ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯ ವಾಗಿದೆ: ಹನುಮೇಶ ಬಾರ್ ಕೇರ್

ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯ ವಾಗಿದೆ: ಹನುಮೇಶ ಬಾರ್ ಕೇರ್   Good quality education for children is the need of the hour: Hanumesh Bar Care

ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯ ವಾಗಿದೆ: ಹನುಮೇಶ ಬಾರ್ ಕೇರ್   

ಕೊಪ್ಪಳ 11: ಇಂದಿನ ಮಕ್ಕಳೇ ಈ ನಾಡಿನ ಭಾವಿ ಪ್ರಜೆಗಳಾಗಿದ್ದು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು ಯುವ ಉದ್ಯಮಿ ಸಮಾಜ ಸೇವಕ ಗಿಣಿಗೇರಿಯ  ಯುವ ನಾಯಕ ಹನುಮೇಶ್ ಬಾರಕೇರ ರವರು ಹೇಳಿದರು, ಅವರು ನಗರದ ಮಿಲ್ಲತ್ ಪಬ್ಲಿಕ್ ಶಾಲೆ ಆವರಣದಲ್ಲಿ  ಶಾಲಾ ಮಕ್ಕಳಿಂದ ಏರಿ​‍್ಡಸಿದ ಸಂತೆಮೇಳ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು,ಮುಂದುವರೆದು ಮಾತನಾಡಿ ಮಕ್ಕಳ ಭವಿಷ್ಯ ಉಜ್ವಲ ಗೊಳಿಸುವ ಜವಾಬ್ದಾರಿ ಶಿಕ್ಷಕರಷ್ಟೇ ಅಲ್ಲ ಪಾಲಕರ ಮೇಲೆ ಕೂಡ ಇದೆ ಪಾಲಕರು ಮತ್ತು ಶಿಕ್ಷಕರು ಸೇರಿ ಮಕ್ಕಳ ಭವಿಷ್ಯ ರೂಪಿಸಬೇಕು ಅಂದಾಗ ಮಾತ್ರ ಒಬ್ಬ ಉತ್ತಮ ನಾಗರಿಕರನ್ನಾಗಿ ವಿದ್ಯಾರ್ಥಿ ಯುವಕರಿಗೆ ಬೆಳೆಸಲು ಸಾಧ್ಯ ಹೋಗುತ್ತದೆ ಎಂದು ಅಭಿಪ್ರಾಯಪಟ್ಟರುಮುಂದುವರೆದು ಮಾತನಾಡಿ ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಯಲು ಈ ನೂತನ ಮಾದರಿಯ ಸಂತೆ ಮೇಳ ಕಾರ್ಯಕ್ರಮ ಅತ್ಯಂತ ಮಹತ್ವ ಪಡೆದುಕೊಂಡಿದೆ ಎಂದು ಗಿಣಿಗೇರಿಯ ಉದ್ಯಮಿ ಯುವ ನಾಯಕ ಸಮಾಜ ಸೇವಕ ಹನುಮೇಶ್  ಬಾರಕೇರ್ ಹೇಳಿದರು, ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ರವರು  ಶಾಲಾ ಮಕ್ಕಳಿಂದ ಏರಿ​‍್ಡಸಿದ  ಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕೆ  ಚಾಲನೆ ನೀಡಿ  ಮಾತನಾಡಿದರು, ಸಮಾರಂಭದ ಅಧ್ಯಕ್ಷತೆಯನ್ನು ಮಿಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಧ್ಯಕ್ಷ  ಸೈಯದ್ ಗೌಸ್ ಪಾಷಾ ಖಾಜಿ ವಹಿಸಿದ್ದರು, ಸಮಾರಂಭದಲ್ಲಿ ಸಮಾಜ ಸೇವಕ ಲ್ಯಾಂಡ್ ಡೆವಲೋಪರ್ ಶಫೀಕ್ ಅಹಮದ್ ದಾಗ ದಾರ್, ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ, ಅಂಜುಮನ್ ಕಮಿಟಿ ಅಧ್ಯಕ್ಷ ಎಂ ಡಿ ಆಸಿಫ್ ಕರ್ಕಿಹಳ್ಳಿ, ಪಾಲಕರ ಪ್ರತಿನಿಧಿ  ಫತಹೇ ಸಾಬ್ ಚುಟ್ಟದ್ ಯುವ ನಾಯಕ ಸಿರಾಜ್ ಲಾಠಿ ಮತ್ತು ಶಾಲೆಯ ಸಂಚಾಲಕರುಗಳಾದ ಅಬ್ದುಲ್ ಅಜೀಜ್ ಮಾನ್ವಿ ಕರ್ ಹಾಗೂ ಸೈಯದ್ ಇಮಾಮ ಹುಸೇನ್ ಸಿಂದೋಗಿ, ಮುಖ್ಯ ಶಿಕ್ಷಕ ಮೊಹಮ್ಮದ್ ಅಜೀಜ್ ರವಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.