ಕ್ರಿಕೆಟ್ ಕಾಲ್ತುಳಿತಕ್ಕೆ ಸರ್ಕಾರ ಹೊಣೆಯಲ್ಲ : ಶಾಸಕ ಭೀಮಣ್ಣ ನಾಯ್ಕ
Government not responsible for cricket stampede: MLA Bhimanna Naik
ಪಹಲ್ಗಾಮ್ ದುರಂತ ,ಕುಂಭಮೇಳ ಕಾಲ್ತುಳಿತದ ವೇಳೆ ನಾವು ರಾಜಕೀಯ ಮಾಡಿಲ್ಲ
ಕಾರವಾರ 09 : ಪಹಲ್ಗಾಮ್ ನಲ್ಲಿ ಭಯೋತ್ಪಾಕರು 26 ಜನ ಪ್ರವಾಸಿಗರನ್ನು ಹತ್ಯೆ ಮಾಡಿದಾಗ, ಯುಪಿ ಕುಂಭಮೇಳ ಕಾಲ್ತುಳಿತದ ವೇಳೆ ಜನರು ಸಾವನ್ನಪ್ಪಿದಾಗ ನಾವು ರಾಜಕೀಯ ಮಾಡಿಲ್ಲ. ಬೆಂಗಳೂರುಕ್ರಿಕೆಟ್ ಕಾಲ್ತುಳಿತಕ್ಕೆ ಸರ್ಕಾರ ಹೊಣೆಯಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ಅಭಿಪ್ರಾಯಪಟ್ಟರು. ಸಿದ್ದಾಪುರದಲ್ಲಿ ಅಕ್ಷತಾ ಪೈ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ವಿತರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸರ್ಕಾರ ಕಾಲ್ತುಳಿತ ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ಹಾಗೂ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸುತ್ತಿದೆ. ಬಿಜೆಪಿಯವರ ರಾಜಕೀಯ ಆರೋಪಕ್ಕೆ ಒಂದು ತಾತ್ವಿಕತೆ ಇಲ್ಲ. ಸುಳ್ಳುನ್ನು ಜನ ನಂಬುವುದಿಲ್ಲ. ಆರ್ ಸಿಬಿ ವಿಜಯೋತ್ಸವದ ಆಯೋಜಕರು ಯಾರು ಎಂದು ಬಿಜೆಪಿ ಹೇಳಲಿ ನೋಡೋಣ. ಮೆರವಣಿಗೆ ವಿಜಯೋತ್ಸವ ಬೇಕೆಂದವರು ಬಿಜೆಪಿಯವರು. ಈಗ ಅಲ್ಲಿ ಸಾವು ಸಂಭವಿಸಿದ ನಂತರ ಅವರ ಮಾತಿನ ಧಾಟಿ ಬದಲಾಗಿದೆ. ಜನರನ್ನು ದಿಕ್ಕು ತಪ್ಪಿಸಲು ಅವರು ಯತ್ನಿಸುತ್ತಿದ್ದಾರೆ. ಆದರೆ ಜನರಿಗೆ ಸತ್ಯ ಗೊತ್ತಿದೆ. ಅಭಿಮಾನದ ಹುಚ್ಚು ಹೊಳೆ ,ನೀರೀಕ್ಷೆ ಮೀರಿದ ಜನದಟ್ಟಣೆ ದುರಂತಕ್ಕೆ ಕಾರಣ ಎಂದು ಎಲ್ಲರಿಗೂ ಗೊತ್ತು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಯಾವುದೇ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಬಿಜೆಪಿಗರು ನಿಸ್ಸೀಮರು ಎಂದರು.ಕಾಲ್ತುಳಿತದ ಘಟನೆಗೆ ಮೇಲ್ನೋಟಕ್ಕೆ ಕಾರಣರಾದವರ ವಿರುದ್ಧ ಸರ್ಕಾರ ಕ್ರಮ ಜರುಗಿಸಿದೆ. ನ್ಯಾಯಾಂಗ ತನಿಖೆಯ ವರದಿ ಬಂದ ಮೇಲೆ ಮತ್ತಷ್ಟು ಕ್ರಮ ಆಗಲಿದೆ ಎಂದರು....
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 