ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಸಾಧನೆ ಅಭಿನಂದನಾ ಸನ್ಮಾನ
Government First Grade College students felicitated for their achievements
ರಾಣೆಬೆನ್ನೂರು 29: ಪದವಿ ಶಿಕ್ಷಣ ಮುಗಿದ ನಂತರ ಮುಂದೇನು ಎನ್ನುವ ಪ್ರಶ್ನೆ ಪ್ರತಿಯೊಬ್ಬರಲ್ಲಿ ಕಾಡುವುದು ಸಹಜ. ಅದಕ್ಕಾಗಿ ಶಿಕ್ಷಣ ಮುಗಿಯುವಷ್ಟರಲ್ಲಿ ಅದರೊಟ್ಟಿಗೆ ಭಾಶಾ ಜ್ಞಾನದ ಜೊತೆಗೆ ಮಾತನಾಡುವ ಜ್ಞಾನ ಸಂಪತ್ತು ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಇತರರಂತೆ ಉದ್ಯೋಗವನ್ನು ಪಡೆದು ಆರ್ಥಿಕ ಭದ್ರತೆಯನ್ನು ಹೊಂದಲು ಸಾಧ್ಯವಾಗುವುದು ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.
ಅವರು ನಗರ ಹೊರ ವಲಯದ ಹುಣಸಿಕಟ್ಟಿ ರಸ್ತೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಹಾವೇರಿ ಜಿಲ್ಲಾ ನಾತಕೋತ್ತರ ಕೇಂದ್ರ ಆಯೋಜಿಸಿದ್ದ2024-25 ಸಾಲಿನ ಶೈಕ್ಷಣಿಕ ಸಾಧಕ ಪ್ರತಿಭಾವಂತ ವಿದ್ಯಾರ್ಥಿಗಳ ಅಭಿನಂದನಾ ಗೌರವ ಸನ್ಮಾನ ಸಮಾರಂಭದಲ್ಲಿ ರಾಂಕ್ ವಿಜೇತರನ್ನು ಸನ್ಮಾನಿಸಿ ಅಭಿನಂದಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ಕೌಶಲ್ಯಕ್ಕೆ ಇರುವಷ್ಟು ಬೆಲೆ ಎಷ್ಟೇ ಪದವಿ ಪಡೆದವರೆಗೂ ಬಹುತೇಕವಾಗಿ ಇಲ್ಲ ಎನ್ನುವುದನ್ನು ವಾಸ್ತವಿಕ ಸಂಗತಿ. ಅದಕ್ಕಾಗಿ ಪದವಿ ಪಡೆದವರು ತಮ್ಮ ಆಕಾಂಕ್ಷೆ ಮತ್ತು ಅಭಿವ್ಯಕ್ತಿಯ ವೃತ್ತಿ ಜೀವನದಲ್ಲಿ ನಾನು ಏನಾಗಬೇಕು ಎನ್ನುವುದನ್ನು ತಮ್ಮಲ್ಲಿರುವ ಆಂತರಿಕ ಶಕ್ತಿಯಿಂದ ತಿಳಿದುಕೊಂಡರೆ ಅದರಲ್ಲಿ ಪರಿಪೂರ್ಣತೆ ಹೊಂದಲು ಸಾಧ್ಯವಾ ಗುವುದು ಎಂದರು. ಶೈಕ್ಷಣಿಕ ಸಾಧಕ
ರಾಂಕ್ ವಿಜೇತರಾದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ದ್ವಿತೀಯ ರಾಂಕ್ ನೇತ್ರಾವತಿ ನಾಯಕ್, ಕಿರಣ್ ಕುಮಾರ್ ಎಳಿಹೊಳೆ( ಪ್ರಥಮ) ಕಿರಣಾ ಎಸ್ ಚಳಗೇರಿ ( ದ್ವಿತೀಯ ) ಮತ್ತು ನಾಜಿಯಾ ಹರಿಹರ ( ತೃತಿಯ ) ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಿದರು. ಕಾಲೇಜು ಪ್ರಾಚಾರ್ಯ ರವಿಕುಮಾರ ನಾಯಕ್, ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾಕ್ಟರ್ ಎಲ್.ಎಮ್. ಪೂಜಾರ, ಕೊಟ್ರೇಶ್ ಬಳ್ಳೊಳ್ಳಿ, ರಾಜಶೇಖರ ಚಕ್ಕಿ, ಸೇರಿದಂತೆ ಮತ್ತಿತರರು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 