5ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭ

5ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭ  Graduation ceremony for 5th grade students

ಕೊಲ್ಹಾರ  20: ಒಂದು ಸುಂದರವಾದ ಮೂರ್ತಿ ಕೆತ್ತನೆಗೆ ಒಬ್ಬ ಶಿಲ್ಪಿ ಎಷ್ಟು ಶ್ರಮ ಪಡುತ್ತಾನೆ ಅಷ್ಟೇ ಶ್ರಮವನ್ನು ಶಾಲೆಯಲ್ಲಿ ಮಕ್ಕಳ ತಿದ್ದುವಲ್ಲಿ ಶಿಕ್ಷಕರು ಶ್ರಮ ಪಡುತ್ತಾರೆ ಎಂದು ಶಿಕ್ಷಕಿ ರೇಣುಕಾ ಪತಂಗಿ ಹೇಳಿದರು ಗುರುವಾರ ಪಟ್ಟಣದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದು ಶಿಕ್ಷಣ ಕಲಿಸಿದ ಶಾಲೆ ಹಾಗೂ ಊರಿನ ಹೆಸರನ್ನು ತಂದು ಹೆತ್ತ ತಂದೆ ತಾಯಿಗೆ ಒಳ್ಳೆಯ ಮಗನಾಗಬೇಕು ಅದರಂತೆ ಈ ಶಾಲೆಯಲ್ಲಿ ಇರುವ ಪ್ರತಿಯೊಬ್ಬ ಮಕ್ಕಳಲ್ಲಿ ಅವರದ್ದೆಯಾದ ಪ್ರತಿಭೆಯೆ ಇದ್ದು ಅದನ್ನು ಗುರ್ತಿಸಿಕೊಂಡು ದೇಶದ ಒಬ್ಬ ಒಳ್ಳೆಯ ನಾಗರಿಕನಾಗಿ ಎಂದರು ಶಿಕ್ಷಕಿ ಕವಿತಾ ಮುದಕವಿ ಮಾತನಾಡಿ ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಪಡೆದುಕೊಂಡಿರುವ ಶಿಕ್ಷಣವನ್ನು ತಮ್ಮ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳೊಂದಿಗೆ ಸಂಸ್ಕಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು  ಶಿಕ್ಷಕಿ ಪಾರ್ವತಿ ಹರನಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು ಬಳಿಕ ಅತಿ ಹೆಚ್ಚು ಅಂಕ ಪಡೆದ ಅನನ್ಯ ಶರಣಪ್ಪ ಮುಗಳ್ಳೊಳ್ಳಿ 5 ನೇ ತರಗತಿಯ ವಿದ್ಯಾರ್ಥಿನಿಯನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು ಇದೆ ಸಂದರ್ಭದಲ್ಲಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಅಧ್ಯಕ್ಷ ವಿವೇಕಾನಂದ ಹರನಟ್ಟಿ, ಕಾರ್ಯದರ್ಶಿ ಶಾಂತಾ ರಮೇಶ ಹರನಟ್ಟಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯ ಕುಮಾರಿ ಭಾವನಾ, ಶಿಕ್ಷಕ ಆನಂದ ಗಣಿ , ಪತ್ರಕರ್ತರಾದ ಅರುಣಕುಮಾರ ಓರಸಂಗ, ರವಿಕುಮಾರ ತುಪ್ಪದ,ಈರಯ್ಯಾ ಗಣಕುಮಾರ,ಕಾಂತು ಹಡದಪ ಇದ್ದರು