ಮದ್ಯದಂಗಡಿ ತೆರೆಯಲು ಸರ್ಕಾರ ಅನುಮತಿ ನೀಡಬಾರದು: ಎಫ್‌ಐಟಿಯು
ಬೆಂಗಳೂರು, ಮೇ 3, ಪ್ರಸಕ್ತ ಲಾಕ್ ಡೌನ್ ಅವಧಿ ಕೊನೆಗೊಳ್ಳುವ ಮುಂಚೆಯೇ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡುವ ರಾಜ್ಯ ಸರ್ಕಾರದ ಅನುಮತಿಯ ಆದೇಶ ಖಂಡನಾರ್ಹ ಎಂದು ಎಫ್ಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಕಲ್ಲರ್ಪ ಒತ್ತಾಯಿಸಿದ್ದಾರೆ.ಇದನ್ನು ವಿರೋಧಿಸುವಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ ರಹಿತವಾಗಿ ಸರ್ವ ಪಕ್ಷಗಳೂ ಒಂದಾಗಬೇಕಿದೆ. ಮಾತ್ರವಲ್ಲ ಯಾವುದೇ ಕಾರಣಕ್ಕೂಜನರಿಗೆ ಮದ್ಯ ಸರಬರಾಜು ಮಾಡ ಕೂಡದು. ಮದ್ಯದಂಗಡಿಯನ್ನು ತೆರೆದು ಜನಗಳಲ್ಲಿ ನಶೆಯೇರಿಸಿದ ನಂತರ ಇತಿಮಿತಿಗಳ ಬಗ್ಗೆ ಹೇಳಲಾಗದು., ಇದು ರೋಗ, ತಡೆಗಟ್ಟುವಲ್ಲಿನ ಸರಕಾರದ ಇದುವರೆಗಿನ ಪ್ರಯತ್ನವನ್ನು ವಿಫಲಗೊಳಿಸಬಹುದೆಂಬುವುದನ್ನು ಆಳುವ ಪಕ್ಷವೂ ಕೂಡಾ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ರಾಜ್ಯಾದ್ಯಂತ ಉಳಿದಿರುವ ದೇಶದ ವಿವಿಧೆಡೆಗಳಲ್ಲಿನ ವಲಸೆ ಕಾರ್ಮಿಕರನ್ನು ಉಚಿತವಾಗಿ ತಕ್ಷಣವೇ ಅವರವರ ಊರಿಗೆ ತಲುಪಿಸುವ ಹೊಣೆ ಸರ್ಕಾರದ ಜವಾಬ್ದಾರಿಯಾಗಿದ್ದು, ಅವರಿಂದ ಯಾವುದೇ ರೀತಿಯ ಶುಲ್ಕ ಪಡೆಯಕೂಡದು. ಅದರಲ್ಲೂ, ಬಡ, ವಲಸೆ ಕಾರ್ಮಿಕರನ್ನು ಊರಿಗೆ ತಲುಪಿಸಲು ಹೆಚ್ಹಿನ ವಸೂಲಿಯನ್ನು ಮಾಡಲಾಗುವುದು ಎಂಬ ಸರಕಾರದ ನಿರ್ಧಾರ ಶೋಷಣೆಯಾಗಿದ್ದು ಅದನ್ನು ಕೂಡಲೇ ಕೈ ಬಿಡಬೇಕು ಉಚಿತ ಸೇವೆಯ ಮೂಲಕ ಕಾರ್ಮಿಕರನ್ನು ಅವರ ಊರಿಗೆ ತಲುಪಿಸಬೇಕು ಎಂದು ಎಫ್ಐಟಿಯು ಸುಲೈಮಾನ್ ಕಲ್ಲರ್ಪ ಒತ್ತಾಯಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಆರಂಭವಾದಾಗಲೇ ಇವರನ್ನು ಊರಿಗೆ ಕಳಿಸುವ ವ್ಯವಸ್ಥೆ ಸರಕಾರ ಮಾಡಿರುತ್ತಿದ್ದರೆ ಇಂದು ಈ ಅವಸ್ಥೆ ಬರುತ್ತಿರಲಿಲ್ಲ. ಇದೀಗ ಒಂದೂವರೆ ತಿಂಗಳಿನಿಂದ ಕೆಲಸವಿಲ್ಲದೆ ಪರದಾಡುತ್ತಿದ್ದ ವಲಸೆ ಕಾರ್ಮಿಕರನ್ನು ಲೂಟಿ ಮಾಡಿ ಕಳಿಸುವಂತಹ ಸರಕಾರದ ನೀತಿ ಖಂಡನೀಯವಾಗಿದೆ. ಸರಕಾರವು ಯಾವುದೇ ಮುಂದಾಲೋಚನೆ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ 