ಶ್ರಮಿಕ ವರ್ಗದ ಹಿತ ಕಾಪಾಡುವಲ್ಲಿ ಸರ್ಕಾರಗಳು ವಿಫಲ: ಎಚ್‌.ಎಂ. ಸಂತೋಷ್

ಶ್ರಮಿಕ ವರ್ಗದ ಹಿತ ಕಾಪಾಡುವಲ್ಲಿ ಸರ್ಕಾರಗಳು ವಿಫಲ: ಎಚ್‌.ಎಂ. ಸಂತೋಷ್ Governments have failed to protect the interests of the working class: H.M. Santosh

ಹೂವಿನ ಹಡಗಲಿ 26: ಶ್ರಮಿಕ ವರ್ಗದ ಹಿತಕಾಪಾಡುವಲ್ಲಿ ಆಳುವ ಸರ್ಕಾರಗಳು ವಿಫಲವಾಗಿವೆ ಎಂದು ವಿಜಯನಗರ ಜಿಲ್ಲೆ ಸಿ ಪಿ ಐ ಪಕ್ಷದಉಸ್ತುವಾರಿಕಾಮ್ರೇಡ್ ಎಚ್ ಎಂ ಸಂತೋಷ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಭಾರತಕಮ್ಯುನಿಸ್ಟ್‌ ಪಕ್ಷದ 4ನೇ ತಾಲೂಕು ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ದುಡಿಯುವ ವರ್ಗಕಾರ್ಮಿಕರ ಸಂಕಷ್ಟಗಳನ್ನು ನಿವಾರಿಸುವ ಕೆಲಸ ಜನಪ್ರತಿನಿಧಿಗಳಿಂದ ಆಗುತ್ತಿಲ್ಲ.ಜನಸಾಮಾನ್ಯರ ಮತಗಳಿಂದ ಅಧಿಕಾರದಗದ್ದುಗೆಏರಿರುವ ಸರ್ಕಾರಗಳುನ್ಯಾಯ ಒದಗಿಸುವಲ್ಲಿ ವಿಫಲವಾಗಿವೆ. ಇದರ ವಿರುದ್ಧ ಭಾರತಕಮ್ಯುನಿಸ್ಟ್‌ ಪಕ್ಷ ನಿರಂತರ ಹೋರಾಟ ನಡೆಸಲಿದೆಎಂದರು.ಬೆಲೆ ಏರಿಕೆ ನಿರುದ್ಯೋಗಜ್ವಲಂತ ಸಮಸ್ಯೆಗಳು ಮಹಿಳೆಯರ ಶೋಷಣೆ ಹೆಚ್ಚುತ್ತಿರುವುದುಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.ಭಾರತ ಕಮ್ಯುನಿಸ್ಟ್‌ ಪಕ್ಷದಜಿಲ್ಲಾ ಕಾರ್ಯದರ್ಶಿ ವೀರಣ್ಣಗ್ಯಾರಂಟಿ ಯೋಜನೆಗಳ ಭ್ರಮೆಯಲ್ಲಿ ಸರ್ಕಾರಇದೆ.ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿಯೋಜನೆರೂಪಿಸುತ್ತಿಲ್ಲಎಂದು ಆರೋಪಿಸಿದರು.ಮುಂಬರುವ ಗ್ರಾಮತಾಲೂಕುಜಿಲ್ಲಾ ಪಂಚಾಯತ್‌ಚುನಾವಣೆಗೆ ಸಿ ಪಿ ಐ ಪಕ್ಷದ ವತಿಯಿಂದಚುನಾವಣೆಗೆ ಸ್ಪರ್ಧಿಸಲಾಗುವುದುಎಂದು ತಿಳಿಸಿದರು. 

ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಡುವಲ್ಲಿ ವಿರೋಧ ಪಕ್ಷಗಳು ಸೋತಿವೆ. ಸಿ ಪಿ ಐ ಪಕ್ಷಜಪಪರ ಹೋರಾಟಗಳನ್ನು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು ಎಂದು ಹೇಳಿದರು.ಎ ಐ ಟಿ ಯು ಸಿ ಅಧ್ಯಕ್ಷ ಬಿ ಜಯಲಕ್ಷ್ಮಿ ಧರ್ಮಸ್ಥಳ ಸೇರಿದಂತೆ ಹಲವು ಕಡೆಅಮಾಯಕ ಮಹಿಳೆಯರಿಗೆ ರಕ್ಷಣೆಕೊಡುವಲ್ಲಿ ಆಳುವ ಕೇಂದ್ರರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಹೇಳಿದರು.ಧರ್ಮಸ್ಥಳ ಪ್ರಕರಣವನ್ನು ನಿಷ್ಪಕ್ಷಪಾತತನಿಖೆ ನಡೆಸಿ ನ್ಯಾಯ ಒದಗಿಸಿರಿ ಎಂದು ಸರ್ಕಾರವನ್ನು ಆಗ್ರಹಿಸಿದರು.ಅಕ್ಷರ ದಾಸೋಹಜಿಲ್ಲಾಅಧ್ಯಕ್ಷೆಎಚ್‌ಅನಸೂಯಾಕೊಟ್ಟೂರು ಸಿ ಪಿ ಐ ಪಕ್ಷದ ಕಾರ್ಯದರ್ಶಿ ಕೆ ರೇಣುಕಮ್ಮ ಹರಪನಹಳ್ಳಿಯ ರಮೇಶ್ ನಾಯ್ಕ, ಹೆಚ್ ಬಿ ಹಳ್ಳಿಯ ಗಂಗಾಧರ, ಜಂಗ್ಲಿಸಾಬ್,ಪಿ ಕವಿತಾ, ಡಿ ಮುಕುಂದಗೌಡಎಚ್‌ದಂಡೆಮ್ಮ, ವಿ ಜಯನಾಯ್ಕ, ತೋಟಯ್ಯಬಸವರಾಜ ಸಂಶಿ , ಸವಿತಾ ಹರವಿ ಇತರರು ಉಪಸ್ಥಿತರಿದ್ದರು.

ಸಿ ಪಿ ಐ ಪಕ್ಷದತಾಲೂಕು ಕಾರ್ಯದರ್ಶಿ ಹಲಗಿ ಸುರೇಶ ಅಧ್ಯಕ್ಷತೆ ವಹಿಸಿದ್ದರು.ಇಪ್ಟಾ ಕಲಾವಿದರಾದ ಎಂ ಡಿ ದ್ವಾರಕೀಶ್, ಪಿ ಚಮನ್ ಸಾಬ್,ನಾಗರಾಜ ಕೋಟಿಹಾಳ ಕ್ರಾಂತಿ ಗೀತೆಗಳನ್ನು ಹಾಡಿದರು.ಹೂವಿನ ಹಡಗಲಿ ತಾಲೂಕಿನಅಂಗನವಾಡಿ ಫೆಡರೇಷನ್‌ಕಟ್ಟಡಕಾರ್ಮಿಕರು ದೇವದಾಸಿ ಸಂಘಟನೆ, ಅಕ್ಷರದಾಸೋಹ ಸಹಾಯಕರು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.