ಸರಕಾರಿ ನೌಕರರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ಸುರೇಶ ಹಳ್ಯಾಳ
Government employees should adopt humane values: Suresh Halyala
ಗದಗ 28: ಸರಕಾರಿ ಅಧಿಕಾರಿ ಸಿಬ್ಬಂದಿಗಳು ತಮ್ಮ ಸೇವಾ ಅವಧಿಯಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುವಂತೆ ನಿವೃತ್ತ ಖಜಾನೆ ಅಪರ ನಿರ್ದೆಶಕರಾದ ಸುರೇಶ ಹಳ್ಯಾಳ ಅವರು ತಿಳಿಸಿದರು.ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ (ಸೆ.25) ರಂದು ಜರುಗಿದ ಗದಗ ಜಿಲ್ಲಾ ಖಜಾನೆ ನೌಕರರ ಘಟಕದ ವತಿಯಿಂದ ಜರುಗಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸರಕಾರಿ ಸೇವೆ ದೇವರ ಸೇವೆ ಎಂಬಂತೆ ಪ್ರತಿಯೊಬ್ಬ ಸರಕಾರಿ ಅಧಿಕಾರಿ, ಸಿಬ್ಬಂದಿಗಳು ನಿಸ್ವಾರ್ಥ ಸೇವಾ ಮನೋಭಾವನೆಯೊಂದಿಗೆ ಸರಕಾರದ ಯೋಜನೆಗಳನ್ನು ತಲುಪಿಸಲು ಮುಂದಾಗಬೇಕು. ಖಜಾನೆ ಇಲಾಖೆ ಒಂದು ಪ್ರಮುಖ ಇಲಾಖೆಯಾಗಿದ್ದು ಇಲ್ಲಿ ಕಾರ್ಯದ ಒತ್ತಡ ಸಹಜವಾಗಿರುತ್ತದೆ. ಎಂತಹ ಒತ್ತಡದ ಪರಿಸ್ಥಿತಿಯಲ್ಲಿಯೂ ಸಹ ಕಚೇರಿಗೆ ಆಗಮಿಸುವ ಪ್ರತಿಯೊಬ್ಬರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಅವರ ಕೆಲಸ, ಕಾರ್ಯಗಳನ್ನು ಮಾಡಿಕೊಟ್ಟಲ್ಲಿ ಮಾತ್ರ ಸರಕಾರಿ ಕೆಲಸ ದೇವರ ಕೆಲಸ ಎಂಬ ನಾಣ್ಣುಡಿಗೆ ಅರ್ಥ ಬಂದತಾಗುತ್ತದೆ ಎಂದು ನಿವೃತ್ತ ಖಜಾನೆ ಅಪರ ನಿರ್ದೆಶಕರಾದ ಸುರೇಶ ಹಳ್ಯಾಳ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.ಜಿಲ್ಲಾ ಪಂಚಾಯತ ಲೆಕ್ಕಾಧಿಕಾರಿಗಳಾದ ಪ್ರಶಾಂತ ಜೆ.ಸಿ. ಅವರು ಮಾತನಾಡಿ ಖಜಾನೆ-2 ತಂತ್ರಾಂಶ ಅಭಿವೃದ್ಧಿ ಪಡಿಸುವಲ್ಲಿ ಅವರ ಪಾತ್ರ ಮಹತ್ವದ್ದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜಿಲ್ಲಾ ಖಜಾನೆ ಉಪ ನಿರ್ದೇಶಕರಾದ ವಿ.ಹರಿನಾಥ ಬಾಬು ಅವರು ಮಾತನಾಡಿ ನಿವೃತ್ತ ಖಜಾನೆ ಅಪರ ನಿರ್ದೆಶಕರಾದ ಸುರೇಶ ಹಳ್ಯಾಳ ಅವರು ತಮ್ಮ ವೃತ್ತಿ ಜೀವನದ ಬೆನ್ನಲುಬಿನಂತಿದ್ದರು. ಅವರು ತಮ್ಮ ವೃತ್ತಿ ಜೀವನದ ಉದ್ದಕ್ಕೂ ಪ್ರತಿಯೊಬ್ಬರಿಗೂ ಮಾರ್ಗದರ್ಶಕರಾಗಿ, ಸ್ನೇಹಿತರಾಗಿ ಸಹಕರಿಸಿದರು. ಸುರೇಶ ಹಳ್ಯಾಳ ಅವರು ನಡೆದಾಡುವ ಖಜಾನೆಯಂತಿದ್ದರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.ನಿಕಟಪೂರ್ವ ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾಗಿದ್ದ ಪ್ರೇಮನಾಥ ಗರಗ ಅವರು ಮಾತನಾಡಿ ನಿವೃತ್ತ ಅಪರ ನಿರ್ದೇಶಕರು ಸೇವೆಯಲ್ಲಿದ್ದಾಗ ಅವರ ದಕ್ಷ ಆಡಳಿತ ಪ್ರಾಮಾಣಿಕತೆ ಹಾಗೂ ಸಾರ್ವಜನಿಕರೊಂದಿಗಿನ ಅವರ ಆತ್ಮೀಯ ಸಂಬಂಧದ ಕುರಿತು ಮುಕ್ತ ಮನಸ್ಸಿನಿಂದ ಹೊಗಳಿದರು.ಸರ್ಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಬಳ್ಳಾರಿ ಅವರು ಮಾತನಾಡಿ ನಿವೃತ್ತ ಅಪರ ನಿರ್ದೇಶಕರ ನಿಸ್ವಾರ್ಥ ಸೇವಾ ಮನೋಭಾವನೆ, ಶಿಸ್ತು, ಸಮಯ ಪುಜ್ಞೆ ಹಾಗೂ ಅವರ ಘನ ವ್ಯಕ್ತಿತ್ವನ್ನು ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾನೆ ಸಹಾಯಕ ನಿರ್ದೆಶಕರಾದ ಎಸ್.ಎಚ್ ಬಾದನಟ್ಟಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಸರಸ್ವತಿ ಡಿ ಕನವಳ್ಳಿ, ಜಿಲ್ಲಾ ಖಜಾನೆ ಹಾಗೂ ಉಪ ಖಜಾನೆಗಳ ಅಧಿಕಾರಿ ಸಿಬ್ಬಂದಿ, ಖಜಾನೆ ಇಲಾಖೆಯ ನಿವೃತ್ತ ಅಧಿಕಾರಿ,ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 