ಮಳೆ ಕೊರತೆಯಿಂದ ಬಾಡುತ್ತಿರುವ ಶೇಂಗಾ ಬೆಳೆ ಕಣ್ಣು ತೆರೆಯದ ಸರ್ಕಾರ

ಮಳೆ ಕೊರತೆಯಿಂದ ಬಾಡುತ್ತಿರುವ ಶೇಂಗಾ ಬೆಳೆ ಕಣ್ಣು ತೆರೆಯದ ಸರ್ಕಾರ  Government turns a blind eye to groundnut crops withering due to lack of rain

ಲಕ್ಷ್ಮೇಶ್ವರ  10: ತಾಲೂಕಿನಲ್ಲಿ ಮಳೆಯ ಕೊರತೆಯಿಂದ ರೈತರು ಬೆಳೆದ ಶೇಂಗಾ ಬೆಳೆ ಕಮರುತ್ತಿದೆ ಸರ್ಕಾರ ಮಾತ್ರ ಕಣ್ಣು ತೆರೆಯುತ್ತಿಲ್ಲ ಇದರಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಬೆಳೆ ಬೆಳೆದ ರೈತರು ಬದುಕು ಅತಂತ್ರವಾಗಿದೆ ಇತ್ತ ಬೆಳೆದ ಬೆಳೆಯ ಮಾಡಿದ ಖರ್ಚು ಇಲ್ಲಾ ಇದರಿಂದ ಅನ್ನದಾತರ ಬದುಕು ಅತಂತ್ರವಾಗಿದೆ   ಇಂಥ ಸಮಯದಲ್ಲಿ ಸರ್ಕಾರ ತಾಲೂಕನ್ನು ಬರಗಾಲವೆಂದು ಘೋಷಿಸಿ ಪ್ರತಿ ಎಕರೆಗೆ ಪರಿಹಾರ ನೀಡಿ ರೈತರ ಬಾಳಿಗೆ ಬೆಳಕು ನೀಡಬೇಕಾದ ಸರ್ಕಾರ ಕಣ್ಣು ಮುಚ್ಚಿ ಕೂತಿರೋದನ್ನು ನೋಡಿ ರೈತರು ಕಂಗಲಾಗಿದ್ದಾರೆ ರೈತರ ಹೆಸರನ್ನು ಹೇಳಿ ಕುರ್ಚಿ ಮೇಲೆ ಕುಳಿತು ರಾಜ್ಯಭಾರ ಮಾಡುತ್ತಿರುವ ಮುಖ್ಯಮಂತ್ರಿಗಳು ರೈತರ ಬಗ್ಗೆ ಕಾಳಜಿ ವಹಿಸಿ ತುಂಬಾ ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತವಾದ ಪರಿಹಾರ ಘೋಷಿಸಲು ಮುಂದಾಗಬೇಕು ಎಂಬುದು ರೈತರ ಒತ್ತಾಯವಾಗಿದೆ.