ರಾಜ್ಯಪಾಲ ಥಾವರ್ ಚೆಂದ್ ಗೆಹೋಟ್ಲ್‌ರಿಂದ ಪೀಣ್ಯದಲ್ಲಿ ರೋಟರಿ ಉದ್ಯೋಗ ರೆಡ್ ಕ್ರಾಸ್ ಬ್ಲೆಡ್ ಸೆಂಟರ್ ಉದ್ಘಾಟನೆ

ರಾಜ್ಯಪಾಲ ಥಾವರ್ ಚೆಂದ್ ಗೆಹೋಟ್ಲ್‌ರಿಂದ ಪೀಣ್ಯದಲ್ಲಿ ರೋಟರಿ ಉದ್ಯೋಗ ರೆಡ್ ಕ್ರಾಸ್ ಬ್ಲೆಡ್ ಸೆಂಟರ್ ಉದ್ಘಾಟನೆ Governor Thawar Chend Gehlot inaugurated the Rotary Employment Red Cross Blood Center in Peenya

ಬೆಂಗಳೂರು ಸೆ 17 : ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕರ್ನಾಟಕ ಶಾಖೆ, ರೋಟರಿ ಬೆಂಗಳೂರು ಉದ್ಯೋಗ, ಕೆಎಲ್‌ಇ ಆಸ್ಪತ್ರೆ, ಬೆಂಗಳೂರು ಇವುಗಳ ಸಹಯೋಗದಲ್ಲಿ 17 ಸೆಪ್ಟೆಂಬರ್ 2025 ಪಿಣ್ಯ ಬೆಂಗಳೂರಿನಲ್ಲಿ ರೋಟರಿ ಉದ್ಯೋಗ ರೆಡ್ ಕ್ರಾಸ್ ಬ್ಲೆಡ್ ಸೆಂಟರ್ನ್ನು ಘನತೆವೆತ್ತ ರಾಜ್ಯಪಾಲರಾದ ಥಾವರ್ ಚೆಂದ್ ಗೆಹೋಟ್ಲ್‌ ಅವರು ಉದ್ಘಾಟಿಸಿದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಮುಖ್ಯ ಅತಿಥಿಗಳಾಗಿ, ಐಆರ್ಸಿಎಸ್ ಕರ್ನಾಟಕ ರಾಜ್ಯದ ಕಾರ್ಯಾಧ್ಯಕ್ಷರಾದ ಬಸರೂರ ರಾಜೀವ ಶೆಟ್ಟಿ, ಆಗಮಿಸಿರುವ ಐಆರ್ಸಿಎಸ್ ಉಪಾಧ್ಯಕ್ಷರಾದ ಭಾಸ್ಕರ್ ರಾವ್, ಗೌರವ ಅತಿಥಿಗಳಾಗಿರುವ ರೋಟರಿ ಅಂತರಾಷ್ಟ್ರೀಯ ಡಿಜಿ ಶ್ರೀ ಎಲಿಜೆಬತ್ ಚೇರಿನ್,  ಐಆರ್ಸಿಎಸ್ನ ಉಪ ಕಾರ್ಯಾಧ್ಯಕ್ಷರಾದ ಡಾ.ಶ್ರೀನಿವಾಸ ಹೈತಿ, ಬೆಂಗಳೂರು ರೋಟರಿಯ ಅಧ್ಯಕ್ಷರಾದ ಸಂದೀಪ ಪರ್ವತಿಕರ್, ಎಚ್‌.ಟಿ.ನಾಗೇಶ್, ಸಿಎಸ್ ಶಾಂತರಾಮ ಶೆಟ್ಟಿ, ಉಮಾಕಾಂತ ಆಗಮಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿ ಡಾ.ಪ್ರಭಾಕರ ಕೋರೆಯವರು, ಬೆಂಗಳೂರಿನ ರೋಟರಿ ಉದ್ಯೋಗ ರೆಡ್ ಕ್ರಾಸ್ ಬ್ಲೆಡ್ ಸೆಂಟರ್ ಉದ್ಘಾಟನೆಗೊಂಡಿರುವುದು ಸಂತೋಷವನ್ನು ತಂದಿದೆ. ರೆಡ್ ಕ್ರಾಸ್ ಒಂದು ಅಂತರಾಷ್ಟ್ರೀಯ ಮಾನವೀಯ ಚಳುವಳಿಯಾಗಿದ್ದು, ಯುದ್ಧ ಮತ್ತು ವಿಪತ್ತುಗಳ ಸಮಯದಲ್ಲಿ ಬಳಲುತ್ತಿರುವ ಜನರಿಗೆ ಸಹಾಯ ಮಾಡುತ್ತದೆ. ಇದು ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ, ಮಾನವೀಯ ತತ್ವಗಳನ್ನು ಬೆಳೆಸುತ್ತಿದೆ, ನಮ್ಮ ಕೆಎಲ್‌ಇ ಸಂಸ್ಥೆಯು ರೆಡ್ ಕ್ರಾಸ್ದೊಂದಿದೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದು ಕೈಜೋಡಿಸಿದೆ. ಅದು ರಕ್ತದಾನವಾಗಿರಬಹುದು, ವೈದ್ಯಕೀಯ ತುರ್ತು ಸಂದರ್ಭವಾಗಿ ರಬಹುದು, ನೆರೆ ಹಾವಳಿ ಅಂತಹ ಸಂದರ್ಭದಲ್ಲಿ ನಮ್ಮ ಸಂಸ್ಥೆಯು ಎಲ್ಲ ನೆಲೆಗಳಲ್ಲಿಯೂ ರೆಡ್ ಕ್ರಾಸ್ದೊಂದಿಗೆ ನೆರವನ್ನು ನೀಡಿದೆ. ಸಮಾಜಸೇವೆಯೇ ರೆಡ್ ಕ್ರಾಸ್ ರೋಟರಿಯ ಉದ್ದೇಶಗಳಾಗಿ ಈ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲಿ ದೇಶದ ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸಲಿ. ಕೆಎಲ್‌ಇ ಸಂಸ್ಥೆಯು ಸದಾ ಅದರೊಂದಿಗೆ ಕಾರ್ಯನಿರ್ವಹಿಸಲು ಸಿದ್ಧವಿದೆ ಎಂದು ಹೇಳಿದರು.