ಸಮಾನತೆ ಸಂದೇಶ ಸಾರುವ ಮಹಾನ್ ಪುರುಷರ ಜಯಂತಿ ಕಾರ್ಯಕ್ರಮಗಳು

ಲೋಕದರ್ಶನ ವರದಿ                                               

ವಿಜಯಪುರ 01: ಮಹಾನ ಪುರುಷರ ಜಯಂತಿ ಕಾರ್ಯಕ್ರಮಗಳು ಜಾತಿ ಬೇದ ಮೆರಯುವಂತಹ ಸಮಾನತೆ ಸಾರುವ ಸಂದೇಶಗಳಾಗಿವೆ ಎಂದು ಜಿಲ್ಲಾ ಪಂಚಾಯತ ಸದಸ್ಯೆ ಶ್ರೀದೇವಿ ಅಪ್ಪಣ್ಣ ಐಹೊಳ್ಳಿ ಹೇಳಿದರು. ಬಸವನ ಬಾಗೇವಾಡಿ ತಾಲೂಕಿನ ಮಲಘಾಣ ಗ್ರಾಮದಲ್ಲಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಹಾಗೂ ಶ್ರೀ ಗಂಗಾಪರಮೇಶ್ವರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ,  ಇಂತಹ ಮಹಾನ್ ಪುರುಷರ ಆಚರಣೆಗಳು ಸಮಾಜ ತಳ ಸಮುದಾಯಗಳನ್ನು ಮೇಲೆತ್ತಲು ಸಹಕಾರಿಯಾಗಿವೆ ಎಂದು ಹೇಳಿದರು. 

ಅಂಬಿಗ ಸಮಾಜ ಪ್ರಗತಿ ಹೊಂದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸಮಾಜದವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದುವರೆಯಲು  ಶಿಕ್ಷಣವಂತರಾಗಬೇಕು. ಸಕರ್ಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಇದರ ಸದುಪಯೋಗ ಪಡೆದುಕೊಂಡು ಸಮಾಜ  ಅಭಿವೃದ್ದಿ ಹೊಂದಲು ಕರೆ ನೀಡಿದರು. 

ಹುಕ್ಕೇರಿ ತಾಲೂಕು ಬಿಸಿ ಊಟ ಅಧಿಕಾರಿ ಎ.ಬಿ ಬಿರಾದಾರ ಮಾತನಾಡಿ ಶರಣರು ಸೂಫಿ ಸಂತರು ನೆಲೆಸಿದ ಈ ನಾಡಿನಲ್ಲಿ ಅವರ ಆದರ್ಶ, ತತ್ವಗಳು, ಹಿತನುಡಿಗಳು ಇಂದಿಗೂ ಎಲ್ಲ ಸಮುದಾಯಗಳಿಗೂ ಆದರ್ಶಮಯವಾಗಿವೆ ಮಾನವರಾದ ನಾವು ಯಾವುದೇ ಸಮುದಾಯವನ್ನು ಕೀಳಾಗಿ ಕಾಣಬಾರದು ನಾವೆಲ್ಲರೂ ಒಂದೇ ಜಾತಿಯವರು ಎಂದು ಪ್ರತಿಪಾದಿಸಿದ್ದರು ಅಂಬಿಗರ ಚೌಡಯ್ಯನವರು ನೇರ, ನಿಷ್ಟುರ ವಚಣಕಾರ ಶ್ರೀ ಜಗಜ್ಯೋತಿ ಬಸವೇಶ್ವರರ ಸಮಕಾಲಿನವರಾಗಿದ್ದರು ಎಂದು ಹೇಳಿದರು.

 ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕಾಶೀಬಾಯಿ ವಠಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಶಿಕ್ಷಕ ಎಸ್.ಎಸ್ ಗರಸಂಗಿ ಪ್ರಾಸ್ತಾವಿಕ ಮಾತನಾಡಿದರು ಶ್ರೀ  ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜ ಸೇವಾ ಸಂಘ ಅಧ್ಯಕ್ಷ ಶಿವಶಂಕರ ಕೋಲಕಾರ ಕಾರ್ಯಕ್ರಮವನ್ನು ನಿರೂಪಿಸಿದರು ದುಂಡಪ್ಪ ಆಸಂಗಿ ವಂದಿಸಿದರು. ಕಾರ್ಯಕ್ರಮದ ಮುಂಚೆ ಗಂಗಾ ಪರಮೇಶ್ವರಿಯ ಕಂಚಿನ ಮೂತರ್ಿ , ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಲ್ಲಕ್ಕಿ  ಹಾಗೂ ಕುಂಬದೊಂದಿಗೆ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಂದೇ ರಾತ್ರಿ "ಬಂದರೇ ನೋಡ ಬಂಗಾರಿ" ಹಾಸ್ಯ ಬರಿತ ನಾಟಕ ಪ್ರದರ್ಶನಗೊಂಡಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ಮಹಾದೇವಿ ರೊಳ್ಳಿ, ಸುರೇಶ ವಠಾರ, ಅಶೋಕ ನಿಂಗನೂರ, ಬಾಬು ಕಲಗುಕರ್ಿ, ಶಿವಾನಂದ ಬಮರಡ್ಡಿ, ನಾಗಪ್ಪ ದಳವಾಯಿ, ಗ್ರಾಮದ ಮುಖಂಡರಾದ ಚಂದ್ರಕಾಂತ ಶಿರೋಳ, ನೀಲು ಲಮಾಣಿ, ರವಿ ಕಲಗುಕರ್ಿ ಸಮಾಜದ ಮುಖಂಡರು ಹಿರಿಯರು, ಮಹಿಳೆಯರು ಇತರರು ಉಪಸ್ಥಿತರಿದ್ದರು.