ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನದ ಅಂಗವಾಗಿ ಸ್ವಸ್ತಿಕ ಆಸ್ಪತ್ರೆಯಲ್ಲಿ ಸರ್ಕಾರಿ ಆರೋಗ್ಯ ಯೋಜನೆಗಳಿಗೆ ಚಾಲನೆ..!
Government health schemes launched at Swastika Hospital on the occasion of World Plastic Surgery Day
ಕಾಗವಾಡ 15 : ಪ್ಲಾಸ್ಟಿಕ್ ಸರ್ಜರಿ ಕುರಿತು ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಪ್ಲಾಸ್ಟಿಕ್ ಸರ್ಜರಿ ಎಂದರೆ ಕೇವಲ ಸೌಂದರ್ಯ ಹೆಚ್ಚಿಸಲು ಮಾಡುವ ಶಸ್ತ್ರಚಿಕಿತ್ಸೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ವಾಸ್ತವವಾಗಿ ಇಂದಿನ ಯಾಂತ್ರಿಕ ಜೀವನದಲ್ಲಿ ಸಂಭವಿಸುವ ಅಪಘಾತಗಳು, ಸುಟ್ಟ ಗಾಯಗಳು, ಗಂಭೀರ ಗಾಯಗಳು ಹಾಗೂ ಜನ್ಮಜಾತ ಮತ್ತು ಇತರ ವಿವಿಧ ಕಾಯಿಲೆಗಳ ಚಿಕಿತ್ಸೆಯಲ್ಲಿ ಪ್ಲಾಸ್ಟಿಕ್ ಸರ್ಜರಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂತಹ ಸಂದರ್ಭಗಳಲ್ಲಿ ಯಾವ ವೈದ್ಯರನ್ನು ಸಂಪರ್ಕಿಸಬೇಕು ಎಂಬ ಅರಿವಿನ ಕೊರತೆಯಿಂದ ಪ್ಲಾಸ್ಟಿಕ್ ಸರ್ಜರಿಯ ಮಹತ್ವ ಜನರಿಗೆ ಸರಿಯಾಗಿ ತಿಳಿದಿಲ್ಲ ಎಂದು ಸಾಂಗಲಿಯ ಸ್ವಸ್ತಿಕ ಆಸ್ಪತ್ರೆಯ ಡಾ. ವಿನಾಯಕ ಲೋಕರೆ ತಿಳಿಸಿದ್ದಾರೆ.
ಅವರು ಬುಧವಾರ, ಜುಲೈ 15 ರಂದು ಸಾಂಗಲಿ ಮಹಾನಗರದ ಸ್ವಸ್ತಿಕ ಆಸ್ಪತ್ರೆಯಲ್ಲಿ ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆ ಹಾಗೂ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ವಿವಿಧ ಆರೋಗ್ಯ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ರೋಗಿಗಳಿಗೆ ಲಭ್ಯವಿರುವ ಸರ್ಕಾರಿ ಆರೋಗ್ಯ ಯೋಜನೆಗಳು, ಅವುಗಳ ಪ್ರಯೋಜನಗಳು ಹಾಗೂ ಜನರಲ್ ಸರ್ಜರಿ, ಮೂಳೆ ಚಿಕಿತ್ಸಾ ವಿಭಾಗ (ಆರ್ಥೋಪೆಡಿಕ್ಸ್), ಸ್ತ್ರೀರೋಗ ವಿಭಾಗ (ಗೈನಕಾಲಜಿ),
ಡಯಾಬಿಟಿಕ್ ಫುಟ್, ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ವಿವಿಧ ಶಸ್ತ್ರಚಿಕಿತ್ಸೆಗಳು ಮತ್ತು ಚಿಕಿತ್ಸಾ ಸೌಲಭ್ಯಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡುತ್ತಾ ಜೊತೆಗೆ ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸಾ ಸೇವೆಗಳು ಹಾಗೂ ವಿವಿಧ ಯೋಜನೆಗಳ ಬಗ್ಗೆ ಮಾರ್ಗದರ್ಶನ ಮಾಡಿದರು. ಹೆಚ್ಚಿನ ಮಾಹಿತಿಗಾಗಿ ಸ್ವಸ್ತಿಕ್ ಆಸ್ಪತ್ರೆ, ಭೋಕರೆ ಕಾಲೇಜ್ ಎದುರಿಗೆ, ಸಾಂಗಲಿ-ಮಿರಜ ರಸ್ತೆ, ಸಾಂಗಲಿ. ಮೊ: 9545957848, 7507077848 ಗೆ ಸಂಪರ್ಕಿಸಬಹುದು.ಈ ವೇಳೆ ಡಾ. ವಿದ್ಯಾ ಲೋಕರೆ ಸೇರಿದಂತೆ ಸ್ವಸ್ತಿಕ ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು. ಡಾ.ವಿನಾಯಕ ಲೋಕರೆ ಮತ್ತು ಸ್ವಸ್ತಿಕ ಆಸ್ಪತ್ರೆಯ ಫೋಟೋ ಬಳಸಿಕೊಳ್ಳುವುದು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 