ಗುರ್ಲಾಪೂರದಲ್ಲಿ ಭಜನಾ ಹಾಗೂ ಪ್ರವಚನ ಮಹಮಂಗಲ

ಗುರ್ಲಾಪೂರದಲ್ಲಿ ಭಜನಾ ಹಾಗೂ ಪ್ರವಚನ ಮಹಮಂಗಲ Grand Concluding Ceremony of Bhajans and Discourses in Gurlapur

ಲೋಕದರ್ಶನ ವರದಿ 

ಗುರ್ಲಾಪೂರ 08: ಗ್ರಾಮದ ಕಂಬಳಿ ಪ್ಲಾಟದಲ್ಲಿರುವ ವೀರಭದೇಶ್ವರ ದೇವಸ್ಥಾನದಲ್ಲಿ 15   ನೇ ವರ್ಷದ ಶ್ರಾವಣ ಮಾಸದ ನಿಮಿತ್ಯವಾಗಿ ಜರುಗಿದ ಭಜನಾ ಹಾಗೂ ಪ್ರವಚನ ಕಾರ್ಯಕ್ರಮದ ಮಹಾ ಮಂಗಳಾರತಿ ಕಾರ್ಯಕ್ರಮವು ಭುದವರಾರ ದಿ.9 ರಂದು ಮುಂಜಾನೆ 8.ಗಂಟೆಗೆ   ವೀರಭದೇಶ್ವರ ದೇವಸ್ಥಾನ ಆವರಣದಲ್ಲಿ   ದತ್ತಾತ್ರೇಯಬೋದ ಸ್ವಾಮಿಗಳು   ಶಿವಬೋಧರಂಗ ಮಠ ಮೂಡಲಗಿ. ಇವರ ದಿವ್ಯ ಸಾನಿದ್ಯದಲ್ಲಿ ನೆರೆವರಿಸಲಾಗುವದು.  ಮುಂಜಾನೆ 8 ಗಂಟೆಗೆ   ವೀರಭ್ರೇಶ್ವರನಿಗೆ ವಿಶೆಷಪೂಜೆಮಾಡಿ ಮಹಾ  ಮಂಗಾಳರತಿ ಮಾಡುವರು. ನಂತರ ಗ್ರಾಮದ   ವೀರಭದ್ರೇಶ್ವರ ಭಜನಾ ಮಂಡಳ ಹಾಗೂ   ಸಿದ್ದಾರೋಢ ಭಜನಾ ಮಂಡಳ ಸಾ; ಚಿಕ್ಕನಂದಿ ತಂಡಗಳಿಂದ ಭಜನಾಪದಗಳು ಜರಗುವದು. ಶ್ರೀಗಳಿಂದ ಅಮ್ರತ ನುಡಿಗಳು ನಡೆಯುವದು. 

ಕಾರ್ಯಕ್ರಮದ ಸಾನಿದ್ಯವನ್ನು ಸಿದ್ದೇಶ್ವರ ಶರಣರು ಇಟನಾಳ ನಾರಾಯನ ಗುರುಜಿ ವಡೇರಹಟ್ಟಿ. ಈರಯ್ಯಾ ಹಿರೇಮಠ ಸಿದ್ರಾಮಯ್ಯಾ ಹಿರೇಮಠ ರುದ್ರಯ್ಯಾ ಹಿರೇಮಠ.  ವಹಿಸಲಿದ್ದಾರೆ. ಸಬೆಯ ನೇತ್ರತ್ವವನ್ನು ಭಜನಾ ತಂಡದವರಾದ ಬಸಯ್ಯಾ ಮೂಜನಿದಾರ ಹಾಗೂ ಪ್ರವಚನಕಾರಾದ ಲಕ್ಷ್ಮಣ ಮಾ ಜಾದವ ಮಹಾರಾಜರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ, ಸನ್ಮಾನ್ಯ ಸವೋತ್ತಮ ಜಾತಕಿಹೊಳಿ ಗೌರವ ಅಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರ ಗಟಕ ಗೂಕಾಕ ಹಾಗೂ ಮೂಡಲಗಿ,  ವಾಯ್ ಬಿ ಬಿಸನಾಳ ಪಿ ಎಸ್ ಆಯ್ ಮೂಡಲಗಿ.  ಆಗಮಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಭಾಂವಿ ಜನಪ್ರೀಯ ಶಾಸಕರಾದ ಸನ್ಮಾನ್ಯಶ್ರೀ ಬಾಲಚಂದ್ರಣ್ಣಾ ಜಾರಕಿಹೊಳಿ ವಹಿಸಲಿದ್ದಾರೆ.  ಗ್ರಾಮದ ಹಾಗೂ ಸುತ್ತಮೂತ್ತಲಿನ ಭಕ್ತರು ಆಗಮಸಿ ವೀರಭದ್ರೇಶ್ವರ ದರ್ಶನ ಪಡೆದು ಮಹಾಪ್ರಸಾದ ಮಾಡಿ ಜೀವನ ಪಾವಣ ಮಾಡಿಕೂಳ್ಳ ಬೇಕು ಎಂದು ಕಮಿಟಿಯವರು ತಿಳಿಸಿರುತ್ತಾರೆ.