ಅಲ್ಪಸಂಖ್ಯಾತರ ಹಿತ ಕಾಯುವಲ್ಲಿ ವಿಫಲಗೊಂಡ ಸರ್ಕಾರ:
Government fails to protect the interests of minorities:
ತಾಳಿಕೋಟಿ 25: ಅಲ್ಪಸಂಖ್ಯಾತರ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಜುಮನ್ ಇಸ್ಲಾಂ ಕಮೀಟಿ ಹಾಗೂ ತಾಲೂಕು ಮುಸಲ್ಮಾನ ಸಮಾಜ ಭಾಂದವರಿಂದ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಅಂಜುಮನ್ ಇಸ್ಲಾಂ ಕಮೀಟಿ ನಿರ್ದೇಶಕ, ವಕೀಲ ದಾವಲಸಾಬ ತಾಳಿಕೋಟಿ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಹಿತ ಕಾಯುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದು ಈ ಹಿಂದೆ ಚುನಾವಣೆಗೂ ಮುನ್ನ ನೀಡಿದ ಭರವಸೆಗಳಲ್ಲವೂ ಕೂಡಾ ಕೇವಲ ಬಾಯಿ ಮಾತಿನಲ್ಲಿಯೇ ಇದೆ. ಅದ್ಯಾವೂದು ಕೂಡಾ ಇದುವರೆಗೂ ಜಾರಿಗೆ ಬಂದಿಲ್ಲ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರವು ಮುಸಲ್ಮಾನರ ಶೇ4 ರಷ್ಟು 2ಬಿ ಮೀಸಲಾತಿಯನ್ನು ರದ್ದು ಪಡಿಸಿತು. ಈ ಬಗ್ಗೆ ಇವತ್ತಿನವರೆಗೂ ರಾಜ್ಯ ಸರಕಾರ ಅದನ್ನು ರದ್ದುಪಡಿಸಿ ಯಾಥಪ್ರಕಾರವಾಗಿ 2ಬಿ ಮೀಸಲಾತಿಯನ್ನು ಮರು ಜಾರಿಗೆ ಮಾಡಲು ಹಿಂದೇಟು ಹಾಕುತ್ತಿರುವುದು ನಿಜಕ್ಕೂ ಕೂಡಾ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಸರ್ಕಾರದ ನೀತಿಯನ್ನು ಖಂಡಿಸಿದರು.
ಅಲ್ಲದೇ ಇದೇ ಸರಕಾರ ಈ ಹಿಂದೆ ಟಿಪ್ಪು ಸುಲ್ತಾನರ ಜಯಂತಿಯನ್ನು ಆಚರಣೆಯನ್ನು ಮಾಡಲು ಆದೇಶ ಹೊರಡಿಸಿತ್ತು ಆದರೆ ಇದನ್ನು ಕೂಡಾ ಕೋಮುವಾದಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರದ್ದುಪಡಿಸಿತು. ಇದೇ ಟಿಪ್ಪು ಸುಲ್ತಾನರ ಬಗ್ಗೆ, ಮಾನ್ಯ ಮುಖ್ಯಮಂತ್ರಿಗಳು ಹಾಗೂ ಆಡಳಿತ ಪಕ್ಷದ ಸಚಿವರು ಅನೇಕ ಸಭೆ ಸಮಾರಂಭಗಳಲ್ಲಿ ಟಿಪ್ಪು ಸುಲ್ತಾನರ ಶೌರ್ಯ, ಪರಕ್ರಮ ಹಾಗೂ ಅವರ ದೇಶಪ್ರೇಮದ ಬಗ್ಗೆ, ಗಂಟೆಗಟ್ಟಲೇ ಭಾಷಣ ಮಾಡುತ್ತಾರೆ ಆದರೆ ಜನರು ಸಾರ್ವಜನಿಕವಾಗಿ ಇವರ ಜಯಂತಿಯನ್ನು ಮಾಡಲು ಹೋದಾಗ ಅವರಿಗೆ ಪರವಾನಿಗೆಯನ್ನು ನೀಡದೇ ಜಯಂತಿಗೆ ಅವಕಾಶವನ್ನು ಕೊಡದೆ ಇರುವುದು ನಿಜಕ್ಕೂ ಈ ಸರಕಾರ ಯಾರ ಪರವಾಗಿದೆ ಕೇವಲ ಅಲ್ಪಸಂಖ್ಯಾತರ ಹಿತ ಕಾಯುತ್ತೇವೆ ಎನ್ನುವುದು ಬಾಯಿ ಮಾತಿನಲ್ಲಿಯೇ ಎನ್ನುವ ಅನುಮಾನವನ್ನು ಹುಟ್ಟು ಹಾಕಿದೆ ಎಂದರು.
ಅಂಜುಮನ್ ಇಸ್ಲಾಂ ಕಮೀಟಿ ಕಾರ್ಯದರ್ಶಿ ಫಯಾಜ್ ತೋಟದ ಮಾತನಾಡಿ ಇತ್ತಿಚೆಗೆ ಒಂದಷ್ಟು ಪ್ರತಿರೋಧ ಮುಸಲ್ಮಾನರಿಂದ ಎದುರಿಸಿದ ರಾಜ್ಯ ಸರಕಾರ ಹಿಜಾಬ್ ನಿಬಂರ್ಧವನ್ನು ತೆರವುಗೊಳಿಸಿದೆ ಆದರೆ ನೈಜವಾಗಿ ಮುಸ್ಲಿಮರಿಗೆ ಸೀಗಬೇಕಾದ 2ಬಿ ಮೀಸಲಾತಿ ರದ್ದತಿ, ವಿಶೇಷ ಮತದಾರರ ಪರಿಷ್ಕರಣೆ (ಎಸ್ ಐ ಆರ್) ರಾಜ್ಯದಲ್ಲಿ ವಿರೋಧ ವ್ಯಕ್ತಪಡಿಸುವ ಬದಲಾಗಿ ಅದನ್ನು ಜಾರಿಗೆ ತರಲು ಮುಂದಾಗಿರುವುದು ಹಾಗೂ ದ್ವೇಷ ಭಾಷಣ - ದ್ವೇಷ ಅಪರಾಧ ನಿಯಂತ್ರಣ, ಬಜೆಟ್ , ರಾಜಕೀಯ ಪ್ರಾತಿನಿಧ್ಯ , ವಿದ್ಯಾರ್ಥಿ ವೇತನ ಇಂತಹ ಮಹತ್ವದ ವಿಷಯಗಳಲ್ಲಿ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ನಿಜಕ್ಕೂ ಕೂಡಾ ಬೇಸರವನ್ನು ಉಂಟು ಮಾಡಿದೆ.ರಾಜ್ಯ ಸರಕಾರ ಈ ಕೂಡಲೇ ನಿಜವಾಗಿಯೂ ಅಲ್ಪಸಂಖ್ಯಾತರ ಬಗ್ಗೆ, ಹಾಗೂ ಮುಸಲ್ಮಾನ ಭಾಂದವರ ಬಗ್ಗೆ, ಕಳಾಜಿ ಇದ್ದರೆ 2ಬಿ ಮೀಸಲಾತಿಯನ್ನು ಶೇ 4 ರ ಬದಲಾಗಿ 8 ರಷ್ಟು ಹೆಚ್ಚಿಸಿ ಮರು ಜಾರಿಗೊಳಿಸಬೇಕು.
ವಿಶೇಷ ಮತದಾರರ ಪರಿಷ್ಕರಣೆ (ಎಸ್ ಐ ಆರ್) ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು. ಹಾಗೂ ಸಮುದಾಯದ ಬಗ್ಗೆ ದ್ವೇಷ ಭಾಷಣ, ಅಪಪ್ರಚಾರ ಮಾಡುವವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಹಜರತ್ ಟಿಪ್ಪು ಸುಲ್ತಾನರ ಜಯಂತಿಯನ್ನು ಸಾರ್ವಜನಿಕವಾಗಿ ಆಚರಣೆ ಮಾಡಲು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಬೇಕು. ಅಲ್ಪಸಂಖ್ಯಾತರಿಗೆ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು, ಮೇಟ್ರಿಕ್ ನಂತರದ ಹಾಗೂ ಮೇಟ್ರೇಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಹೆಚ್ಚು ಮಾಡಿ ತ್ವರಿತಗತಿಯಲ್ಲಿ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಅಂಜುಮನ್ ಇಸ್ಲಾಂ ಕಮೀಟಿ ಚೇರ್ಮನ್ ಹಸನಸಾಬ ತಟಗಾರ ಮಾತನಾಡಿ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು, ಸಮುದಾಯದ ಹಿತ ಕಾಯುವ ನಿಟ್ಟಿನಲ್ಲಿ ಸರ್ಕಾರ ಈ ಕೂಡಲೇ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು. ತಹಶಿಲ್ದಾರರ ಕಿರಣಕುಮಾರ ಕುಲಕರ್ಣಿ ಪ್ರತಿಭಟನಾ ಮನವಿಯನ್ನು ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.ಈ ವೇಳೆ ಅಂಜುಮನ್ ಇಸ್ಲಾಂ ಕಮೀಟಿ ನಿರ್ದೇಶಕರಾದ ನಾಸೀರ ಅಲಿ ಸುರಪುರ, ಎ.ಕೆ.ಕಾತರಕಿ, ಅಬ್ಬಾಸಲಿ ನಿಶಾನದಾರ, ಫಕ್ರುಸಾಬ ಕಾತರಕಿ, ಮಾಬುಸಾಬ ಸುರಪುರ, ರಜಾಕ ಢಾಲಾಯತ್, ಖಾಸಿಂಸಾಬ ಅಲಿ ದಿಂಡವಾಡ, ಸೇರಿದಂತೆ ಸೂಡಿ ವದೇಗೋಳ, ರಾಜೂರು ಗ್ರಾಮದ ಸಮುದಾಯ ಭಾಂದವರು ಪಾಲ್ಗೊಂಡಿದ್ದರು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 