ಶ್ರಾವಣ ಮಾಸದ ಕೋಟಿಲಿಂಗಾರ್ಚನೆ: ಹಿರಿಯರಿಗೆ ಸನ್ಮಾನ
Koti-lingarchana during the month of Shravana: Felicitation of elders
ಅಥಣಿ 28: ಅಥಣಿ ಶ್ರೀ ಶಂಕರ ಸೇವಾ ಸಮಿತಿ ವತಿಯಿಂದ ಕಳೆದ 73 ವರ್ಷಗಳಿಂದ ಶ್ರಾವಣ ಮಾಸದಲ್ಲಿ ನಿರಂತರವಾಗಿ ನಡೆಯುತ್ತಿರುವ ಕೋಟಿಲಿಂಗಾರ್ಚನೆ ಕಾರ್ಯಕ್ರಮದ ಅಂಗವಾಗಿ ಸಮಾಜದ ಹಿರಿಯರನ್ನು ಮೂಲ ಗಣೇಶ ಮಂದಿರದಲ್ಲಿ ಸನ್ಮಾನಿಸಲಾಯಿತು.
ಸಂಕೇಶ್ವರದ ಜಗದ್ಗುರು ಶಂಕರಾಚಾರ್ಯ ಪೀಠದ ಮಾರ್ಗದರ್ಶನದಲ್ಲಿ ಆರಂಭಗೊಂಡ ಕೋಟಿಲಿಂಗಾರ್ಚನೆ ಕಾರ್ಯಕ್ರಮವು ಇಲ್ಲಿಯವರೆಗೆ ನಿರಂತರವಾಗಿ ನಡೆಯುತ್ತಿದ್ದು, ಈ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಧುಕರ ಶಾಸ್ತ್ರಿ, ಗಣಪು ಶಾಸ್ತ್ರಿ, ಸುರೇಶ ಜೇರೇ, ಅಣ್ಣಪ್ಪ ಕುಲಕರ್ಣಿ, ಶ್ರೀರಾಮ ಕಟ್ಟಿ, ಲಕ್ಷ್ಮಣ ರಾಮದಾಸಿ, ಅಪ್ಪು ತೇರದಾಳ, ರಾಮಕೃಷ್ಣ ಚಂದ್ರಶಾಲಿ ಹಾಗೂ ಅಶೋಕ ದೀಕ್ಷಿತ ಸೇರಿದಂತೆ ಹಲವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಂಕರ ಸೇವಾ ಸಮಿತಿಯ ಅವಿನಾಶ ಸೋಲಾಪುರ ಮಾತನಾಡಿ, ಹಿರಿಯರು ಕೋಟಿಲಿಂಗಾರ್ಚನೆ ಸೇವೆಯನ್ನು ಹಲವು ವರ್ಷಗಳಿಂದ ಶ್ರದ್ಧೆಯಿಂದ ನಡೆಸಿಕೊಂಡು ಬಂದಿದ್ದಾರೆ. ಇಂತಹ ಮಹನೀಯರನ್ನು ಗುರುತಿಸಿ ಗೌರವಿಸಿರುವುದು ಶಂಕರ ಸೇವಾ ಸಮಿತಿಯ ಶ್ಲಾಘನೀಯ ಕಾರ್ಯವಾಗಿದೆ ಎಂದರು. ಅಲ್ಲದೆ, ಸಮಾಜ ಬಾಂಧವರು ಪ್ರತಿದಿನ ಸಂಧ್ಯಾವಂದನೆ ಮಾಡಿ ಗಾಯತ್ರಿ ಜಪ ಪಠಿಸಬೇಕು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹೋಟೆಲ್ ಉದ್ಯಮಿ ಉಮೇಶರಾವ್ ಬಂಟೋಡಕರ ಮಾತನಾಡಿ, ಕೋಟಿಲಿಂಗಾರ್ಚನೆ ಕಾರ್ಯಕ್ರಮವು ಶ್ರೀರಾಮ ಮಂದಿರದಲ್ಲಿ ಹಲವು ವರ್ಷಗಳ ಕಾಲ, ಬಳಿಕ ಶ್ರೀ ಕಲ್ಲೇಶ್ವರ ದೇವಸ್ಥಾನದಲ್ಲಿ ಹಾಗೂ 2000ನೇ ಇಸವಿಯಿಂದ ಇಂದಿನವರೆಗೆ ಶ್ರೀ ಮೂಲ ಗಣಪತಿ ದೇವಸ್ಥಾನದಲ್ಲಿ ನಿರಂತರವಾಗಿ ನಡೆಯುತ್ತಿದೆ. ಯುವಕರ ತಂಡ ಈ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ ಎಂದರು.
ಇನ್ನೋರ್ವ ಮುಖ್ಯ ಅತಿಥಿ ನಿವೃತ್ತ ಪ್ರಾಂಶುಪಾಲ ಎ.ಆರ್. ಕುಲಕರ್ಣಿ ಮಾತನಾಡಿದರು. ನೇಹಾ ಓಂಟಿಮಾರ್ ಮತ್ತು ಗೌರಿ ಖಂಡಾಳಕರ ನಿರೂಪಿಸಿದರು. ಗೀರೀಶ್ ಕುಲಕರ್ಣಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಸ್ತಾವಿಕವಾಗಿ ಪ್ರದೀಪಶರ್ಮಾ ಜೋಶಿ ಮಾತನಾಡಿದರು. ರಾಘು ಮುತಾಲಿಕ ಅತಿಥಿಗಳನ್ನು ಪರಿಚಯಿಸಿದರು. ಶ್ರೀಪಾದ ದೇಶಪಾಂಡೆ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಸಂಜೀವ ದೇಶಪಾಂಡೆ ಸೇರಿದಂತೆ ಪದಾಧಿಕಾರಿಗಳು ಹಾಗೂ ಸಮಾಜದ ಅನೇಕ ಬಾಂಧವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 