗಳ ಜೀರ್ಣೋದ್ಧಾರಕ್ಕೆ ಧುರಸ್ತಿಗೊಳಿಸಲು ಸರಕಾರಕ್ಕೆ ಪತ್ರ ಬರೆಯಾಗಿದೆ ಸರಕಾರದಿಂದ ಹಣ ಬಿಡುಗಡೆ ಮಾಡಟಿದ ತಕ್ಷಣವೇ ಎಲ್ಲ ಸರಕಾರಿ ಶಾಲೆಗಳನ್ನು ಧುರರ್ಸತಿಗೊಳಿಸಲಾಗುವುದು, ಜತೆಗೆ  ಕೋಳೂರದಿಂದ ಸರೂರು, ತಂಗಡಗಿ ಮಾರ್ಗದ ಬಹುತೇಕ ಪ್ರಮುಖ ರಸ್ತೆಗಳ ನಿರ್ಮಿ ಸಲು ತಿರ್ಮಾನಿಸಲಾಗುವುದು. ಸಧ್ಯ ಹಣಕಾಸಿನ ವ್ಯವಸ್ಥೆಯನ್ನು ನೋಡಿಕೊಂಡು ತಮ್ಮ ಬೇಡಿಕೆಯಂತೆ  ಮುಂಬರುವ ದಿನಗಳಲ್ಲಿ ಇನ್ನುಳಿದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.  

ಚುನಾವಣೆಗಳು ಬಂದಾಗ ನಿಮ್ಮಿಚ್ಚೇಯಂತೆ ಚುನಾವಣೆ ಮಾಡಿ ತಪ್ಪಿಲ್ಲ ಆದರೇ ಎಲ್ಲ ಸಮಯದಲ್ಲೂ ತಾವೂ ರಾಜಕಾರಣ ತಮ್ಮನ್ನು ತೋಡಗಿಸಿಕೊಂಡು ರಾಜಕಾರಣವನ್ನೇ ಮಾಡುವುದು ಸರಿಯಲ್ಲ ಕೋಳೂರು ಗ್ರಾಮಕ್ಕೆ ಮತ್ತು ನನ್ನ 40 ವರ್ಷಗಳ ರಾಜಕೀಯವಲ್ಲದೇ ಸ್ನೇಹತ್ವದ ಅವಿನಾರಭಾವ ಸಂಭಂಧವಿದೆ. ಗ್ರಾಮ ಅಭಿವೃದ್ಧಿ ವಿಷಯ ಬಂದಾಗ ಯಾವೂದೇ ಗುಂಪುಗಾರಿಕೆ, ಆ ಬಣ, ಈ ಬಣ ಎನ್ನದೇ ತಾವೇಲ್ಲರೂ ಕೂಡಿ ಪಕ್ಷಬೇದ, ಜಾತಿಬೇದವನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು. 

ಈಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಸರಕಾರ ಜಾತಿ ಜನಗಣತಿ ಪ್ರಾರಂಭಿಸಿದೆ, ರಾಜಕೀಯದಿಂದ, ಶೈಕ್ಷಣಿಕವಾಗಿ ಆರ್ಥಿಕವಾಗಿ ಯಾರು ಹಿಂದುಳಿದಿದ್ದಾರೆ ಅಂತಹ ಸಮೂದಾಯಗಳನ್ನು ಜಾತಿಗಣತೆಇ ಮೂಲಕ ಸರ್ವೇ ನಡೆಸಿ ಆಮೂಲ ಅವಕಾಶ ವಂಚಿತ ಸಮೂದಾಯಗಳನ್ನು ಮೆಲೆತ್ತುವ ಉದ್ದೇಶವಿದೆ ವಿನಃ ಇದರಿಂದ ಜಾತಿ ಧರ್ಮ ಬೇರೆಯಾಗೋದಿಲ್ಲ,ಸರಕಾರದ ಯೋಜನೆಯನ್ನು ಜನರಿಗೆ ದಾರತಿ ತಪ್ಪಿಸುವ ಹುನ್ನಾರವಿದೇ. ಕಾರಣ ತಪ್ಪು ತಿಳುವಳಿಯ ಮಾತುಗಳನ್ನು ಕೇಳದೆ  ಗಣತಿದಾರರು ತಮ್ಮ ಮನೆಗೆ ಜಾತಿಗಣತಿಗೆ ಬಂದಾಗ ತಮ್ಮ ಮೂಲ ಜಾತಿಗಳ ಬಗ್ಗೆ ನಿಖರವಾಗಿ ನಮೂದಿಸಬೇಕು ಇದರಿಂದ ಯಾವೂದೇ ತೊಂದರೆಯಾಗುವುದಿಲ್ಲ ಎಂದರು. 

ಈ ವೇಳೆ ಸರಕಾರದ ಗ್ಯಾರಂಟಿ ಯೋಜನೆಯ ತಾಲೂಕಾ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಅವರು ಮಾತನಾಡಿ ಮತಕ್ಷೇತ್ರದಲ್ಲಿ ಈಗಾಗಲೇ ಎಷ್ಟು ಜನ ಪಂಚಗ್ಯಾರಂಟಿಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬದುನ್ನು ವಿವರಿಸಿದರಲ್ಲದೇ ಮಂಗಳವಾರದಿಂದ ಅನುಷ್ಟಾನದ ಸಮೀತಿಯ ನಡೆ ಫಲಾನುಭವಿಗಳ ಮನೆ ಕಡೆ ಎನ್ನುವ ವಿಶೇಷ ಕಾರ್ಯಕ್ರಮವನ್ನು ಶಾಸಕ ಅಪ್ಪಾಜಿ ನಾಡಗೌಡರೂ ಚಾಲನೆ ನೀಡಲಿದ್ದಾರೆ. ಆಮೂಲಕ ಅವರ ಮಾರ್ಗದರ್ಶನದಲ್ಲಿ ಪ್ರತಿ ಗ್ರಾಮಗಳ ಮನೆ ಮನೆಗೆ ನಮ್ಮ ಗ್ಯಾರಂಟಿ ಸಮೀತಿ ಸದಸ್ಯರೊಂದಿಗೆ ಸರ್ವೇ ಕಾರ್ಯ ಪ್ರಾರಂಭಿಸಲಾಗುವುದು ಗ್ಯಾರಂಟಿ ವಂಚಿತಗೊಂಡಿರುವವರನ್ನು ಗುರ್ತಿಸಿ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ತಲುಪಿಸುವ ಉದ್ದೇಶ ಇದಾಗಿದೆ ಎಂದರು. 

ಈ ವೇಳೆ ತಾಲೂಕಾ ಕೃಷಿ ಅಧಿಕಾರಿ ಸುರೇಶ ಭಾವಿಕಟ್ಟಿ, ಸಿಡಿಪಿಓ ಶಿವಮೂರ್ತಿ ಕುಂಬಾರ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎಸ್ ಸಾವಳಗಿ, ತಾಲೂಕಾ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ ಎಂ ಬೆಳಗಲ್ಲ, ಪಶು ವೈದ್ಯಾಧಿಕಾರಿ ಸುರೇಶ ಭಜಂತ್ರಿ, ತಾಲೂಕಾ ಆರೋಗ್ಯಾಧಿಕಾರಿ ಡಾ, ಸತೀಶ ತಿವಾರಿ, ಪಿಡಬ್ಲೂಡಿ ಎ ಬಿ ರೆಡ್ಡಿ ಸೇರಿದಂತೆ ವಿವಿಧ ಸರಕಾರಿ ಇಲಾಖೆ ಅಧಿಕಾರಿಗಳು ಇದ್ದರು.