ಕೋಳಿ ಸಾಕಾಣಿಕೆಗೆ ಸರ್ಕಾರದ ಸಹಾಯ ಸ್ವಾಗತಾರ್ಹ- ಕಾರ್ಯದರ್ಶಿ ಅಡಿವೆಪ್ಪ ಬಿಲಕುಂದಿ
Government assistance for poultry farming is welcome - Secretary Adiveppa Bilakundi
ಲೋಕದರ್ಶನ ವರದಿ
ಗೋಕಾಕ 13: ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡು ಮಾಂಸದ ಕೋಳಿ ಸಾಕಾಣಿಕೆ ಮಾಡುತ್ತಿರುವ ಸಂಘಟನೆಯ ಹೋರಾಟದ ಫಲವಾಗಿ ಕನಿಷ್ಠ ಪ್ರತಿ ಕೆಜಿಗೆ 10 ರೂ. ಸರ್ಕಾರ ನಿಗದಿ ಮಾಡಿದ್ದು ಸ್ವಾಗತಾರ್ಹವಾಗಿದೆ ಎಂದು ರಾಜ್ಯ ಸಹ ಕಾರ್ಯದರ್ಶಿ ಅಡಿವೆಪ್ಪ ಬಿಲಕುಂದಿ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೋಳಿ ಸಾಕಾಣಿಕೆದಾರರ ಕಷ್ಟ ನಷ್ಟಗಳ ಕುರಿತು ವಿವರ ನೀಡಿದ ಅವರು, ಕಂಪನಿ ಒಪ್ಪಂದದ ಮಾಂಸದ ಕೋಳಿ ಸಾಕಾಣಿಕೆ ನಿರ್ವಹಣಾ ವೆಚ್ಚ ದುಬಾರಿಯಾಗಿದ್ದು, ಲಾಭವಿಲ್ಲದೆ ಸಾವಿರಾರು ರೈತ ಕುಟುಂಬಗಳು ಹತ್ತಾರು ವರ್ಷದಿಂದ ಪ್ರತಿ ಕೆ ಜಿ ಗೆ 6ರೂ 25 ಪೈಸೆ ಕಂಪನಿಗಳಿಂದ ಪಡೆದು ನಷ್ಟ ಅನುಭವಿಸಿದ್ದರು. ರೈತರ ಒಕ್ಕಟ್ಟು ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಬಿವೃದ್ದಿ ಸಂಘದ ಹೋರಾಟಕ್ಕೆ ಜಯ ದೊರೆತಂತಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಇನ್ನೂ ಕೆಲವು ಬೇಡಿಕೆಗೆ ಒತ್ತಾಯಿಸಿ ಪಶುಪಾಲನಾ ಇಲಾಖೆ ಆಯುಕ್ತರಾದ ಶಿಲ್ಪಾ ನಾಗ ಅವರಿಗೆ ಮನವಿ ಸಲ್ಲಿಸಲಾಗುತ್ತಿದೆ ಹಾಗಾಗಿ ಕೋಳಿ ಸಾಕಾಣಿಕೆ ರೈತರು ಒಕ್ಕಟ್ಟಾಗಿ ಸಂಘಟನೆಯ ಮುಖಾಂತರ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು. ಬೇಡಿಕೆಗೊಳದ ಕನಿಷ್ಠ ಪ್ರತಿ ಕೆಜಿ ಗೆ 10 ರೂ. ನೀಡುವ ಬಗ್ಗೆ ಪಶುಪಾಲನಾ ಇಲಾಖೆಯ ಆದೇಶದ ಆಗಿದ್ದರೂ ಕೂಡ ಕೆಲವು ಗೊಂದಲ ಸ್ರಷ್ಟಿಸುತ್ತಿರುವ ಕಂಪನಿಗಳ ಮೇಲೆ ಸೂಕ್ತ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು.
ನಿರ್ವಹಣಾ ವೆಚ್ಚ ದುಬಾರಿಯಾಗಿರಿವುದರಿಂದ ಸರ್ಕಾರದಿಂದ ಪ್ರತಿ ಕೋಳಿ ಗೆ ರೂ 5 ರೂ ಗಳಂತೆ ಏಒಈ ಹಾಲಿನ ರೈತರ ಮಾದರಿಯಲ್ಲಿ ಪ್ರೋತ್ಸಾಹ ಧನವನ್ನು ನೇರವಾಗಿ ರೈತರ ಖಾತೆಗೆ ಒದಗಿಸಬೇಕು. ಕೋಳಿ ಸಾಕಾಣಿಕೆ ಒಂದು ಕೃಷಿಯ ಒಂದು ಅಂಗವಾಗಿದ್ದರಿಂದ ವಿದ್ಯುತ್ ನ್ನು ಉಚಿತವಾಗಿ ಪೂರೈಸಬೇಕು ಎಂದು ಅಗ್ರಹಿಸಿದರು.
ಕೋಳಿ ಸಾಕಾಣಿಕೆ ರೈತರಿಗೆ ನೀಡುತ್ತಿರುವ ಏಅಅ 3 ಲಕ್ಷದ ಸಾಲದ ಮಿತಿಯನ್ನು 10 ಲಕ್ಷಕ್ಕೆ ಏರಿಸಬೇಕೆಂದರು. ಆಅಅ ಬ್ಯಾಂಕನಿಂದ ಪ್ರತಿ ರೈತರಿಗೆ 10ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ನೀಡಬೇಕು. ಕಂಪನಿಯವರು ತಮಗೆ ಬಂದ ಲಾಭದ ಹಣದಲ್ಲಿ, ಕಂಪನಿಯವರು ವಿತರಿಸುತ್ತಿರುವ ಕೋಳಿ ಮರಿಗಳಿಗೆ ಇನ್ಶೂರೆನ್ಸ್ ಮಾಡಿಸಬೇಕು, ಹವಾಮಾನ ವೈಫರೀತ್ಯದಿಂದ ಕೋಳಿಗಳು ಸಾವನ್ನಪ್ಪಿದಾಗ ರೈತರ ಈಅಖ ಆದಾಯದಲ್ಲಿ ಕಡಿತಗೊಳಿಸಬಾರದು.
ಸ್ವಾಮಿನಾಥಾನ್ ಆಯೋಗದ ಸಿಪಾರಸ್ಸಿನಂತೆ ಕ್ರಮ ಕೈಗೊಂಡು ರೈತರನ್ನು ಆರ್ಥಿಕವಾಗಿ ಸದೃಡಗೊಳಿಸಬೇಕೆಂಬುದು. ಒತ್ತಾಯಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕೋಳಿ ಸಾಕಾಣಿಕೆಗೆ ನೂತನವಾಗಿ ಸಬ್ಸಿಡಿ ಯೋಜನೆಗನ್ನು ಜಾರಿಗೆ ತರಬೇಕು, ಇದರಿಂದ ಯುವಕರಿಗೆ ಉದ್ಯೋಗ ಮಾಡಲು ಪ್ರೋತ್ಸಾಹಿದಂತಾಗಿ ಉದ್ಯೋಗ ಸ್ರಷ್ಟಿಸಲು ಅನುಕೂಲವಾಗುತ್ತದೆ. ಹಾಗೂ ಮಾಂಸದ ಆಹಾರ ಉತ್ಪಾದನೆಗೆ ಒತ್ತು ಕೊಟ್ಟಂತೆ ಆಗುತ್ತದೆ ಅಂತಾ ಸಲಹೆ ನೀಡಿದರು.
ಅಷ್ಟೇ ಅಲ್ಲದೆ ರಾಜ್ಯದ ಎಲ್ಲಾ ರೈತರು ಒಕ್ಕಟ್ಟಾಗಿ ಕೋಳಿ ಸಾಕಾಣಿಕೆ ಸ್ಥಗಿತಗೊಳಿಸಿದರೆ ಮುಂದೆ ಮಾಂಸಾಹಾರ ಉತ್ಪಾದನೆ ಇಲ್ಲದೆ ಆಗಬಹುದಾದ ಸಮಸ್ಯೆಗಳಿಗೆ ಸರ್ಕಾರವೇ ಹೊಣೆಯಾಗುತ್ತದೆ ಅಂತಾ ಕಿಡಿಕರಿದರು. ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 