ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರ ಭವ್ಯ ಮೆರವಣಿಗೆ

ಸಂತ  ಸೇವಾಲಾಲ್ ಮಹಾರಾಜರ ಭಾವಚಿತ್ರ ಭವ್ಯ ಮೆರವಣಿಗೆ Grand procession of the portrait of Saint Sewalal Maharaj

ಲೋಕದರ್ಶನ ವರದಿ 

ಕಂಪ್ಲಿ 31 :  ತಾಲ್ಲೂಕಿನ ಸಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಳಿಹಳ್ಳಿ ತಾಂಡದಲ್ಲಿ ಬಂಜಾರ ಸಮುದಾಯದ ಆರಾಧ್ಯದೇವರಾದ ಸಂತ ಸೇವಾಲಾಲ್ ಮಹಾರಾಜರ ಅವರ 287ನೇ ಜಯಂತಿ ಹಾಗೂ ಅರಾಧ್ಯ ದೇವತೆಯಾದ ಮರಿಯಮ್ಮದೇವಿ ನೂತನ ದೇವಸ್ಥಾನಕಾರ್ಯಕ್ರಮಗಳುವಿಜೃಂಭಣೆಯಿಂದ ಜರುಗಿದವು ನಂತರ ತಾಂಡದಲ್ಲಿ ನೂತನವಾಗಿ ನಿರ್ಮಿಸಿರುವ   ಮರಿಯಮ್ಮದೇವಿಯ ದೇವಸ್ಥಾನವನ್ನು ಲೋಕಾರೆ​‍್ಣಯನ್ನು ಬಂಜಾರ ಸಮುದಾಯದ ಗುರುಗಳಾದ ಬಹದ್ದೂರು ಬಂಡ್ ಕುಂಪಳಗಡ್‌ನ ಗೋಸಾಯಿ ಬಾವಾ ಹೇಮಗಿರಿ ಸ್ವಾಮಿಗಳು, ಅರಳಿಹಳ್ಳಿ ತಾಂಡದ ಶಿವಪ್ಪ ಪೂಜಾರಿ, ಹುಣಸಿಹಾಳ ತಾಂಡದ ಶರಣಪ್ಪ ಪೂಜಾರಿ, ಸಂಡೂರು ಸುಶೀಲ ನಗರದ ಸೇವಾಲಾಲ್ ಬಂಜಾರ ಗುರುಪೀಠದ ತಿಪ್ಪೇಸ್ವಾಮಿ ಮಹಾರಾಜರು ಹಾಗೂ ಶಾಸಕ ಜೆ.ಎನ್‌.ಗಣೇಶ್ ಲೋಕಾರೆ​‍್ಣಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜೆ.ಎನ್‌.ಗಣೇಶ್ ಅವರು ಪ್ರತಿಯೊಬ್ಬರಲ್ಲಿ ಶಾಂತಿ, ಮಾನಸಿಕ ನೆಮ್ಮದಿ ನೆಲಸಬೇಕಾದರೆ, ಧಾರ್ಮಿಕ ಕಾರ್ಯಕ್ರಮಗಳು ಅಗತ್ಯವಾಗಿವೆ.  

ಬಂಜಾರ ಸಮುದಾಯದವರು ತಮ್ಮ ಮಕ್ಕಳಿಗೆ ಸಂಸ್ಕಾರ,ಸಂಸ್ಕೃತಿಗಳನ್ನು ಕಲಿಸುವ ಜೊತೆಗೆ ಉತ್ತಮ ಶಿಕ್ಷಣವನ್ನು ನೀಡಬೇಕು, ಸಮುದಾಯದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನಗಳನ್ನು ಸರ್ಕಾರದಿಂದ ಒದಗಿಸುವುದಾಗಿ ಭರವಸೆಯನ್ನು ನೀಡಿದರುನಂತರ ಅಲಂಕೃತವಾಹನದಲ್ಲಿ ಸಂತ   ಶೇವಾಲಾಲ್ ಮಹಾರಾಜ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ಸಮುದಾಯದ ಸ್ವಾಮೀಜಿಗಳೊಂದಿಗೆ ಅರಳಿಹಳ್ಳಿ ತಾಂಡದ ಪ್ರಮುಖ ಬೀದಿಯಲ್ಲಿ ಅದ್ದೂರಿಯಿಂದ ಮೆರವಣಿಗೆಯನ್ನು ನಡೆಸಿದರು. ಮೆರವಣಿಗೆಯಲ್ಲಿ ಬಂಜಾರ ಸಮುದಾಯದ ಮಹಿಳೆಯರು ತಮ್ಮ ಸಂಪ್ರದಾಯಿಕ ಉಡುಪುಗಳನ್ನು ತೊಟ್ಟು ಪೂರ್ಣಕುಂಭ, ಬಂಜಾರ ಮಹಿಳೆಯರ ಸಂಪ್ರದಾಯಿಕ ನೃತ್ಯ ವಿಶೇಷ ಮೆರಗನ್ನು ನೀಡಿದ್ದವು. 

ಕಾರ್ಯಕ್ರಮದಲ್ಲಿ ತಾಂಡದ ನಾಯಕ ಚಂದ್ರ​‍್ಪ ನಾಯಕ್, ಕಾರಭಾರಿ ಭಾಷಾಜಾಧವ್, ಡಾವೋ ಪುಂಡಲೀಕಪ್ಪ, ಜ್ಯೊತಿ ಗುಂಡಾನಾಯಕ್, ಆರ್‌.ಕೆ.ಗವಿಸಿದ್ದಪ್ಪ, ಕಂಪ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಅಫೆಕ್ಸ್‌ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಕೋಟೆ ಷಣ್ಮುಖಪ್ಪ, ಸಿ.ಆರ್‌.ಹನುಮಂತ,ಲಿಂಗಪ್ಪ, ಹನುಮಂತಪ್ಪ, ಲಿಂಬಪ್ಪ, ಕಾಳಪ್ಪ, ಗಂಗಪ್ಪ, ಸೇರಿದಮತೆ ತಾಂಡಾದ ಮುಖಂಡರು,ಮಹಿಳೆಯರು, ಯುವಕರು, ಯುವತಿಯರು ಭಾಗವಹಿಸಿದ್ದರು.