ಹಸಿರೆ ನಮ್ಮ ಉಸಿರು; ಪ್ರಾಂಶುಪಾಲೆ ಶಾಹಿನ್ ಶೇಖ್

ಹಸಿರೆ ನಮ್ಮ ಉಸಿರು; ಪ್ರಾಂಶುಪಾಲೆ ಶಾಹಿನ್ ಶೇಖ್ Greenery is our breath; Principal Shahin Sheikh

ಲೋಕದರ್ಶನ ವರದಿ 

ಸಿಂದಗಿ 05 :  ಕಾಡನ್ನು ನಾಶವಾಗುತ್ತಾ ಹೊದರೆ ನಾಡಿನ ಜನರು ಬದಕಲು ಕಷ್ಟ ಪಡಬೇಕಾಗುತ್ತದೆ, ಶುಧ್ಧ ಗಾಳಿ ಸಿಗದೆ ಅನೇಕ ರೋಗಗಳು ಬರುವುದು, ಆಕ್ಸಿಜನ್ ಮೋರೆ ಹೋಗಬೇಕಾಗುತ್ತದೆ, ನಿಮ್ಮ ಹುಟ್ಟ ಹಬ್ಬದ ದಿನ ಒಂದು ಗೀಡವನ್ನು ನೆಟ್ಟು  ಪ್ರತಿದಿನವೂ ನೀರು ಉಣಿಸಿ ಅದರ ರಕ್ಷಣೆ ಮಾಡಬೇಕೆಂದು ಶಾಲೆಯ ಪ್ರಾಂಶುಪಾಲೆ ಶಾಹಿನ್ ಶೇಖ್  ಮನವಿ ಮಾಡಿದರು.  

ಪಟ್ಟಣದ ಹೊರವಲಯ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್‌ದಲ್ಲಿ  ಪರಿಸರ ದಿನಾಚರಣೆ ಆಚರಿಸಿ ಮಾತನಾಡಿ,    ಪರಿಸರ ಸಂರಕ್ಷಣಿ ಜೊತೆಗೆ ಗಿಡಗಳನ್ನ ಬೆಳೆಸುವುದು ಎಲ್ಲರೂ ಜವಬ್ದಾರಿಯಾಗಿದೆ, ಇವತ್ತು ಮನುಷ್ಯ ಬೇಗ ಶ್ರೀಮಂತನಾಗಬೇಕೆಂಬ ದುರಾಸೆಯಿಂದ ಕಾಡನ್ನು ನಾಶಮಾಡುತ್ತಿದ್ದಾನೆ, ಕಾಡು ನಾಶದಿಂದ ಮಳೆಯ ಕೊರತೆ, ರೈತನು ಬೆಳೆಯನ್ನು ಬೆಳೆಲಾರದೆ ಸಂಕಷ್ಟಕ್ಕೆ  ಒಳಗಾಗುತ್ತಿದ್ದಾನೆ, ಕುಡಿಯುವ ನೀರಿನ ಸಮಸ್ಯೆ,  ನದಿಗಳು ಬತ್ತಿಹೊಗುತ್ತೇವೆ, ಮುಂದೊಂದಿನ ಉಸಿರಾಡಲು ಗಾಳಿಯೂ ಸಿಗುವುದಿಲ್ಲ, ಕಾಡಿನಲ್ಲಿರುವ ಪ್ರಾಣಿಗಳ ವಲಸೆ ಹೋಗುವ ಸ್ಥಿತಿ ಬಂದೋದುಗುವುದು ಎಂದರು. 

ವಿದ್ಯಾರ್ಥಿಗಳಾದ ಕೇಶವ, ಮಲ್ಲಮ್ಮ ಪಾಟೀಲ್ ಪರಿಸರ ಸಂರಕ್ಷಣಿಯ ಕುರಿತು ಭಾಷಣ ಮಾಡಿದರು, ವಿದ್ಯಾರ್ಥಿನಿ ಬೃಂದಾ ಕುಂಬಾರ ಅವರ ತಂಡದವರು ಪರಿಸರದ  ಗೀತೆಯನ್ನು ಹಾಡಿನ ಮೂಲಕ ಪರಿಸರ ಉಳಿಸುವ ಜಾಗೃತೆ ಮೂಡಿಸಿದರು,  ಇತ್ತಿಚ್ಚಿನ ದಿನಗಳಲ್ಲಿ  ನದಿಗಳು ಮಲಿನತೆಯಾಗುತ್ತದೆ ಮತ್ತು ಮರಗಳು ನಾಶವಾಗುತ್ತದೆ ಅವುಗಳ ರಕ್ಷಣೆ ಮಾಡಬೇಕೆಂದು ಕಿರು ನಾಟಕ  ಮಕ್ಕಳ ಪ್ರದರ್ಶನ ಮಾಡಿದರು.  ಶಿಕ್ಷಕಿ ಪ್ರೀಯಾಂಕ ಮೋಹನ್ ಅವರು ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಸ್ಣೇಹಾ ನಾಯ್ಕ ಅವರು ವಂದರ್ಣಾಪಣಿ ಮಾಡಿದರು, ಶಿಕ್ಷರಾದ ಚಿದಾನಂದ ಕಲಾದಗಿ ಅವರ ಕಾರ್ಯಕ್ರಮ ಉಸ್ತುವಾರಿ ನಿರ್ವಹಿಸಿದರು, ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿ, ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.