ಕಾಮಗಾರಿಗಳಲ್ಲಿ ಉತ್ತಮ ಗುಣಮಟ್ಟ ಸುಸ್ಥಿರತೆ ಸಾಧಿಸಲು ಸಾಧ್ಯ: ಶಿರೀನ ನದಾಫ್
ಬೆಳಗಾವಿ, 24: ಬೆಳಗಾವಿ ಸ್ಮಾರ್ಟಸಿಟಿ ಲಿಮಿಟೆಡ್ನ ತಾಂತ್ರಿಕ ಸಿಬ್ಬಂದಿಗಳಿಗೆ ಪಿಎಂಸಿಯ ಇಂಜಿನೀಯರುಗಳಿಗೆ ಮತ್ತು ಗುತ್ತಿಗೆದಾರರು ಮತ್ತು ಅವರ ಇಂಜಿನೀಯರುಗಳಿಗೆ ಹಮ್ಮಿಕೊಂಡ "ಗುಣಮಟ್ಟ ನಿಯಂತ್ರಣ"ಕುರಿತು ಒಂದು ದಿನದ ಕಾಯರ್ಾಗಾರವನ್ನು ಉದ್ಘಾಟಿಸಿ ಬೆಳಗಾವಿಯ ಸ್ಮಾರ್ಟಸಿಟಿ ಯೋಜನೆಯ ಕಾಮಗಾರಿಗಳಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಂಡರೆ ಸುಸ್ಥಿರತೆ ಸಾಧಿಸಲು ಸಾಧ್ಯವೆಂದು ಬೆಳಗಾವಿ ಸ್ಮಾರ್ಟಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇ ಶಕಿ ಶಿರೀನ ನದಾಫ್ ಮಾತನಾಡಿದರು.
ಇಂಜಿನೀಯರುಗಳಿಗೆ ಗುಣಮಟ್ಟವನ್ನು ಹೇಗೆ ಕಾಯ್ದುಕೊಳ್ಳಬೇಕೆಂದು ತಿಳಿದುಕೊಳ್ಳುವುದು ಅತೀ ಅವಶ್ಯವಾಗಿದೆ. ಆದ್ದರಿಂದ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಸಂಬಂಧಿಸಿದ ಇಂಜಿನೀಯರುಗಳು ಕಾರ್ಯ ಸ್ಥಳದಲ್ಲಿದ್ದು ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ ಮತ್ತು ಉತ್ತಮ ಗುಣಮಟ್ಟದ ಕಾಮಗಾರಿಗಳಿಂದ ಸುಸ್ಥಿರತೆ ಸಾಧಿಸಲು ಸಾಧ್ಯವಾಗುತ್ತದೆ. ಆದ್ದರಿಂದಲೇ ಈ ಕಾರ್ಯಾ ಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಬೆಳಗಾವಿ ಸ್ಮಾರ್ಟಸಿಟಿ ಪ್ರಧಾನ ವ್ಯವಸ್ಥಾಪಕ ಎಂ.ನಾರಾಯಣ ಅವರು ಮಾತನಾಡಿ ಇಂಜಿನೀಯರುಗಳಿಗೆ ಗುಣಮಟ್ಟ ಕಾಯ್ದುಕೊಳ್ಳುವಿಕೆಯ ಪರೀಕ್ಷೆಗಳು, ತಂತ್ರಗಳು ಅದರ ಜ್ಞಾನ ಬಳಕೆಯ ತಂತ್ರಗಳ ಬಗ್ಗೆ ಜ್ಞಾನವಿರುವುದು ಅತಿಅವಶ್ಯವೆಂದು ತಿಳಿಸಿದರು.
ನಂತರ ನಡೆದ ಕಾಯರ್ಾಗಾರದಲ್ಲಿ ಎಂ.ನಾರಾಯಣ ಅವರು ರಸ್ತೆಯ ಗುಣಮಟ್ಟ, ಕಾಂಕ್ರೇಟ್ನ್ ಗುಣಮಟ್ಟ, ಕಟ್ಟಡದ ಗುಣಮಟ್ಟ ಹಾಗೂ ಇತರೆ ಸಿವಿಲ್ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಹೇಗೆ ಪರೀಕ್ಷಿಸಬೇಕೆಂದು ವಿವರಿಸಿದರು.
ವೇದಿಕೆಯಲ್ಲಿ ಕಾರ್ಯಪಾಲಕ ಅಭಿಯಂತರರಾದ ಅಜೀತಕುಮಾರ ಪಾಟೀಲ, ಜಂಟಿ ವ್ಯವಸ್ಥಾಪಕ ನಿದರ್ೇಶಕಿ ಅರ್ಚನಾಕುಲಕರ್ಣಿ ಉಪಸ್ಥಿತರಿದ್ದರು.
ಕಾಯರ್ಾಗಾರದಲ್ಲಿ ಬೆಳಗಾವಿ ಸ್ಮಾರ್ಟ ಸಿಟಿ ಲಿಮಿಟೆಡ್ನ ತಾಂತ್ರಿಕ ಶಾಖೆಯ ಎಲ್ಲ ಅಭಿಯಂತರರುಗಳು, ಪಿಎಂಸಿಯ ತಂಡದ ನಾಯಕರು, ಇಂಜಿನೀಯರುಗಳು, ಗುತ್ತಿಗೆದಾರರು ಮತ್ತು ಅವರ ಇಂಜಿನೀಯರುಗಳು ಹಾಜರಿದ್ದರು. ಪ್ರಕಾಶ ಸಿ.ಕೋಷ್ಟಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 