ನೂತನ ಶಿಲಾಮಠದ ಭೂಮಿ ಪೂಜಾ
Groundbreaking ceremony for the new Shilamath
ಮುದ್ದೇಬಿಹಾಳ 02: ಧರ್ಮ, ಪರಂಪರೆ, ಸಂಸ್ಕೃತಿ ಉಳಿಸುವುದರ ಜತೆಗೆ ಶೈಕ್ಷಣಿಕವಾಗಿ ಕ್ರಾಂತಿ ಮಾಡಿದ ಮಠ ಮಾನ್ಯರ ಕೊಡುಗೆ ಅಪಾರವಾಗಿದೆ. ಈ ಹಿನ್ನೇಲೆಯಲ್ಲಿ ಸಧ್ಯ ನೂತನವಾಗಿ ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಶ್ರೀ ಕೋಟ್ಟೂರೇಶ್ವರ ದೇವಸ್ಥಾನಕ್ಕೆ ಜಾತ್ಯಾತೀತವಾಗಿ ಪಕ್ಷಾತೀತವಾಗಿ ಪ್ರತಿಯೋಬ್ಬರು ಕೈಜೋಡಿಸುವ ಮೂಲಕ ಒಂದು ವರ್ಷದೊಳಗೆ ಲೋಕಾರೆ್ಣಗೊಳ್ಳುವಂತೆ ಶ್ರಮಿಸಿ ಬೇಕು ಎಂದು ಕುಂಟೋಜಿ ಭಾವೈಕ್ಯತಾ ಹಿರೇಮಠದ ಡಾ, ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ವಿದ್ಯಾನಗರ ಬಡಾವಣೆಯ ಶ್ರೀ ಗುರು ಕೊಟ್ಟೂರೇಶ್ವರೇಶ್ವರ ಗ್ರಾಮೀಣ ವಿವಿಧೋದ್ದೇಶಗಳ ವಿದ್ಯಾ ಪ್ರಸಾರ ಸಂಸ್ಥೆಯ ಸಹಯೋಗದಲ್ಲಿ ಶ್ರೀಗುರು ಕೊಟ್ಟೂರೇಶ್ವರ ದೇವಸ್ಥಾನದ ಹಾಗೂ ನೂತನ ಶಿಲಾಮಠದ ಭೂಮಿ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಕೊಟ್ಟೂರೇಶ್ವರರ ಪವಾಡ ಅಷ್ಠಿಷ್ಟಲ್ಲ ಪ್ರತಿಯೊಂಧು ಕ್ಷೇತ್ರದಲ್ಲೂ ಪವಾಡಗಳು ನಡೆದುಹೋಗಿವೆ. ಯಾವೂದೆ ಕಲ್ಮಶವಿಲ್ಲದೇ ಭಕ್ತಿಯಿಂದ ನೇನೆದು ಸ್ಮರಿಸಿದರೇ ಬಸವೇಶ್ವರ ಕೃಪೆ ದೊರೆಯುತ್ತದೆ. ಅಂತಹ ಅದ್ಭೂತ ಪ್ರಾಚೀನ ಇತಿಹಾಸವುಳ್ಳ ಭಗವಂತನ ದೇವಸ್ಥಾನ ಹಾಗೂ ಮಠ ನಿರ್ಮಾಣಕ್ಕೆ ಸರಕಾರದ ಸಹಾಯ ಧನ ಪಡೆಯದೆ ಪಟ್ಟಣದ ವಿದ್ಯಾನಗರ ಬಡಾವಣೆ ಸೇರಿದಂತೆ ಎಲ್ಲ ಗಣ್ಯರು, ಮುಖಂಡರು ಅಪಾರ ಭಕ್ತರೇ ಸೇರಿಕೊಂಡು ದೇವಸ್ಥಾನ ನಿರ್ಮಿಸಲು ಮುಂದಾಗಿದ್ದು ನಿಜಕ್ಕೂ ಶ್ಲಾಘನಿಯ. ಈ ದೇಶ ಹಿಂದೂ ಧರ್ಮ ಶ್ರೇಷ್ಠ ಸಂಸ್ಕೃತಿ ಹೊಂದಿದೆ. ಈ ಧರ್ಮ ಸಭ್ಯತೆ ಮತ್ತು ಸಂಸ್ಕಾರ ಎರಡನ್ನು ಜಗತ್ತಿಗೆ ನೀಡಿದೆ. ಗುಣಮಟ್ಟ ಶಿಕ್ಷಣದ ಜತೆಗೆ ಮಕ್ಕಳಿಗೆ ಪ್ರತಿ ವಿದ್ಯಾರ್ಥಿಯೂ ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು.
ಪರಸ್ಪರ ಗೌರವಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ದೇವರಲ್ಲಿ ಗುರುವಿನಲ್ಲಿ, ಮಠ ಮಾನ್ಯರಲ್ಲಿ ಪೂಜ್ಯನಿಯವಾಗಿ ಕಾಣುವುದರ ಜತೆಗೆ ಮಾನವಿಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದರು. ಸಿದ್ದನಕೊಳ್ಳದ ನಿರಂತರ ದಾಸೋಹ ಹಾಗೂ ಕಲಾಪೋಷಿತ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ ಪರದೆ ಮುಂದೆ ನಟನೆ ಮೂಲಕ ಮನರಂಜನೆ ನೀಡುವ ಹೀರೋ ಆಗುವುದಕ್ಕಿಂತ ನಿಜವಾದ ಜೀವನದಲ್ಲಿ ಸಾಮಾಜಿಕ ಬದುಕಿನಲ್ಲಿ ಹಿರೋ ಆಗುವುದು ಬಹಳ ಮುಖ್ಯವಾಗಿದೆ. ಕಾರಣ ಮನೆಯಲ್ಲಿಹೆತ್ತವರನ್ನು ರೋಲ್ ಮಾಡೆಲ್ಲಾಗಿ ಪ್ರೀತಿಸಿ ಗೌರವಿಸಿದೆರೆ ಅದು ದೇವರ ಸೇವೆ ಮಾಡಿದಂತೆ. ಮನುಷ್ಯ ಯಾವೂದೇ ಸ್ವಾರ್ಥವಿಲ್ಲದೇ ನಿಸ್ವಾರ್ತತೆಯಿಂದ ಬಡವರಿಗೆ ಒಂದು ತುತ್ತು ಅನ್ನಕೊಟ್ಟು ಅವರ ಕಷ್ಟದಲ್ಲಿ ಭಾಗಿಯಾಗಿ ನೆರವಾದರೆ ಮಾತ್ರ ಭಗವಂತನ ಕೃಪೆಗೆ ಪಾತ್ರರಾಗುತ್ತಿರಿ, ಆದರೇ ಬರಿ ತೋರಿಕೆಗೆ ದೇವಸ್ಥಾನಕ್ಕೆ ಕೈಮುಗಿದು ಕಾಯಿ ಕಪೂರ ಬೆಳಗಿ ನಮಸ್ಕಾರ ಮಾಡಿದರೇ ದೇವರು ಒಲಿಯೋದಿಲ್ಲ. ಸುಮಾರು ಒಂದು ಕೋಟಿ ವೆಚ್ಚದ ಭೂದಾನವನ್ನು ಮಾಡುವ ಮೂಲಕ ಅಂತಹ ಮಹತ್ವ ಕಾರ್ಯದಲ್ಲಿ ತೊಡಗಿರುವ ಮಹಾದಾನಿ ಕೆ ಪಿ ಹಿರೇಮಠ ದಂಪತಿಗಳೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.
ಯಾರೇ ಆಗಲಿ ಒಳ್ಳೆ ಕಾರ್ಯ ಮಾಡಿದರೇ ಸ್ವತಃ ಭಗವಂತೆ ಬಂದು ನಿಲ್ಲುತ್ತಾನೆ ಎಂಬುದಕ್ಕೆ ಸಧ್ಯ ಕೊಟ್ಟೂರೇಶ್ವರ ದೇವಸ್ಥಾನ ಭೂಮಿ ಪೂಜೆ ನಡೆದಿರುವುದು ಸಾಕ್ಷಿಕರಿಸುತ್ತದೆ ಎಂದರು.ಈ ವೇಳೆ ಕಾಂಗ್ರೇಸ್ ಮುಖಂಡ ಹಾಗೂ ಅಸ್ಕೀ ಪೌಂಡೇಷನ್ ಮುಖ್ಯಸ್ಥ ಸಿ ಬಿ ಅಸ್ಕಿ ಅವರು ಮಾತನಾಡಿ ಎಲ್ಲ ಹರಗುರು ಚರಣ, ಮಠಾಧೀಶರ ಕೃಪಾರ್ಶಿವಾದದಿಂದ ವಿದ್ಯಾನಗರ ಬಡಾವಣೆಯಲ್ಲಿ ಇತಿಹಾಸ ಪ್ರಶಿದ್ಧ ಕೋಟ್ಟೂರೇಶ್ವರ ದೇವಸ್ಥಾನ ಹಾಗೂ ಶಿಲಾಮಠ ನಿರ್ಮಾಣಕ್ಕೆ ಚಾಲನೆ ನೀಡುತ್ತಿರುವುದು ಒಳ್ಳೇಯ ಬೆಳವಣಿಗೆ. ಈ ದೇವಸ್ಥಾನದ ಕಾಮಗಾರಿಗೆ ನಮ್ಮ ಅಸ್ಕೀ ಪೌಂಡೇಷನ್ ವತಿಯಿಂದ ಸದಾ ಸಹಾಯ ಹಸ್ತ ನೀಡಲಿದೆ ಎಂದು ಭರವಸೆ ನೀಡಿದರು.
ಈ ವೇಳೆ ಗುಂಡಕನಾಳ, ಭ್ರಹನ್ನಮಠದ ಶ್ರೀ ರಾಜಗುರು ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಇಟಗಿ ಭೂ ಕೈಲಾಸ ಮೇಲುಗದ್ದುಗೆಮಠದ ಶ್ರೀ ಗುರು ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ಶಿದ್ದನಕೊಳ್ಳದ ಶಿವಕುಮಾರ ಮಹಾಸ್ವಾಮಿಗಳು, ಕರಭಂಟನಾಳದ ಗುರು ಗಂಗಾಧರೇಶ್ವರ ಹಿರೇಮಠದ ಶಿವಕುಮಾರ ಮಹಾಸ್ವಾಮಿಗಳು, ಜೀರಲಭಾವಿ ಶ್ರೀ ಆನಂದಯ್ಯ ಮಹಾಸ್ವಾಮಿಗಳು, ಗುಡದುರ ಶ್ರೀ ನೀಲಕಂಠ ಶಿವಾಚಾರ್ಯ ತಾತನವರು, ಸಜ್ಜಲಗುಡ್ಡದ ದೊಡ್ಡಬಸವೇಸವಾಚಾರ ತಾತನವರು ದಿವ್ಯ ಸಾನಿಧ್ಯ ವಹಿಸಿದ್ದರು. ವಿಜಯಲಕ್ಷ್ಮಿ ಕೋಟ್ರಯ್ಯಾ ಹಿರೇಮಠ, ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಬಸವರಾಜ ಮೋಟಗಿ, ಹಿರಿಯ ಸಾಹಿತಿ ನಿವೃತ್ತ ಪ್ರೋ ಬಿ ಎಂ ಹಿರೇಮಠ, ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಸತೀಶ ಓಸ್ವಾಲ್, ಕೆ ಪಿ ಹಿರೇಮಠ, ಎಂ ಬಿ ನಾವದಗಿ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 