ಅಂಗಡಿ ಕಳೆದುಕೊಂಡವರಿಗೆ ಶೀಘ್ರದಲ್ಲೇ ಗ್ರಾಮಪಂಚಾಯಿತಿ ವತಿಯಿಂದ ಸುಸಜ್ಜಿತ ಕಾಂಪ್ಲೆಕ್ಸ್ ವ್ಯವಸ್ಥೆ
Gram Panchayat to soon set up a well-equipped complex for those who lost their shops
ಬೀದರ್ 26: ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಮುಖ್ಯ ರಸ್ತೆ ಪಕ್ಕದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಸುಸಜ್ಜಿತ ಕಾಂಪ್ಲೆಕ್ಸ್ ಕಟ್ಟಡಕ್ಕೆ ಇಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಗ್ರಾಮದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮುಂಬಾಗದಲ್ಲಿದ್ದ ಅನಧಿಕೃತ ಶೆಡ್ಡಿನ ಮಳಿಗೆಗಳು ಈತ್ತಿಚೇಗೆ ಗ್ರಾಮ ಪಂಚಾಯಿತಿಯಿಂದ ತೆರವು ಮಾಡಲಾಗಿತ್ತು ಇದೀಗ ಗ್ರಾಮ ಪಂಚಾಯಿತಿ ವತಿಯಿಂದ ಸುಸಜ್ಜಿತ ಕಾಂಪ್ಲೆಕ್ಸ್ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಇಂದು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿ ಉತ್ತಮವಾಗಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಈ ಹಿಂದೆ ಮನ್ನಾಏಖೇಳ್ಳಿ ಗ್ರಾಮಪಂಚಾಯಿತಿ ವತಿಯಿಂದ ಸಭೆ ನಡೆಸಿ ಗ್ರಾಮ ಪಂಚಾಯಿತಿ ಸಭಾ ನಡುವಳಿಯಲ್ಲಿ ಗ್ರಾಪಂ ಅಧ್ಯಕ್ಷ, ಎಲ್ಲಾ ಸದಸ್ಯರನ್ನು ಒಳಗೊಂಡು ಒಪ್ಪಿಗೆ ಮೇರೆಗೆ ಅಂಗಡಿ ತೆರವು ಮಾಡಲಾಗಿತ್ತು ಇದೀಗ ಆ ಸ್ಥಳದಲ್ಲಿ ನಡೆಸುತ್ತಿದ್ದ ಅಂಗಡಿಯ ವ್ಯಾಪಾರಸ್ಥರಿಗೆ ಅಂಗಡಿ ನೀಡಲು ಸೂಚನೆ ನೀಡಲಾಗಿದೆ ಯಾರು ಸಹ ಭಯಪಡುವ ಅವಶ್ಯಕತೆ ಇಲ್ಲ ಅಂಗಡಿ ಕಳೆದುಕೊಂಡವರಿಗೆ ಶೀಘ್ರದಲ್ಲೇ ಗ್ರಾಮಪಂಚಾಯಿತಿ ವತಿಯಿಂದ ನಿರ್ಮಿಸಲಿರುವ ಕಾಂಪ್ಲೆಕ್ಸ್ ನಲ್ಲಿ ಅಂಗಡಿ ಬಾಡಿಗೆಗೆ ನೀಡಲಾಗುವುದು ಎಲ್ಲರಿಗೂ ನ್ಯಾಯ ಒದಗಿಸಲು ಸೂಚನೆ ನೀಡಲಾಗಿದೆ ಎಂದು ಭರವಸೆ ನೀಡಿದರು.
ಮನ್ನಾಏಖೇಳ್ಳಿಯಲ್ಲಿ ಈಗಾಗಲೇ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ದ್ವೀಪ ಅಳವಡಿಸಲು ಹೆಚ್ಚಿನ ಅನುದಾನ ನೀಡಲಾಗಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ನೀಡಿ ಮೂಲಸೌಕರ್ಯ ನೀಡಿ ಹೆಚ್ಚಿನ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಾಣಿಕಪ್ಪ ಖಾಶೆಂಪುರ, ಶಿವಕುಮಾರ ಸ್ವಾಮಿ, ಪ್ರಶಾಂತ ಸಿಂಧೋಲ, ಗ್ರಾಪಂ ಅಧ್ಯಕ್ಷ ರಾಜಕುಮಾರ ಅಗಸಿ, ಪಿಡಿಒ ಭಾಗ್ಯ ಜ್ಯೋತಿ, ಸಂತೋಷ ಹಳ್ಳಖೇಡ, ರಾಜಕುಮಾರ ಪಾಂಚಾಳ, ಜಗನಾಥ್ ಪಂಡಿತ, ಮೋಹನ್, ತಾಜೋದಿನ್, ಫಾರುಖ್ ಜಮಾದಾರ, ವೀರಸಂಗಣ್ಣ ಪವಾಡೆ, ಜಾವೀದ ಪೀರಸಾಬ್, ಭೀಮಶೆಟ್ಟಿ, ಶಂಕರ ಪಂಡಿತ್, ರಾಜು ರಾಯಗೊಂಡ, ಮಹ್ಮದ ಮುದಾಶೀರ, ಸೈಯದ್ ಮೋಬಿನ ಅಲಿ, ಮಹ್ಮದ ಇಸ್ಮಾಯಿಲ, ಸುಮಾ ಗಂಡ ಶರಣಪ್ಪ, ಸರ್ದಾರಬಿ ಇಸ್ಮಾಯಿಲ್, ಸೈಯದ್ ಖದೀರ್, ಸೂರ್ಯಕಾಂತ ಆಣದೂರ, ಯೂಸುಫ್ ಅಲಿ, ಅಹ್ಮದ್ ಬಾಗವಾನ, ಜಾಕೀರ ಅಲಿ, ಶೇಖ್ ಫಾರುಖ್, ಕರೀಮ್ ಮತ್ತಿತರರು ಉಪಸ್ಥಿತರಿದ್ದರು. ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರ ಮಾಧ್ಯಮ ಸಂಯೋಜಕ, ಸಹಾಯಕ ನಾಗೇಶ್ ಸಿದ್ದಾ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 