ನಂದಿಹಳ್ಳಿಯಲ್ಲಿ ಸಂಭ್ರಮದ ಜೋಡಿ ಪಲ್ಲಕ್ಕಿ ಉತ್ಸವ
Grand Twin-Palanquin Festival at Nandihalli
ಲೋಕದರ್ಶನ ವರದಿ
ಹೂವಿನ ಹಡಗಲಿ ಸೆ. 01- : ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆ ನಾಲ್ಕನೇ ಮಂಗಳವಾರ ಸೋಗಿ ವೀರಭದ್ರೇಶ್ವರಸ್ವಾಮಿ ಮತ್ತು ಕಂಠಿ ಬಸವೇಶ್ವರ ಸ್ವಾಮಿಯ ಜೋಡು ಪಲ್ಲಕ್ಕಿ ಉತ್ಸವವು ಸಡಗರ ಸಂಭ್ರಮದಿಂದ ಜರುಗಿತು.ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಬಂದ ಭಕ್ತರು ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಿಸಿದರು. ಮಲ್ಲಿಗೆ ಹೂವುಗಳಿಂದ ಸಿಂಗಾರಗೊಂಡ ಪಲ್ಲಕ್ಕಿ ಉತ್ಸವದಭವ್ಯ ಮೆರವಣಿಗೆಯಲ್ಲಿ ಸಮಾಳ,ನಂದಿಕೋಲು, ಮಂಗಳ ವಾದ್ಯಗಳು ಮೆರಗು ತಂದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಶ್ರಾವಣಮಾಸದ ನಾಲ್ಕನೇ ಸೋಮವಾರ ಸಂಜೆ ಸೋಗಿ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಬರಮಾಡಿಕೊಳ್ಳಲಾಯಿತು. ಬೆಳಿಗ್ಗೆ ಕಂಠಿ ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ,ವಿಶೇಷ ಪೂಜೆ ನೆರವೇರಿಸ ಲಾಯಿತು. ಗ್ರಾಮದ ಸುತ್ತಮುತ್ತಲಿನಿಂದ ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸಿದ್ದರುಸೋಗಿ ರೇಣುಕಾ ರಾದ್ಯ.ಹೆಚ್.ಮಹೇಶ್ ಯ್ಯ ಸ್ವಾಮಿಗಳ ನೇತ್ರತ್ವದಲ್ಲಿದೇವಸ್ಥಾನದ ಸಮಿತಿ ಅದ್ಯಕ್ಷರು,ಸರ್ವ ಸದಸ್ಯರು ಉಸ್ತುವಾರಿ ವಹಿಸಿದ್ದರು.ಸುತ್ತುಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 