ನಂದಿಹಳ್ಳಿಯಲ್ಲಿ ಸಂಭ್ರಮದ ಜೋಡಿ ಪಲ್ಲಕ್ಕಿ ಉತ್ಸವ

ನಂದಿಹಳ್ಳಿಯಲ್ಲಿ ಸಂಭ್ರಮದ ಜೋಡಿ ಪಲ್ಲಕ್ಕಿ ಉತ್ಸವ  Grand Twin-Palanquin Festival at Nandihalli


ಲೋಕದರ್ಶನ ವರದಿ 

ಹೂವಿನ ಹಡಗಲಿ ಸೆ. 01- : ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆ ನಾಲ್ಕನೇ  ಮಂಗಳವಾರ ಸೋಗಿ ವೀರಭದ್ರೇಶ್ವರಸ್ವಾಮಿ ಮತ್ತು ಕಂಠಿ ಬಸವೇಶ್ವರ ಸ್ವಾಮಿಯ ಜೋಡು ಪಲ್ಲಕ್ಕಿ   ಉತ್ಸವವು ಸಡಗರ ಸಂಭ್ರಮದಿಂದ  ಜರುಗಿತು.ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಬಂದ ಭಕ್ತರು ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ​‍್ಿಸಿದರು. ಮಲ್ಲಿಗೆ ಹೂವುಗಳಿಂದ ಸಿಂಗಾರಗೊಂಡ ಪಲ್ಲಕ್ಕಿ ಉತ್ಸವದಭವ್ಯ ಮೆರವಣಿಗೆಯಲ್ಲಿ ಸಮಾಳ,ನಂದಿಕೋಲು, ಮಂಗಳ ವಾದ್ಯಗಳು ಮೆರಗು ತಂದವು.  ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಶ್ರಾವಣಮಾಸದ ನಾಲ್ಕನೇ ಸೋಮವಾರ ಸಂಜೆ ಸೋಗಿ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಬರಮಾಡಿಕೊಳ್ಳಲಾಯಿತು. ಬೆಳಿಗ್ಗೆ ಕಂಠಿ ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ,ವಿಶೇಷ ಪೂಜೆ ನೆರವೇರಿಸ ಲಾಯಿತು.  ಗ್ರಾಮದ ಸುತ್ತಮುತ್ತಲಿನಿಂದ  ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸಿದ್ದರುಸೋಗಿ ರೇಣುಕಾ ರಾದ್ಯ.ಹೆಚ್‌.ಮಹೇಶ್ ಯ್ಯ ಸ್ವಾಮಿಗಳ ನೇತ್ರತ್ವದಲ್ಲಿದೇವಸ್ಥಾನದ ಸಮಿತಿ ಅದ್ಯಕ್ಷರು,ಸರ್ವ ಸದಸ್ಯರು ಉಸ್ತುವಾರಿ ವಹಿಸಿದ್ದರು.ಸುತ್ತುಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.