ಮೆಕ್ಯಾನಿಕ್ ಕಾರ್ಮಿಕರ ಪ್ರಗತಿಗೆ ಸರಕಾರ ಮುಂದಾಗಲಿ: ಗೌಸ್‌ಪೀರ್
Government should take initiative for the progress of mechanic workers: Gauspeer
ಲೋಕದರ್ಶನ ವರದಿ
ಮೆಕ್ಯಾನಿಕ್ ಕಾರ್ಮಿಕರ ಪ್ರಗತಿಗೆ ಸರಕಾರ ಮುಂದಾಗಲಿ: ಗೌಸ್‌ಪೀರ್
ಗಂಗಾವತಿ 05: ದಿನ ಜೀವನ ನಡೆಸಲು ಪರದಾಡುತ್ತಿರುವ ಮೆಕಾನಿಕ್ ವೃತ್ತಿ ಬಾಂಧವರಿಗೆ ಸೂಕ್ತ ಸೌಲಭ್ಯ ನೀಡುವ ಮೂಲಕ ಜೀವನ ಮಟ್ಟ ಸುಧಾರಿಸಲು ಸರಕಾರ ಮುಂದಾಗಬೇಕೆಂದು ಅಸಂಘಟಿತ ಮೆಕ್ಯಾನಿಕ್‌ರ ಅಭಿವೃದ್ಧಿ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಗೌಸ್ ಪೀರ್ ಒತ್ತಾಯಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಪ್ರತಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಸಂಘಕ್ಕೆ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಸಂಘವು ಸಾಗಿ ಬಂದ ಹಾದಿಯನ್ನು ವಿವರಿಸುತ್ತಾ, ನಿವೇಶನ ರಹಿತರಾಗಿ ಕಾರ್ಮಿಕರು ಜೀವನ ನೆಡೆಸುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಒಂದೇ ಮಾದರಿಯ ರೇಟ್ ಬೋರ್ಡ್ ಮೂಲಕ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುತ್ತಿದ್ದು, ಕಾರ್ಮಿಕ ಇಲಾಖೆಯಲ್ಲಿ ನೊಂದಣೆಯಾಗಿರುವ ಸಂಘಟನೆಯಾಗಿದ್ದು ಸುಮಾರು 200ಕ್ಕು ಹೆಚ್ಚು ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಸದಸ್ಯತ್ವದ ಕಾರ್ಡ್ ನೀಡಲಾಗಿದೆ, ಕೊಪ್ಪಳ ಜಿಲ್ಲೆಯಾದ್ಯಂತ ತಾಲೂಕು ಮಟ್ಟದ ಶಾಖೆಗಳನ್ನು ತೆರೆಯಲಾಗುತ್ತಿದ್ದು, ಸಾವಿರಕ್ಕು ಹೆಚ್ಚು ಸದಸ್ಯರನ್ನು ಒಳಗೊಳ್ಳುವ ಸಂಘಟನೆ ನಮ್ಮದಾಗಲಿದೆ ಈ ನಿಟ್ಟಿನಲ್ಲಿ ಅನೇಕ ಕಾರ್ಮಿಕ ಅಧಿಕಾರಿಗಳು ನಮಗೆ ಸಹಕಾರ ನೀಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಮಿಕರಿಗೆ ವಿಮೆ ಒದಗಿಸಬೇಕು, ಮಕ್ಕಳ ವಿದ್ಯಾಭ್ಯಾಸಕ್ಕೆ ಕಿಟ್, ಹೆರಿಗೆ, ಮಧುವೆ ಹಾಗು ಸಾವಿನ ನಂತರ ಕುಟುಂಬಕ್ಕೆ ಸರಕಾರ ಸಹಾಯ ಮಾಡಬೇಕು ಎಂದರು.
ಉಪಾಧ್ಯಕ್ಷ ರವಿಬೋಸ್ಲೆ ಹಾಗು ಕಾರ್ಮಿಕ ಮುಖಂಡ ವಿಜಯಕುಮಾರ್ ದೊರೆರಾಜು ಮಾತನಾಡಿ, ಸಂಘಟನೆಗೆ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗುತ್ತಿದ್ದು, ಅನೇಕ ಪ್ರಗತಿಪರ ವಿಚಾರಗಳ ಮುಖೇನ ಸದಸ್ಯರಲ್ಲಿ ಜಾಗೃತಿ ಮೂಡಿಸಲಾಗುವುದು ಕೊಪ್ಪಳ ಜಿಲ್ಲೆಯಲ್ಲಿನ ಮೆಕಾನಿಕ್ ವೃತ್ತಿಗೆ ಸಂಬಂಧಿಸಿದ ಎಲ್ಲ ಕಾರ್ಮಿಕರು ಭಗತ್‌ಸಿಂಗ್ ವೃತ್ತದಲ್ಲಿರುವ ನಮ್ಮ ಪ್ರಮುಖ ಶಾಖಾ ಕಚೇರಿಯಲ್ಲಿ ತಮ್ಮ ದಾಖಲಾತಿ ಸಲ್ಲಿಸುವ ಮೂಲಕ ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕಿದ್ದು, ಸರಕಾರದ ಸೌಲಭ್ಯ ಕೊಡಿಸುವಲ್ಲಿ ನಾವು ಯಾವಾಗಲು ಸಿದ್ಧರಿರುವುದಾಗಿ ಅವರು ಘೋಷಿಸಿದರು. ಸಹಕಾರ್ಯದರ್ಶಿ ಹುಸೇನ್‌ಸಾಬ್, ಖಜಾಂಚಿ ರಿಯಾಜ್ ಆಹ್ಮದ್, ಸಂಘಟನಾ ಕಾರ್ಯದರ್ಶಿ ರಾಜಾವಲಿ, ಪದಾಧಿಕಾರಿಗಳಾದ ಮಹಮದ್ ಸೋಹೆಲ್, ಒಂಕಾರ್, ಸೈಯ್ಯದ್ ಯಾಕೂಬ್ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 