ಬೆಳಗಾವಿ ಪತ್ರಕರ್ತರ ಸಂಘದಿಂದ ಒಳ್ಳೆಯ ಕೆಲಸ: ಡಾ. ಪ್ರಭಾಕರ ಕೋರೆ

ಬೆಳಗಾವಿ ಪತ್ರಕರ್ತರ ಸಂಘದಿಂದ ಒಳ್ಳೆಯ ಕೆಲಸ: ಡಾ. ಪ್ರಭಾಕರ ಕೋರೆ Good work by Belgaum Journalists Association: Dr. Prabhakar Kore

ಬೆಳಗಾವಿ ಪತ್ರಕರ್ತರ ಸಂಘದಿಂದ ಒಳ್ಳೆಯ ಕೆಲಸ: ಡಾ. ಪ್ರಭಾಕರ ಕೋರೆ 

ಬೆಳಗಾವಿ 09: ಬೆಳಗಾವಿ ಪತ್ರಕರ್ತರ ಸಂಘ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಪತ್ರಕರ್ತರಿಗೆ ಸನ್ಮಾನ ಮಾಡುವುದನ್ನು ನೋಡಿದ್ದೇನೆ.ಆದರೆ ಪತ್ರಕರ್ತರ ಮಕ್ಕಳನ್ನು ಸನ್ಮಾನಿಸುವುದು ಖುಷಿ ತಂದಿದೆ. ಸಂಘದ ಉತ್ತಮ ಕೆಲಸ ಮಾಡಲಾಗಿದೆ. ಕಲಿಕೆಯಲ್ಲಿ ಸಾಧನೆ ಮಾಡಿದ್ದು ಖುಷಿಯಾಗಿದೆ. ಆದರೆ... ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಸಮಾಜದಲ್ಲಿ ಪತ್ರಿಕೋದ್ಯಮ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಹೇಳಿದರು.  

ಅವರು ನಗರದ ಎಸ್‌.ಜಿ.ಬಾಳೇಕುಂದ್ರಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ದಿ. 9ರಂದು ಹಮ್ಮಿಕೊಳ್ಳಲಾಗಿದ್ದ ವಿಶಿಷ್ಟ ಸಾಧನೆಗೈದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

ಶಾಸಕ ಅಭಯ ಪಾಟೀಲ ಅವರು ಮಾತನಾಡಿ ಪತ್ರಕರ್ತರ ಮಕ್ಕಳಿಗೆ ಪ್ರಶಸ್ತಿ ಕೊಡುವ ಕಾರ್ಯಕ್ರಮ ಮುಂದುವರೆಯಲಿ.. ನಿಮ್ಮ ಭವಿಷ್ಯ ಉಜ್ವಲಗೊಳಿಹುವ ಮೂಲಕ ಸಾಧನೆ ಮಾಡಬೇಕು. ನಿಮ್ಮ ಸಂಸ್ಕಾರ ಮರೆಯಬಾರದು. ತಂದೆ ತಾಯಿಗೆ ತೊಂದರೆ ಮಾಡಬಾರದು. ವಿದ್ಯಾರ್ಥಿಗಳು ದಾರಿ ತಪ್ಪಬಾರದು. ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. ಮಕ್ಕಳು ದಾರಿ ತಪ್ಪದಂತೆ ನಿಗಾ ವಹಿಸಬೇಕು. ಪತ್ರಕರ್ತರು ಕುಟುಂಬಕ್ಕೆ ಸಮಯ ಕೊಡಬೇಕು. ಪತ್ರಕರ್ತರಿಗಾಗಿ ಸೌಲಭ್ಯ ಒದಗಿಸಲು ಬದ್ಧನಾಗಿದ್ದೇನೆ. ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರವೂ ಬಹಳವಾಗಿದೆ ಎಂದು ಹೇಳಿದರು.  

ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ ತಮ್ಮ ಕುಟುಂಬ ನಮ್ಮ ದೇಶದ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು. ಸಾಧನೆ ಮಾಡುವ ಮೂಲಕ ಕೀರ್ತೆ ತರಬೇಕು.  ಕಠಿಣ ಪರಿಶ್ರಮದೊಂದಿಗೆ ಶಿಸ್ತು ಬೆಳೆಸಿಕೊಳ್ಳಬೇಕು.  ಬಾ.ಪ್ರಭಾಕರ ಕೋರೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದ್ದಾರೆ. ಶಿಕ್ಷಣಕ್ಕಾಗಿಯೇ ಅವರು ತಮ್ಮ ಜೀವನವನ್ಪು ಮುಡುಪಾಗಿಟ್ಟಿದ್ದಾರೆ. ಒಬ್ಬರೇ ಹೀಗೆ ದೇಶ, ವಿದೇಶದಲ್ಲಿಯೂ ಕ್ರಾಂತಿ ಮಾಡಿದ್ದಾರೆ. ಅವರ ಸಾಧನೆ ಮಾಡಲು ಯಾರಿಗೂ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.   

ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬ್ ರಾವ್ ಬೋರಸೆ ಅವರು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಮಾಡಿದ್ದು ವಿಶೇಷ. ನೀವೆಲ್ಲರೂ ಮಹಾನ್ ಸಾಧಕರಾಗಬೇಕು ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಮೇಯರ್ ಮಂಗೇಶ ಪವಾರ್ ಮಾತನಾಡಿ ಪತ್ರಕರ್ತರು ಕುಟುಂಬಕ್ಕೆ ಸಮಯ ಕೊಡಬೇಕು. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಂತಸ ಸಂಗತಿ. ಇದು ಮುಂದುವರೆಯಲಿ ಎಂದರು.  

ಉಪಮೇಯರ್ ವಾಣಿ ವಿಲಾಸ ಜೋಶಿ ಮಾತನಾಡಿ ಇಂತಹ ಕಾರ್ಯಕ್ರಮಗಳು ಮುಂದುವರೆಯಲಿ. ವಿದ್ಯಾರ್ಥಿಗಳು ಸಾಧನೆ ಮಾಡಬೇಕು. ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರ ಬಹಳ ಮುಖ್ಯವಾಗಿದೆ. ಮುಂದು ಕೂಡ ಸಹಕಾರ ಇರಲಿ ಎಂದು ಆಶಿಸಿದರು. ಸುನೀತಾ ದೇಸಾಯಿ ನಿರೂಪಿಸಿದರು. ರವೀಂದ್ರ ಉಪ್ಪಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಶೈಲ ಮಠದ ಸ್ವಾಗತಿಸಿದರು.