ಅನುದಾನ ತಾರತಮ್ಯ: ಸರ್ಕಾರ ವಿರುದ್ಧ ಶಾಸಕ ಕೃಷ್ಣನಾಯಕ ಆಕ್ರೋಶ
Grant discrimination: MLA Krishnanayak's anger against the government
ಹೂವಿನಹಡಗಲಿ: 17: ’ಬಿಜೆಪಿ ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿರುವ ರಾಜ್ಯ ಸರಕಾರ ವಿರುದ್ಧ ಶಾಸಕ ಕೃಷ್ಣನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಗಮಕ್ಕೆ ನೀಡಿರುವ 5 ಸಾವಿರ ಕೋಟಿ ರೂ. ಕೇವಲ ಕಾಂಗ್ರೆಸ್ ಶಾಸಕರಿಗೆ ಮಾತ್ರ ಹಂಚಿಕೆಯಾಗುತ್ತಿದೆ. ಬಿಜೆಪಿ ಶಾಸಕರಿಗೆ ಕೊಡದೇ ತಾರತಮ್ಯ ಆಗುತ್ತಿದೆ ಎಂದು ಆರೋಪಿಸಿದರು. ಕೆಕೆಆರಿ್ಡಬಿ ಅನುದಾನ 7ಜಿಲ್ಲೆಗಳ ಅಭಿವೃದ್ಧಿಗೆಅನುದಾನ ನೀಡಬೇಕು. ಕ್ಷೇತ್ರದ ಶಾಸಕರಿಂದ ಕ್ರಿಯಾಯೋಜನೆ ಪಡೆದು ಹಣ ಹಂಚಿಕೆಯಾಗಬೇಕು. ಆದರೆ ಸರಕಾರ 1470 ಕೋಟಿ ರೂ.ಗಳನ್ನು ಶಿಕ್ಷಣ, ಆರೋಗ್ಯ, ಕಾರ್ಮಿಕ ಹಾಗೂ ಪ್ರವಾಸೋದ್ಯಮ ಸಚಿವರಿಗೆ ಹಂಚಿಕೆ ಮಾಡಲಾಗುತ್ತಿದೆ. ಸಚಿವರು ತಮ್ಮ ಪಕ್ಷದ ಶಾಸಕರಿಗೆ ಮಾತ್ರ ಅನುದಾನ ನೀಡುತ್ತಿದ್ದಾರೆ. ಬಿಜೆಪಿಯ ಶಾಸಕರಿಂದಲೂಕ್ರಿಯಾಯೋಜನೆ ಪಡೆಯದೇ ತಾರತಮ್ಯ ಮಾಡುತ್ತಿ ರುವುದು ಕ್ಷೇತ್ರಗಳ ಜನರನ್ನು ಅಭಿವೃದ್ಧಿಯಿಂದ ವಂಚಿತಗೊಳಿಸಲಾಗುತ್ತಿದೆ ಎಂದು ಟೀಕಿಸಿದರು.
ನಿಗಮದಿಂದ ಸಾವಿರ ಕೋಟಿ ರೂ.ಗಳನ್ನು ಪ್ರಾದೇಶಿಕ ನಿಧಿಯಾಗಿ ಕಾಯ್ದಿರಿಸಿದೆ, ಬರೀ ಕಾಂಗ್ರೆಸ್ ಶಾಸಕರಿಗೆ ಹಂಚಿಕೆ ಮಾಡಲಾಗುತ್ತಿದೆ. ಜತೆಗೆ ಸಿಎಂ ವಿವೇಚನೆ 125 ಕೋಟಿ ರೂ., ಕೆಕೆಆರ್ ಡಿಬಿ ಸಚಿವರ ವಿವೇಚನೆ 125ಕೋಟಿ ರೂ., ನಿಗಮದ ಅಧ್ಯಕ್ಷರ ವಿವೇಚನೆ 125ಕೋಟಿ ರೂ., ಹೀಗೆ ಪ್ರತ್ಯೇಕವಾಗಿ ಹಂಚಿಕೆ ಮಾಡಿಕೊಂಡು ಕೇವಲ ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ನೀಡಲಾಗುತ್ತಿದೆ. ಜತೆಗೆ ಬಡ್ಡಿ ಹಣದಲ್ಲೂ ತಾರತಮ್ಯ ಮಾಡುತ್ತಿರುವ ಸರಕಾರ ಇಡಿಯಾಗಿ ಕೆಕೆಆರಿ್ಡಬಿ ಪ್ರದೇಶದ ಮತದಾರರನ್ನು ವಂಚಿಸುತ್ತಿದೆ. ಬಿಜೆಪಿ ಶಾಸಕರಿಗೆ ಅನುದಾನ ನೀಡದಿದ್ದರೆ ಸರಕಾರದ ತಾರತಮ್ಯ ನೀತಿಯನ್ನು ಸದನದಲ್ಲಿ ಧರಣಿ, ರಾಜ್ಯಪಾಲರಿಗೆ ದೂರು ಕೊಡುವುದು ಸೇರಿದಂತೆ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 