ಅಡರಕಟ್ಟಿ ಗ್ರಾಮದಲ್ಲಿ ಸಂಭ್ರಮದ ಗಣೇಶೋತ್ಸವ

ಅಡರಕಟ್ಟಿ ಗ್ರಾಮದಲ್ಲಿ ಸಂಭ್ರಮದ ಗಣೇಶೋತ್ಸವ  Grand Ganeshotsava in Adarakatti Village

ಲಕ್ಷ್ಮೇಶ್ವರ, ಸೆ. 24: ತಾಲೂಕಿನ ಅಡರಕಟ್ಟಿ ಗ್ರಾಮದ ಶ್ರೀ ಕರಿಯಮ್ಮ ಯುವಕ ಮಂಡಳಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.  ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಪಕ್ಷದ ಪ್ರಬಲ ಸೇವಾ ಆಕಾಂಕ್ಷಿ ಎಸ್‌. ಪೂಜಾರ ಅವರನ್ನು ಹಾಗೂ ಗ್ರಾಮದ ಗುರು-ಹಿರಿಯರನ್ನು ಗಣಪತಿ ಯುವಕ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.  

ನಂತರ ಗ್ರಾಮದಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಸಾವಿರಾರು ಭಕ್ತರು ಪಾಲ್ಗೊಂಡು ಮಹಾಪ್ರಸಾದ ಸ್ವೀಕರಿಸಿ ಗಣಪತಿಯ ಕೃಪಾಶೀರ್ವಾದಕ್ಕೆ ಪಾತ್ರರಾದರು.  ಈ ಸಂದರ್ಭದಲ್ಲಿ ಶ್ರೀ ಕರಿಯಮ್ಮ ಯುವಕ ಮಂಡಳಿಯ ಮುಖಂಡರು, ಅಡರಕಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗಪ್ಪ ಪಾಟೀಲ, ಮಾಂತೇಶ ಅಂಗಡಿ, ಮಾಂತೇಶ ಹವಳದ, ಚನ್ನಬಸಪ್ಪ ಅಬನೂರ, ಕುಬೇರ​‍್ಪ ಹವಳದ, ಮಾಂತೇಶ ಹವಳದ, ಲಕ್ಷ್ಮಣ ಮರಾಠಿ, ಅಶೋಕ ರೊಳ್ಳಿ, ಮಂಜುನಾಥ ಮೆಣಸಿನಕಾಯಿ, ನಾರಾಯಣ ಮರಾಠಿ, ಮಲ್ಲಿಕಾರ್ಜುನ ಮರಾಠಿ ಸೇರಿದಂತೆ ಗ್ರಾಮದ ಗುರು-ಹಿರಿಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.