ಒಂಟೆಗಳ ಮಾರಣ ಹೋಮಕ್ಕೆ ಸರ್ಕಾರದ ಫರ್ಮಾನು.

ಸಿಡ್ನಿ, ಜ 8 ಕೋತಿಕಾಟ, ನಾಯಿ ಕಾಟ,ಕೇಳಿದ್ದಿರಿ , ನೋಡಿದ್ದೀರಿ ಆದರೆ ಒಂಟೆಗಳ ಕಾಟ ಎಂದಾದರೂ ಕೇಳಿದ್ದೀರಾ... ನೋಡಿದ್ದೀರಾ.!! ಕಾಡ್ಗಿಚ್ಚಿನ ನಂತರ ಆಸ್ಟ್ರೇಲಿಯ ಸರಕಾರ ಒಂಟೆಗಳ ಸಮಸ್ಯೆ ಎದುರಿಸುತ್ತಿದ್ದು, ಪರಿಣಾಮ ಒಂಟೆಗಳ ಕಾಟ ತಾಳದೇ, ಅವುಗಳ ಮಾರಣ ಹೋಮಕ್ಕೆ ಸರ್ಕಾರವೇ ಫರ್ಮಾನು ಹೊರಡಿಸಿದೆ. ವಿಪರೀತ ನೀರನ್ನು ಕುಡಿಯುವ ಮೂಲಕ ಜನರಿಗೆ ತೊಂದರೆ ಕೊಡುತ್ತಿರುವ ದೇಶದ ಸಾವಿರಾರು ಒಂಟೆಗಳನ್ನು ಸಾಯಿಸುವುದಕ್ಕೆ ಅಭಿಯಾನ ಕೈಗೊಳ್ಳಲೂ ಸರಕಾರ ನಿರ್ಧರಿಸಿದೆ ಎಂದರೆ ಅಲ್ಲಿನ ಪರಿಸ್ಥಿತಿ ಏನಾಗಿರಬಹುದು ಯೋಚಿಸಿ ನೋಡಿ.!!ಪರಿಣಾಮ ಮುಂದಿನ ಐದು ದಿನಗಳ ಕಾಲ 10,ಸಾವಿರ ಒಂಟೆಗಳ ಮಾರಣಹೋಮ ನಡೆಸಲು ಸರಕಾರ ಹೆಲಿಕಾಪ್ಟರ್ಗಳನ್ನು ಕಳುಹಿಸಿಕೊಡಲಿದೆ ಎಂದು ದಿ ಹಿಲ್ ಪತ್ರಿಕೆ ವರದಿ ಮಾಡಿದೆ.ವಿಪರೀತ ಸೆಖೆ ಹಾಗೂ ಅನಾನುಕೂಲ ವಾತಾವರಣದಿಂದ ತತ್ತರಿಸಿಹೋಗಿದ್ದೇವೆ. ನಮಗೆ ಅನಾರೋಗ್ಯವೂ ಕಾಡುತ್ತಿದೆ. ಈ ಮಧ್ಯೆ ಒಂಟೆಗಳು ಬೇಲಿ ಮುರಿದು ಮನೆಗಳಿಗೆ ನುಗ್ಗಿ ಏರ್ಕಂಡೀಶನ್ಗಳ ನೀರನ್ನು ಕುಡಿಯಲು ಪ್ರಯತ್ನಿಸುವೆ. ಒಂಟೆಗಳಿಂದಾಗಿ ಕನಿಪಿ ಸಮುದಾಯ ತೀವ್ರ ತೊಂದರೆ ಅನುಭವಿಸುತ್ತಿದೆ ಎಂದು ಆಸ್ಟ್ರೇಲಿಯದ ಮೂಲ ನಿವಾಸಿ ಸಮುದಾಯದ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯೆ ಮರಿಟಾ ಬೇಕರ್ ಸರಕಾರಕ್ಕೆ ದೂರು ಸಲ್ಲಿಸಿದ್ದಾರೆ. ಕಳೆದ ವರ್ಷದ ನವೆಂಬರ್ನಿಂದಲೂ ಕಾಡ್ಗಿಚ್ಚಿನ ಸಮಸ್ಯೆಯಿಂದ ತತ್ತರಿಸಿರುವ ಆಸ್ಟ್ರೇಲಿಯ ಇದೀಗ ಒಂಟೆಗಳನ್ನು ಕೊಲ್ಲಲು ಯೋಜನೆ ಹಾಕಿಕೊಂಡಿದೆ. ದೇಶದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನಿಂದ 20ಕ್ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದು, ಸಾವಿರಾರು ಪ್ರಾಣಿಗಳನ್ನು ಬೇರಡೆಗೆ ಸ್ಥಳಾಂತರಿಸಲಾಗಿದೆ.