18 ವರ್ಷಗಳ ಬಳಿಕ ಅದ್ದೂರಿಯಾಗಿ ನಡೆದ ದೇವಿ ಜಾತ್ರೆ
Grand Goddess fair held after 18 years
ಗದಗ, ಆ.26: ನಗರದ ದ್ಯಾಮವ್ವ ಮತ್ತು ದುರ್ಗಮ್ಮ ದೇವಿ ಜಾತ್ರೆಯ ಸಂಭ್ರಮ ಮನೆ ಮಾಡಿದ್ದು, 18 ವರ್ಷಗಳ ಬಳಿಕ ನಡೆಯುತ್ತಿರುವ ವಿಶೇಷ ಜಾತ್ರೆಯ ಸವಿಯನ್ನು ಸವಿಯಲು ಅಬಾಲವೃದ್ಧರಾದಿಯಾಗಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
ನಗರದ ಓಕ್ಕಲಗೇರಿಯಲ್ಲಿ ಸಂಪೂರ್ಣ ಶೃಂಗಾರಗೊಂಡಿರುವ ಜಾತ್ರಾ ವಾತಾವರಣದಲ್ಲಿ ಬೀಗರೂ, ಸಂಬಂಧಿಕರೂ, ಉದ್ಯೋಗ ನಿಮಿತ್ತ ಹೊರಹೋದವರೂ, ಸ್ನೇಹಿತರು ಹಾಗೂ ಪರಿಚಯಸ್ಥರು ಮರಳಿ ಊರಿನತ್ತ ಮುಖ ಮಾಡಿದ್ದು, ಪರಸ್ಪರ ಕುಶಲೋಪರಿ ವಿಚಾರಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಜಾತ್ರೆ ಆರಂಭವಾಗಿ ಒಂಬತ್ತು ದಿನಗಳು ಕಳೆದಿದ್ದರೂ, ಸಂಭ್ರಮ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಗೆ ಉಡಿ ತುಂಬಿ ಹರಕೆ ಸಲ್ಲಿಸುತ್ತಿದ್ದಾರೆ. ನಗರದ ಮನೆ ಮನೆಗಳಲ್ಲಿ ದೇವಿಯರ ಹೊನ್ನಾಟ ನಡೆಯುತ್ತಿದ್ದು, ಉಡಿ ತುಂಬಿಸಿಕೊಳ್ಳುವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಈ ದೃಶ್ಯಗಳು ಜನರ ಕಣ್ಮನ ಸೆಳೆಯುತ್ತಿವೆ.
ಸಂಭ್ರಮದ ಹೊನ್ನಾಟದಲ್ಲಿ ಮಕ್ಕಳು, ಯುವಕರು ಹಾಗೂ ಹಿರಿಯರು ಕೈಯಲ್ಲಿ ಭಂಡಾರದ ಪಾಕೆಟ್ಗಳು ಮತ್ತು ಸಣ್ಣ ಸಣ್ಣ ಚೀಲಗಳನ್ನು ಹಿಡಿದು ಪರಸ್ಪರ ಭಂಡಾರ ಎರಚಿಕೊಂಡು ಸಂಭ್ರಮಿಸಿದರು. ಇದರಿಂದ ಇಡೀ ಗದಗ ನಗರವೇ ಭಂಡಾರಮಯವಾಗಿ ಕಂಗೊಳಿಸಿತು. ದೇವಿಹೊತ್ತು ಭಕ್ತರು ‘ಉದೋ ಉದೋ’ ಎಂದು ಘೋಷಣೆ ಕೂಗುತ್ತಾ ಊರು ತುಂಬಾ ಸಾಗಿದರು.
ಜಾತ್ರೆ ಯಶಸ್ವಿಯಾಗಲು ಹಿರಿಯರು ಹಾಗೂ ಯುವ ಸಂಘಟನೆಗಳ ಸದಸ್ಯರು ಟೊಂಕಕಟ್ಟಿ ನಿಂತಿದ್ದು, ಜಾತ್ರೆಯ ಸುವ್ಯವಸ್ಥೆಗೆ ಶ್ರಮಿಸುತ್ತಿದ್ದಾರೆ. ಗ್ರಾಮಗಳ ಸುತ್ತಮುತ್ತಲಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು, ಚಕ್ಕಡಿ ಹಾಗೂ ವಾಹನಗಳ ಮೂಲಕ ಗ್ರಾಮಗಳತ್ತ ತೆರಳುವ ದೃಶ್ಯ ಕಂಡುಬಂತು.
ಮುತೈದೆಯರು ದೇವಿಯ ಹೊನ್ನಾಟವನ್ನು ಕಣ್ತುಂಬಿಕೊಂಡು, ತಮ್ಮ ಕಿರಿಯ ವಯಸ್ಸಿನಲ್ಲಿ ಕಂಡಿದ್ದ ಜಾತ್ರೆಯ ಸಂಭ್ರಮವನ್ನು ನೆನಪಿಸಿಕೊಂಡು ಸಂತಸಪಟ್ಟರು. 18 ವರ್ಷಗಳ ಬಳಿಕ ನಡೆಯುತ್ತಿರುವ ಜಾತ್ರೆಯ ಹೊನ್ನಾಟದ ದೃಶ್ಯಗಳು ಎಲ್ಲರಲ್ಲೂ ಹರ್ಷ ಮೂಡಿಸಿವೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 