ಪಿಪಿಇ ಕಿಟ್‌ಗಳ ಸೀಮಿತ ರಫ್ತಿಗೆ ಸರ್ಕಾರ ಅನುಮತಿ

ನವದೆಹಲಿ, ಜೂ 29: ದೇಶೀಯ ಮಾರುಕಟ್ಟೆಯನ್ನು ಉತ್ತೇಜಿಸುವ ಸಲುವಾಗಿ ವೈಯಕ್ತಿಕ ರಕ್ಷಣೆಯ ಉಪಕರಣ (ಪಿಪಿಇ) ಕಿಟ್‌ನ ಸೀಮಿತ ರಫ್ತಿಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ವಿದೇಶಿ ವ್ಯಾಪಾರದ ನಿರ್ದೇಶನಾಲಯ ಸೋಮವಾರ ಈ ಕುರಿತು ಮಾಹಿತಿ ನೀಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯ ಕೋವಿಡ್‌-19 ಪಿಪಿಇ ರಫ್ತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದೆ. ಅಧಿಸೂಚನೆಯ ಪ್ರಕಾರ, ಈಗ ಡಿಜಿಎಪ್‌ಟಿ ತಿಂಗಳಿಗೆ 50 ಲಕ್ಷ ಪಿಪಿಇ ಸೂಟ್‌ಗಳನ್ನು ರಫ್ತು ಮಾಡಬಹುದು.ಆದರೆ, ಇದಕ್ಕೆ ಮುನ್ನ ರಫ್ತು ಪರವಾನಗಿಗೆ ಅರ್ಜಿ ಸಲ್ಲಿಸಬೇಕು. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಸರ್ಕಾರದ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಲಕ್ಷಾಂತರ ಪಿಪಿಇ ಕಿಟ್‌ ಉತ್ಪಾದನೆಯಾಗುತ್ತಿದ್ದರೂ, ಅದನ್ನು ರಫ್ತು ಮಾಡುವುದಕ್ಕೆ ಅವಕಾಶ ನೀಡಿಲ್ಲ ಎಂದು ಉತ್ಪಾದಕರು ಈ ಹಿಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.