ಸಂರಕ್ಷಣಾ ಘಟಕಗಳು ನಿರ್ಮಾಣಕ್ಕೆ ಸರ್ಕಾರ ಅಸ್ತು: ಶಾಸಕ ಶ್ರೀನಿವಾಸ ಮಾನೆ
Government committed to construction of conservation units: MLA Srinivas Mane
ಹಾನಗಲ್ 20: ತಾಲೂಕಿನ ಯಳವಟ್ಟಿ ಗ್ರಾಮದಲ್ಲಿ ಮಾವು ಹಾಗೂ ಇತರೆ ತೋಟಗಾರಿಕೆ ಬೆಳೆಗಳ ಬಹು ಉತ್ಪನ್ನಗಳ ನಿರ್ವಹಣೆ, ಸಂಗ್ರಹಣೆ, ಸಂಸ್ಕರಣೆ ಮತ್ತು ಸಂರಕ್ಷಣಾ ಘಟಕಗಳನ್ನು (ಆಹಾರಉದ್ಯಾನ) ಸಾರ್ವಜನಿಕಹಿ ಖಾಸಗಿ ಸಹಭಾಗಿತ್ವ ಮಾದರಿಯಡಿ 35 ಕೋಟಿರೂ. ವೆಚ್ಚದಲ್ಲಿ ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವಅವರು, ಸ್ಥಳೀಯವಾಗಿ ಉತ್ತಮಮಾರುಕಟ್ಟೆ ಸಂಪರ್ಕಗಳು ಮತ್ತು ಮೌಲ್ಯವರ್ಧನೆ ಮುಂತಾದ ಕ್ರಮಗಳ ಮೂಲಕ ಕೃಷಿ ಆದಾಯ ಸುಧಾರಿಸಿ, ಆರ್ಥಿಕಅಭಿವೃದ್ಧಿ ಸಾಧಿಸಬಹುದಾಗಿದೆ. ಈ ನಿಟ್ಟಿನಲ್ಲಿಮಾವು ಹಾಗೂ ಇತರೆತೋಟಗಾರಿಕೆ ಬೆಳೆಗಳ ಬಹು ಉತ್ಪನ್ನಗಳ ನಿರ್ವಹಣೆ, ಸಂಗ್ರಹಣೆ, ಸಂಸ್ಕರಣೆ ಮತ್ತು ಸಂರಕ್ಷಣಾ ಘಟಕಗಳು ಸಹಕಾರಿಯಾಗಲಿವೆ.ರಾಜ್ಯ ಮಾವುಅಭಿವೃದ್ಧಿಮತ್ತು ಮಾರುಕಟ್ಟೆ ನಿಗಮ ನಿಯಮಿತದಅಡಿಯಲ್ಲಿ ಈ ಘಟಕಗಳು ಕಾರ್ಯ ನಿರ್ವಹಿಸಲಿವೆ ಎಂದು ಶ್ರೀನಿವಾಸ ಮಾನೆಮಾಹಿತಿ ನೀಡಿದ್ದಾರೆ.ಘಟಕಗಳಿಂದ ನೇರ ಮತ್ತು ಪರೋಕ್ಷವಾಗಿ ಸುಮಾರು 600-700 ಜನರಿಗೆಉದ್ಯೋಗಾವಕಾ ಶಒದಗಿಸುವ ನೀರೀಕ್ಷೆ ಹೊಂದಲಾಗಿದೆ.
ಘಟಕಗಳ ಸ್ಥಾಪನೆಗೆ ಈಗಾಗಲೇ 28.3 ಎಕರೆ ಭೂಮಿದೊರಕಿಸಲಾಗಿದ್ದು, ಬಹು ಹಣ್ಣು, ತರಕಾರಿ ಮತ್ತು ಸಾಂಬಾರ ಘಟಕಗಳು, ಮೆಕ್ಕೆಜೋಳ, ಬಹುಧಾನ್ಯ ಸಂಸ್ಕರಣ ಘಟಕಗಳು, ಜೈವಿಕ ಇಂಧನಗಳ ಮತ್ತು ಮಿಶ್ರಣಕ್ಕಾಗಿಜೈವಿಕಎಥೆನಾಲ್ ಘಟಕಗಳ ಸ್ಥಾಪನೆಯಉದ್ದೇಶ ಹೊಂದಲಾಗಿದೆ.ಸದರಿ ಘಟಕಗಳ ಸ್ಥಾಪನೆಯಿಂದ ಸುತ್ತಲಿನ 100 ಕಿ.ಮೀ. ವ್ಯಾಪ್ತಿಯ ಮುಂಡಗೋಡ, ಯಲ್ಲಾಪುರ, ಸಿದ್ದಾಪುರ, ಕಲಘಟಗಿ, ಹುಬ್ಬಳ್ಳಿ, ಕುಂದಗೋಳ, ಧಾರವಾಡ, ನವಲಗುಂದ, ಸೊರಬ, ಶಿಕಾರಿಪುರ, ಸಾಗರ, ಶಿರಹಟ್ಟಿ, ಅಣ್ಣಿಗೇರಿ ಸೇರಿದಂತೆ ಸುಮಾರು22 ತಾಲೂಕುಗಳಿಗೆ ಅನುಕೂಲವಾಗಲಿದೆಎಂದು ಶಾಸಕ ಮಾನೆ ವಿವರಿಸಿದ್ದಾರೆ.ಕ್ಲಸ್ಟರ್ ಮಾದರಿಯ ಈ ಘಟಕಗಳ ಸ್ಥಾಪನೆಯಿಂದರೈತರಿಗೆತಾವು ಬೆಳೆಯುವ ಮಾವು, ಬಾಳೆ, ಫೈನಾಪಲ್, ಕಲ್ಲಂಗಡಿ, ಪಪ್ಪಾಯ, ಈರುಳ್ಳಿ, ಟೊಮ್ಯಾಟೊ, ಹಸಿ ಮೆಣಸಿನಕಾಯಿ, ಕ್ಯಾಬೀಜ, ಆಲೂಗಡ್ಡೆ, ಶುಂಠಿ, ಒಣ ಮೆಣಸಿನಕಾಯಿ, ಪೆಪ್ಪರ್, ವೀಳ್ಯದೆಲೆ, ಬೆಳ್ಳುಳ್ಳಿ, ಅಡಿಕೆ, ತೆಂಗು, ಚೆಂಡು ಹೂವು, ಸುಗಂಧರಾಜ, ಸೇವಂತಿಗೆ, ಮಲ್ಲಿಗೆ, ಭತ್ತ, ಜೋಳ, ಶೇಂಗಾ, ಎಣ್ಣೆಕಾಳು, ಕಬ್ಬು ಹೀಗೆ ವಿವಿಧ ಬಗೆಯ ಹಣ್ಣು, ತರಕಾರಿ, ಸಾಂಬಾರ, ತೋಟಗಾರಿಕೆ, ಹೂವು ಮತ್ತು ಕೃಷಿ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಸಿಗಲಿದೆ. ಇಂಥ ಮಹತ್ವಾಕಾಂಕ್ಷೆಯ ಘಟಕಗಳ ಸ್ಥಾಪನೆಗೆ ಸಚಿವ ಸಂಪುಟದಲ್ಲಿಅನುಮೋದನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೆ ಶ್ರೀನಿವಾಸ ಮಾನೆಅಭಿನಂದನೆ ಸಲ್ಲಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 