ಮೈಸೂರು-ಅಜ್ಮೀರ ರೈಲಿಗೆ ಘಟಪ್ರಭಾದಲ್ಲಿ ಭವ್ಯ ಸ್ವಾಗತ
Grand welcome for the Mysuru-Ajmer train at Ghataprabha
ಘಟಪ್ರಭಾ 28: ಶುಕ್ರವಾರ ದಿ. 28- ರಂದು ಮದ್ಯಾಹ್ನ 11--45 ಕ್ಕೆ ರೇಲ್ವೆ ನಿಲ್ದಾಣದಲ್ಲಿ ಮೈಸೂರು-ಅಜ್ಮೀರ ರೈಲು ನಿಲುಗಡೆಯನ್ನು ಕಲ್ಪಿಸಿದ್ಜಕ್ಕಾಗಿ ಸಂತೋಷ ವ್ಯಕ್ತ ಪಡಿಸಿ ಹಿರಿಯರೊಂದಿಗೆ ಸಂಭ್ರಮದಿಂದ ಸ್ವಾಗತ ಮಾಡಿ ಸಭೆಯನ್ನು ನಡೆಸಲಾಯಿತು. ಜೈಂಟ್ಸ್ ಗ್ರೂಪ್ ಆಫ್ ಘಟಪ್ರಭಾ, ಶ್ರೀ ಮಲ್ಲಿಕಾರ್ಜುನ ದೇವರ ಕಾರ್ತಿಕ ಸೇವಾ ಸಂಘದಿಂದ ಕಾರ್ಯಕ್ರಮ ನಡೆಯಿತು.ಹಿರಿಯರಾದ ಸುರೇಶ್ ಪಾಟೀಲ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ರಾಮಣ್ಣ ಹುಕ್ಕೇರಿ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ ರೈಲು ಹೋರಾಟಗಾರರಾದ ವಿಶ್ವನಾಥ್ ಯಾದಗೂಡೆ, ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣಾ ಚೌಕಶಿ, ಶೌಕತ ಕಬ್ಬೂರ, ಮಹ್ಮದಅಲಿ ಕೊಣ್ಣೂರ ಮುಂತಾದವರು ಮಾತನಾಡಿ ರೇಲ್ವೆ ಮಂತ್ರಿಗಳು,
ಸಂಸತ ಸದಸ್ಯ ಜಗದೀಶ ಶೆಟ್ಟರ ಹಾಗೂ ಮಾಜಿ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಎಲ್ಲಾ ಮುಖಂಡರಿಗೂ ಮತ್ತು ರೈಲ್ವೇ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಭೂಪಾಲ ಖೆಮಲಾಪೂರೆ, ಆನಂದ ದೇಶಪಾಂಡೆ, ಶ್ರೀಕಾಂತ ಕುಲಕರ್ಣಿ, ಗಣೇಶ ಗಾಣಿಗ, ಅಪ್ಪಾಸಾಬ ಮುಲ್ಲಾ,ಜುಬೇರ ಡಾಂಗೆ, ಇಮ್ರಾನ್ ಬಟಕುರ್ಕಿ, ರೆಹಮಾನ ಮೊರಾಸ , ಮಲ್ಲಪ್ಪಾ ಹುಕ್ಕೇರಿ,ಮಲ್ಲಿಕಾರ್ಜುನ ಮಾಲಗಾಂವಿ, ಸುಭಾಸ ಗಾಯಕ್ವಾಡ, ಸುಭಾಸ ದಡ್ಡೀಕರ, ಪ್ರಕಾಶ ಗಾಯಕ್ವಾಡ, ಮಲ್ಲಿಕಾರ್ಜುನ ಮಠಪತಿ ಸೇರಿದಂತೆ ಹಿಂದು ಮುಸ್ಲಿಮ್ ಬಾಂಧವರು ಹಾಜರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 