ಹೆಣ್ಣು ಕರುಗಳ ಭವ್ಯ ಪ್ರದರ್ಶನ ಆಗಸ್ಟ್‌ 29ರಂದು

ಹೆಣ್ಣು ಕರುಗಳ ಭವ್ಯ ಪ್ರದರ್ಶನ ಆಗಸ್ಟ್‌ 29ರಂದು  Grand exhibition of female calves on August 29

ಪಾಲಬಾವಿ, ಆ.27: ಕರ್ನಾಟಕ ಹಾಲು ಮಹಾಮಂಡಳ ಬೆಂಗಳೂರು ಹಾಗೂ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಬೆಳಗಾವಿ, ಕಪ್ಪಲಗುಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ಕಲ್ಲೂರ, ಅಂಗಡಿ ತೋಟ ಹಾಗೂ ಹನುಮಾನ ನಗರ ಹಾಲು ಉತ್ಪಾದಕರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆ.29ರಂದು ಬೆಳಿಗ್ಗೆ 9 ಗಂಟೆಗೆ ಹೆಣ್ಣು ಕರುಗಳ ಭವ್ಯ ಪ್ರದರ್ಶನ ಆಯೋಜಿಸಲಾಗಿದೆ.  

ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಶಿವಾನಂದ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಕಪ್ಪಲಗುಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿದ್ದಪ್ಪ ಬದ್ರಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.  

ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ವಿವೇಕರಾವ್ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀಕಾಂತ ವಿ.ಎನ್‌., ಕರ್ನಾಟಕ ಹಾಲು ಮಂಡಳಿಯ ನಿವೃತ್ತ ಜಂಟಿ ನಿರ್ದೇಶಕ ಡಾ. ವಿ.ಕೆ. ಜೋಶಿ, ರಾಯಬಾಗ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಎಂ.ಬಿ. ಪಾಟೀಲ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.  

ಪ್ರದರ್ಶನದಲ್ಲಿ ಎಚ್‌.ಎಫ್‌., ಜರ್ಸಿ, ದೇಶಿ ಹೆಣ್ಣು ಆಕಳುಗಳು ಹಾಗೂ ಎಮ್ಮೆ ಹೆಣ್ಣು ಕರುಗಳ ಭವ್ಯ ಪ್ರದರ್ಶನ ನಡೆಯಲಿದೆ. ಪ್ರದರ್ಶನದಲ್ಲಿ ಭಾಗವಹಿಸುವ ಹೆಣ್ಣು ಕರುಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಗುವುದು ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕ ಸುರೇಶ ಶಿರೋಳ ಹಾಗೂ ಶ್ರೀಶೈಲ ಕೂಡಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.