ಮುಂಡಗೋಡದಲ್ಲಿ ’ಕಾಯಕ ಯೋಗಿ’ ನುಲಿಯ ಚಂದಯ್ಯ ಜಯಂತಿ ವೈಭವ!ಸಮಾಜಕ್ಕೆ ಶಿಕ್ಷಣವೇ ನಿಜವಾದ ಆಸ್ತಿ!
Grand celebration of 'Kayaka Yogi' Nuliya Chandayya Jayanti in Mundgod! Education is the true asset
ಲೋಕದರ್ಶನ ವರದಿ
ಮುಂಡಗೋಡ 28: 12ನೇ ಶತಮಾನದ ಮಹಾನ್ ಕಾಯಕ ಯೋಗಿ, ಶಿವಶರಣ ನುಲಿಯ ಚಂದಯ್ಯನವರ 919ನೇ ಜಯಂತಿಯನ್ನು ಮುಂಡಗೋಡದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯಿತಿ ಹಾಗೂ ಕೊರವರ (ಕೊರವರ, ಕೊರಮ, ಕೊರಚ) ಸಮಾಜದ ಒಕ್ಕೂಟದ ವತಿಯಿಂದ ಅತ್ಯಂತ ಸಂಭ್ರಮ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. *ಶಿಕ್ಷಣವೇ ನಿಜವಾದ ಆಸ್ತಿ - ಶಿಕ್ಷಕ ಆನಂದ್ ಎಸ್ ಕೊರವರ ಖಡಕ್ ಕರೆ:* ಕಾರ್ಯಕ್ರಮವನ್ನು ಸ್ವಾಗತಿಸಿ ಉದ್ಘಾಟಿಸಿ ಮಾತನಾಡಿದ ಶಿಕ್ಷಕ ಆನಂದ್ ಕೊರವರ ಅವರು, ಶರಣರ ಕಾಯಕ ಸಿದ್ಧಾಂತ ಮತ್ತು ಸಮಾನತೆಯ ಮೌಲ್ಯಗಳನ್ನು ಸ್ಮರಿಸಿದರು.
"ಸಮಾಜದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಆಸ್ತಿ-ಪಾಸ್ತಿಗಿಂತ ಶಿಕ್ಷಣವೇ ನಮ್ಮ ಮಕ್ಕಳಿಗೆ ಕೊಡುವ ನಿಜವಾದ ಶಕ್ತಿ" ಎಂದು ಸಮಾಜಕ್ಕೆ ಕರೆ ನೀಡಿದರು. ಜೊತೆಗೆ, ಸರ್ಕಾರಿ ಯೋಜನೆಗಳು ಮತ್ತು ಮೀಸಲಾತಿಯ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. *ಶಾಸಕ ಹೆಬ್ಬಾರ್ಗೆ ಅಭಿನಂದನೆ ಸಲ್ಲಿಸಿದ ಸಮಾಜ* : ಮೂರ್ತಿ ಪ್ರತಿಷ್ಠಾಪನೆಗೆ ಜಾಗ! ಶ್ರೀ ಶಿವಶರಣ ನುಲಿಯ ಚಂದಯ್ಯನವರ ನೂತನ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರಿ ಜಮೀನು ಮಂಜೂರು ಮಾಡಿಸಿದ ಶಾಸಕ ಶ್ರೀ ಶಿವರಾಮ ಹೆಬ್ಬಾರ ಅವರಿಗೆ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು.
ಸಮಾಜದ ಅಧ್ಯಕ್ಷ ಶ್ರೀ ರಾಜು ತಿಪ್ಪಣ್ಣಾ ಕೊರವರ ಮಾತನಾಡಿ, ಯುವಜನರ ಸಹಕಾರದೊಂದಿಗೆ ಸಮಾಜದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಕೈಗೊಳ್ಳಲಿರುವ ಹೊಸ ಯೋಜನೆಗಳ ಕುರಿತು ತಿಳಿಸಿದರು. ಶರಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರಾದ ಮುನೇಶ್ವರ ಕೊರವರ,ಹನುಮಂತಪ್ಪ ಕೊರವರ,
ದಾನಪ್ಪ ಕೊರವರ, ಪರಶುರಾಮ ಭಿ ಕೊರವರ, ಹನುಮಂತಪ್ಪ ಕೊರವರ, ಬಸವರಾಜ ಕೊರವರ, ಹುಲಿಯಪ್ಪ ಕೊರವರ, ಪ್ರಕಾಶ ಕೊರವರ, ಮಲ್ಲಿಕಾರ್ಜುನ ಭಂಜತ್ರಿ, ಪರಶುರಾಮ ಕೊರವರ, ನಾಗಪ್ಪ ಕೊರವರ, ಯಲಪ್ಪ ಕೊರವರ, ಶ್ರೀಕಾಂತ ಕೊರವರ, ಹನುಮಂತ ಯ ಕೊರವರ, ಗಂಗಾಧರ ಕುಚಿಕೋರ, ಗೋಪಿ ಕುಚಿಕೋರ, ಸೇರಿದಂತೆ ಸಮಾಜದ ಪ್ರಮುಖರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕ ಮಲ್ಲಿಕಾರ್ಜುನ ವಂದನಾರೆ್ಣ ಸಲ್ಲಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 